ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಶ್ರೀ ಬಂಡಿಗೇರೆ ಮಹದೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ (ಏಪ್ರಿಲ್ 16) ಸಂಜೆ ವಿಜೃಂಭಣೆಯಿಂದ ನಡೆಯಿತು.


COMMERCIAL BREAK
SCROLL TO CONTINUE READING

ಗುಂಡ್ಲುಪೇಟೆ ತಾಲೂಕಿನ ಬೇಗೂರು, ಬೆಳಚಲವಾಡಿ, ಕಮರಹಳ್ಳಿ ಮೂರು ಗ್ರಾಮಗಳ ಗ್ರಾಮಸ್ಥರು ಒಗ್ಗಟ್ಟಿನಿಂದ  35 ವರ್ಷಗಳ ಬಳಿಕ  ಶ್ರೀ ಮಹದೇಶ್ವರ ಸ್ವಾಮಿಯ ರಥೋತ್ಸವ (Shri Mahadeshwar Swami Rathotsava) ನೆರವೇರಿಸಿದರು.


ಇದನ್ನೂ ಓದಿ- Malavya Rajyog: ಈ 5 ರಾಶಿಯವರಿಗೆ ಸಂಪತ್ತು ಹೆಚ್ಚಿಸಲಿದೆ ಮಾಲವ್ಯ ರಾಜಯೋಗ


ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ (Sri Anjaneya Swamy Temple) ಆವರಣದಲ್ಲಿ ಬೇಗೂರಿನ ಮಹದೇಶ್ವರ ಸ್ವಾಮಿ (Begur Mahadeshwar Swami) ಕಮರಹಳ್ಳಿ ಬಸವೇಶ್ವರ (Kamarahalli Basaveshwara) ಬೆಳಚಲವಾಡಿ ಶ್ರೀ ರಾಮಲಿಂಗೇಶ್ವರ (Belachalavadi Ramalingeshwara) ದೇವರ ಉತ್ಸವ ಮೂರ್ತಿಗಳನ್ನು ಅಲಂಕೃತ ವಾಹನದಲ್ಲಿರಿಸಿ ಹಾಗೂ ಅಡ್ಡ ಪಲ್ಲಕ್ಕಿಯಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಬಂಡಿಗೇರೆ ಮಹದೇಶ್ವರ ಸ್ವಾಮಿ ದೇವಾಲಯದ ಆವರಣಕ್ಕೆ ಉತ್ಸವ ಮೂರ್ತಿಗಳನ್ನು ತಂದ ನಂತರ ದೇವಾಲಯದ ಆವರಣದಲ್ಲಿ ಕೊಂಡ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.


ಇದನ್ನೂ ಓದಿ- Weekly Horoscope: ಈ ವಾರದ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ


ಸಂಜೆ 4 ಗಂಟೆಯ ನಂತರ  ಬಂಡಿಗೇರೆ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ತೇರಿನಲ್ಲಿರಿಸಿ ವಿವಿಧ ಹೂಗಳಿಂದ ಅಲಂಕರಿಸಿ ದೇವಾಲಯದ ಸುತ್ತ  ಸಾವಿರಾರು ಭಕ್ತರ ಜಯ ಘೋಷದೊಂದಿಗೆ ರಥ ವನ್ನು ಎಳೆದು ಸಂಭ್ರಮಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.