ಸಂಕಷ್ಟಿಯ ದಿನ ಮಾಡುವ ಈ ತಪ್ಪುಗಳು ವಿಘ್ನ ವಿನಾಶಕನ ಮುನಿಸಿಗೆ ಕಾರಣವಾಗಬಹುದು, ಎಚ್ಚರ!

Sankashti Chaturth: ಹಿಂದೂ ಧರ್ಮದಲ್ಲಿ ಯಾವುದೇ ವಿಶೇಷ ಸಂದರ್ಭಗಳಲ್ಲಿ ವಿಘ್ನ ವಿನಾಶಕ ಗಣೇಶನಿಗೆ ಮೊದಲ ಪೂಜೆಯನ್ನು ಅರ್ಪಿಸಲಾಗುತ್ತದೆ. ಇದಲ್ಲದೆ, ಚೌತಿ ಅಥವಾ ಸಂಕಷ್ಟಹರ ಚತುರ್ಥಿಯನ್ನು ಗಣೇಶನ ಪೂಜೆಗೆ ತುಂಬಾ ವಿಶೇಷವಾದ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಮಾಡುವ ಕೆಲವು ತಪ್ಪುಗಳು ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : May 8, 2023, 12:39 PM IST
  • ಸಂಕಷ್ಟಹರ ಚತುರ್ಥಿಯ ದಿನ ನಿಯಮಾನುಸಾರ ಗಣೇಶನನ್ನು ಪೂಜಿಸಿ, ಆರಾಧಿಸುವುದರಿಂದ ಮನೋಕಾಮನೆಗಳು ಆದಷ್ಟು ಬೇಗ ಈಡೇರುತ್ತವೆ
  • ಶಾಸ್ತ್ರಗಳ ಪ್ರಕಾರ, ಗೊತ್ತೋ/ ಗೊತ್ತಿಲ್ಲದೆಯೋ ಸಂಕಷ್ಟಿ ಚತುರ್ಥಿಯ ದಿನ ಕೆಲವು ತಪ್ಪುಗಳನ್ನು ಮಾಡುವುದು ಜೀವನದಲ್ಲಿ ಕೆಟ್ಟ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ.
ಸಂಕಷ್ಟಿಯ ದಿನ ಮಾಡುವ ಈ ತಪ್ಪುಗಳು ವಿಘ್ನ ವಿನಾಶಕನ ಮುನಿಸಿಗೆ ಕಾರಣವಾಗಬಹುದು, ಎಚ್ಚರ!  title=

Sankashti Chaturth Vrata Niyam: ಹಿಂದೂ ಧರ್ಮದಲ್ಲಿ ಗಣೇಶನ ಆರಾಧನೆಗೆ ವಿಶೇಷ ಮಹತ್ವವಿದೆ. ವಿಘ್ನಗಳ ವಿನಾಶಕ ಎಂದು ಕರೆಯಲ್ಪಡುವ ಗಣೇಶನನ್ನು ಮೆಚ್ಚಿಸಲು ಸಂಕಷ್ಟಹರ ಚತುರ್ಥಿಯನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ, ಸಂಕಷ್ಟಹರ ಚತುರ್ಥಿಯ ದಿನ ನಿಯಮಾನುಸಾರ ಗಣೇಶನನ್ನು ಪೂಜಿಸಿ, ಆರಾಧಿಸುವುದರಿಂದ ಮನೋಕಾಮನೆಗಳು ಆದಷ್ಟು ಬೇಗ ಈಡೇರುತ್ತವೆ ಎಂಬ ನಂಬಿಕೆಯೂ ಇದೆ. ಆದರೆ, ಸಂಕಷ್ಟಿಯ ದಿನ ನಿಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಗಣಪತಿಯ ಮುನಿಸಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ? 

ಧರ್ಮ ಗ್ರಂಥಗಳ ಪ್ರಕಾರ, ಸಂಕಷ್ಟಿ ಚತುರ್ಥಿಯ ದಿನ ವಿಘ್ನ ವಿನಾಶಕ ಗಣೇಶನ ಜೊತೆಗೆ ಚತುರ್ಥಿ ದೇವಿಯನ್ನೂ ಕೂಡ ಪೂಜಿಸಲಾಗುತ್ತದೆ. ಸಂಕಷ್ಟಿ ಚತುರ್ಥಿಯ ದಿನ ಉಪವಾಸ ವ್ರತವನ್ನು ಆಚರಿಸುವುದು ವಾಡಿಕೆ. 

ಸಂಕಷ್ಟ ಚತುರ್ಥಿ ಮಹತ್ವ: 
ಹಿಂದೂ ಧರ್ಮದಲ್ಲಿ, ಗಣಪತಿಯನ್ನು ವಿಘ್ನ ವಿನಾಶಕ ಎಂದು ನಂಬಲಾಗಿದೆ. ಹಾಗಾಗಿಯೇ, ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮೊದಲು ಗಣೇಶನಿಗೆ ಮೊದಲ ಪೂಜೆಯನ್ನು ಅರ್ಪಿಸಲಾಗುತ್ತದೆ. ಅದರಲ್ಲೂ ಸಂಕಷ್ಟ ಚತುರ್ಥಿಯ  ದಿನ ಉಪವಾಸ ವ್ರತ ಆಚರಿಸಿ, ಭಕ್ತಿ ಭಾವದಿಂದ ಗಣೇಶನನ್ನು ಆರಾಧನೆ ಮಾಡುವುದರಿಂದ ಮನೆಯಲ್ಲಿ ತಲೆದೋರಿರುವ ಬಿಕ್ಕಟ್ಟುಗಳು ನಾಶವಾಗುತ್ತವೆ ಎಂಬುದು ನಂಬಿಕೆಯೂ ಇದೆ.

ಇದನ್ನೂ ಓದಿ-  ಮುಂದಿನ ಒಂದೂವರೆ ತಿಂಗಳು ಈ ರಾಶಿಯವರ ಅದೃಷ್ಟ ತಡೆಯುವವರೇ ಇಲ್ಲ ! ಇಟ್ಟ ಹೆಜ್ಜೆಗೆ ಸೋಲೇ ಇಲ್ಲ

ಧರ್ಮ ಗ್ರಂಥಗಳ ಪ್ರಕಾರ, ಸಂಕಷ್ಟ ಚತುರ್ಥಿಯ ದಿನ ಶ್ರದ್ಧಾ ಭಕ್ತಿಯಿಂದ ಗಣೇಶನನ್ನು ಸ್ಮರಿಸಿ ಉಪವಾಸ ವ್ರತವನ್ನು ಆಚರಿಸುವುದರಿಂದ ಇಷ್ಟಾರ್ಥ ಸಿದ್ಧಿ ಆಗುತ್ತದೆ. ಜೀವನದಲ್ಲಿ ಯಾವುದೇ ಕೆಲಸದಲ್ಲಿ ತಲೆದೋರಿರುವ ಅಡೆತಡೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಸಂಕಷ್ಟಿ ಚತುರ್ಥಿಯಂದು ಕೆಲವು ವಿಷಯಗಳ ಬಗ್ಗೆ ವಿಶೇಷವಾದ ಕಾಳಜಿ ವಹಿಸುವುದು ಕೂಡ ಅತ್ಯಗತ್ಯ. ಇಲ್ಲವಾದಲ್ಲಿ, ನೀವು ಗಣೇಶನ ಕೋಪಕ್ಕೂ ತುತ್ತಾಗಬಹುದು. 

ಶಾಸ್ತ್ರಗಳ ಪ್ರಕಾರ, ಗೊತ್ತೋ/ ಗೊತ್ತಿಲ್ಲದೆಯೋ ಸಂಕಷ್ಟಿ ಚತುರ್ಥಿಯ ದಿನ ಕೆಲವು ತಪ್ಪುಗಳನ್ನು ಮಾಡುವುದು ಜೀವನದಲ್ಲಿ ಕೆಟ್ಟ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ. 

ಸಂಕಷ್ಟಹರ ಚತುರ್ಥಿ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ:
* ಕಪ್ಪು ಬಟ್ಟೆ ಧರಿಸದಿರಿ: 

ಸಂಕಷ್ಟಿ ಚತುರ್ಥಿ ದಿನ ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ಮಂಗಳಕರ ಎಂದು ಹೇಳಲಾಗುವುದಿಲ್ಲ. 

* ಗಣೇಶನ ಪೂಜೆಯಲ್ಲಿ ತುಳಸಿ ಬಳಕೆ ನಿಷೇಧ: 
ಸಂಕಷ್ಟಹರ ಚತುರ್ಥಿಯ ದಿನ ಅಪ್ಪಿತಪ್ಪಿಯೂ ಕೂಡ ಪೂಜೆಗೆ ತುಳಸಿಯನ್ನು ಬಳಸಲೇಬಾರದು. ವಾಸ್ತವವಾಗಿ, ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನವನ್ನು ಪಡೆದಿರುವ ತುಳಸಿ ಸಸ್ಯವು ಗಣೇಶನಿಂದ ಶಾಪಗ್ರಸ್ತವಾದ ಸಸ್ಯವಾಗಿದೆ. ಹಾಗಾಗಿಯೇ, ಗಣೇಶನ ಪೂಜೆಯಲ್ಲಿ ಅದರಲ್ಲಿಯೂ, ಸಂಕಷ್ಟಹರ ವ್ರತದ ಗಣಪನ ಪೂಜೆಯಲ್ಲಿ ತುಳಸಿ ಬಳಕೆಯನ್ನು ನಿಷೇಧಿಸಲಾಗಿದೆ. 

ಇದನ್ನೂ ಓದಿ- Mangal Gochar 2023: ಮೇ 10ರಿಂದ ಈ 4 ರಾಶಿಯವರಿಗೆ ಪ್ರಗತಿಯ ಜೊತೆಗೆ ಧನಲಾಭವಾಗಲಿದೆ!

* ಈ ಆಹಾರಗಳನ್ನು ಸೇವಿಸಬೇಡಿ:
ಸಂಕಷ್ಟಿ ಚತುರ್ಥಿಯ ದಿನ ಉಪವಾಸ ವ್ರತಾಚರಣೆ ಬಳಿಕ ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಸಿಹಿಗೆಣಸು, ಹಲಸು, ಬೆಳ್ಳುಳ್ಳಿ ಮತ್ತು ಈರುಳ್ಳಿ ಇತ್ಯಾದಿಗಳ ಸೇವನೆಯನ್ನು ನಿಷೇಧಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಕಷ್ಟಿ ಚತುರ್ಥಿಯಂದು ಈ ಆಹಾರಗಳ ಸೇವನೆಯಿಂದ ಉಪವಾಸದ ಸಂಪೂರ್ಣ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. 

* ಚಂದ್ರ ದರ್ಶನ: 
ಪ್ರತಿ ಮಾಸದಲ್ಲಿ ಬರುವ ಸಂಕಷ್ಟಿ ಚತುರ್ಥಿಯ ದಿನ ಚಂದ್ರನ ದರ್ಶನ ಮಾಡಿದ ಬಳಿಕವಷ್ಟೇ ಆಹಾರವನ್ನು ಸೇವಿಸಿ. ಇಲ್ಲದಿದ್ದರೆ ನಿಮ್ಮ ಪೂಜೆಯ ಪೂರ್ಣ ಫಲ ನಿಮಗೆ ದೊರೆಯುವುದಿಲ್ಲ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News