Madappa Betta: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೇಡಗಂಪಣ ಅರ್ಚಕರಿಂದ ಶ್ರಾವಣ ಮಾಸದ 108 ಕುಂಭೋತ್ಸವ ಸೇವೆ  ಸೋಮವಾರ ಭಕ್ತರು ಶ್ರದ್ಧಾಭಕ್ತಿಯಿಂದ ನೆರೆವೇರಿಸಿದರು.


COMMERCIAL BREAK
SCROLL TO CONTINUE READING

ಶ್ರೀ ಮಲೆ ಮಹದೇಶ್ವರ ಬೆಟ್ಟದ (Male Mahadeshwara Hills) ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ  ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳರವರ  ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮಜ್ಜನಬಾವಿಯಿಂದ 108 ಕುಂಭಗಳನ್ನು ಹೊತ್ತು ತಂದು ಹೋಮ ನೆರವೇರಿಸಿ ಸ್ವಾಮಿಗೆ ಅಭಿಷೇಕ ನೆರವೇರಿಸಿದರು.


ಇದರೊಟ್ಟಿಗೆ, 108 ಎಳನೀರುಗಳಿಂದಲೂ ಅಭಿಷೇಕ ಮಾಡುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ನೆರವೇರಿತು.


ಇದನ್ನೂ ಓದಿ- Weekly Horoscope: ಶ್ರಾವಣ ಮಾಸದ ಮೊದಲ ವಾರ ದ್ವಾದಶ ರಾಶಿಗಳ ಫಲಾಫಲ


ದೇವಾಲಯದಲ್ಲಿ ಮೊದಲಪೂಜೆ ಆರಂಭವಾಗಿದ್ದು, ಇದರ ಜೊತೆಗೆ ದೇವಾಲಯದ ರಾಜಗೋಪುರದ ಮುಂದೆ ಮಜ್ಜನ ಬಾವಿಗೆ ತೆರಳಿ ಗಂಗೆ ಪೂಜೆ ಸೇರಿ, ವಿಶೇಷ ಪೂಜೆ ಕೈಗೊಂಡರು. ಬಳಿಕ ವಾದ್ಯಮೇಳ, ಛತ್ರಿ, ಚಾಮರಗಳೊಂದಿಗೆ 108 ಅರ್ಚಕರು ಕುಂಭ ಹೊತ್ತು ದೇವಾಲಯದ ಹೊರ ಹಾಗೂ ಒಳ ಆವರಣದಲ್ಲಿ ಮೆರವಣಿಗೆ ಮಾಡಿ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದರು.


ಪೂಜೆ ನಡೆದ ನಂತರ ಕುಂಬಾಭಿಷೇಕ (Kumbabhisheka) ನೆರವೇರಿತು, ಪ್ರತಿದಿನ ದೇವರಿಗೆ 12 ಕುಂಬಾಭಿಷೇಕ, ಲಕ್ಷಬಿಲ್ವಾರ್ಚನೆ ಪೂಜೆ ಸಲ್ಲಿಕೆಯಾಗಲಿದೆ. ಶ್ರಾವಣ ಮಾಸದ ಕೊನೆಯ ದಿನ ಮತ್ತೆ 108 ಕುಂಬಾಭಿಷೇಕ ಜರುಗಲಿದೆ.


ದೇವಾಲಯದಲ್ಲಿ ತ್ರಿಕಾಲ ಪೂಜೆ ಪ್ರಾರಂಭವಾಗಿದ್ದು, ಬೆಳಿಗ್ಗೆ 4ರಿಂದ ಬೆಳಿಗ್ಗೆ 6ರವರೆಗೆ ಮೊದಲ ಪೂಜೆ, ಅಭಿಷೇಕ, ಬಿಲ್ವಾರ್ಚನೆ, ಆರತಿ, 10.30ಕ್ಕೆ ಎರಡನೇ ಪೂಜೆ, ಸಂಜೆ 6.30ರಿಂದ ರಾತ್ರಿ 8.30ರವರೆಗೆ ಮೂರನೇ ಪೂಜೆ ಜರುಗುತ್ತಿದೆ. 


ಇದನ್ನೂ ಓದಿ- ಆ ಸುದ್ದಿ ಸುಳ್ಳು.. ನಂಬಬೇಡಿ.. ತಿರುಮಲ ಭಕ್ತರಿಗೆ ಟಿಟಿಡಿ ಮನವಿ..!


ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಶ್ರಾವಣ_ಮಾಸದ (Shravana Masa) ಮೊದಲ ದಿನವಾದ  ಬೇಡಗಂಪಣ ಅರ್ಚಕರಿಂದ ಶ್ರೀ ಸ್ವಾಮಿಗೆ 108 ಕುಂಭಾಭಿಷೇಕ ಪ್ರಯುಕ್ತ ಗಂಗಾಪೂಜೆ. ಗಣಪತಿಪೂಜೆ ಪುಣ್ಯಾಹ, ಪಂಚ ಕಳಶ, ನವಗ್ರಹ ಸಮೇತ ಮಹಾಮೃತ್ಯುಂಜಯ, ಅಷ್ಟದಿಕ್ಷಾಲಕರು. ಸಪ್ತ ಸಭಾ ದೇವತೆಗಳು ಕಳಸ ಉಮಾಮಹೇಶ್ವರ ಕಳಸ ಆವಾಹನೆ, ಹೋಮಹವನ ಪೂಜೆಯನ್ನು 
ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು  ರಘು  ರವರ ನೇತೃತ್ವದಲ್ಲಿ, ಬೇಡಗಂಪಣ ಅರ್ಚಕರ ವತಿಯಿಂದ, ಶ್ರೀ ಮಲೆ ಮಹದೇಶ್ವರ ಸ್ವಾಮಿ  ಸನ್ನಿಧಾನದ ಆಗಮಿಕರಾದ ಕರವೀರಸ್ವಾಮಿ ಮತ್ತು ಗುಂಡೆಗಾಲದ ಮಲ್ಲಿಕಾರ್ಜುನ ಸ್ವಾಮೀಜಿಯವರ ಸಾನಿತ್ಯದಲ್ಲಿ 108 ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ಅಭಿಷೇಕಗಳೊಂದಿಗೆ ಶ್ರಾವಣ ಮಾಸದ ಪೂಜೆ ವಿಜೃಂಭಣೆಯಿಂದ ನಡೆಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.