Shukra Gochar 2023 Effect : ಜ್ಯೋತಿಷ್ಯದಲ್ಲಿ ಯಾವುದೇ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಿದರೆ ಅದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ. ಅಕ್ಟೋಬರ್‌ನಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುವ ಶುಕ್ರ ಗ್ರಹ ಕೂಡಾ ತನ್ನ ಸ್ಥಾನವನ್ನು ಬದಲಿಸಲಿದ್ದಾನೆ.  ಅಕ್ಟೋಬರ್ 2 ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ.   ಶುಕ್ರ ತನ್ನ ಸ್ಥಾನವನ್ನು ಬದಲಿಸುವ ಪರಿಣಾಮ ಎಲ್ಲಾ ದ್ವಾದಶ ರಾಶಿಯವರ ಜಾತಕದಲ್ಲಿ ಗೋಚರಿಸಲಿದೆ. ಜಾತಕದಲ್ಲಿ ಶುಕ್ರನು ಬಲವಾಗಿದ್ದಾಗ, ವ್ಯಕ್ತಿಯು ಗೌರವ ಮತ್ತು ಸ್ಥಾನಮಾನವನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ, ಜಾತಕದಲ್ಲಿ ಶುಕ್ರನು ದುರ್ಬಲವಾದಾಗ, ವ್ಯಕ್ತಿಯ ಜೀವನದಲ್ಲಿ ಸುಖ ಸಂತೋಷವು ಕಡಿಮೆಯಾಗುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಶುಕ್ರನು ಕರ್ಕ ರಾಶಿಯಲ್ಲಿದ್ದು ಅಕ್ಟೋಬರ್ 2 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಶುಕ್ರನ ರಾಶಿಯ ಬದಲಾವಣೆಯು 3 ರಾಶಿಯವರ ಆದಾಯ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಮುಂಬರುವ ತಿಂಗಳು ಈ 3 ರಾಶಿಯವರಿಗೆ ಮಂಗಳಕರವಾಗಿರುತ್ತದೆ. 


ಇದನ್ನೂ ಓದಿ : ಈ ರಾಶಿಯಲ್ಲಿ ಚಂದ್ರ ಮಂಗಳ ಯೋಗ ! ಧನ ಕನಕ ಹರಿಸುವಳು ತಾಯಿ ಲಕ್ಷ್ಮೀ ! ತಡೆಯಿಲ್ಲದೆ ತಲುಪಬಹುದು ಗುರಿ


ವೃಷಭ ರಾಶಿ :
ಜ್ಯೋತಿಷ್ಯದಲ್ಲಿ,  ಶುಕ್ರನು ಸಿಂಹರಾಶಿಗೆ ಪ್ರವೇಶಿಸುವುದರಿಂದ ವೃಷಭ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ರಾಶಿಯವರ ಅಧಿಪತಿ ಗ್ರಹ ಗುರು. ವೃಷಭ ರಾಶಿಯ ಅಧಿದೇವತೆ ದೇವಿ ದುರ್ಗಾ. ಅಂತಹ ಪರಿಸ್ಥಿತಿಯಲ್ಲಿ, ಶುಕ್ರನ ಸಂಕ್ರಮಣವು ಈ ರಾಶಿಯ ಜನರಿಗೆ ವಿಶೇಷ ಫಲ  ನೀಡುತ್ತದೆ. ಈ ಸಮಯದಲ್ಲಿ, ಈ ರಾಶಿಯವರ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಹೆಚ್ಚುವುದು. ಇಷ್ಟೇ ಅಲ್ಲ, ಈ ರಾಶಿಯವರ ಜೀವನದ ಸೌಕರ್ಯಗಳು ಹೆಚ್ಚಾಗುತ್ತವೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಶುಭ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. 


ಸಿಂಹ ರಾಶಿ : 
ಈ ರಾಶಿಯವರ ಅಧಿಪತಿ ಗ್ರಹ ಸೂರ್ಯ. ಇವರ ರಾಶಿಯ ದೇವರು  ಭಗವಾನ್ ವಿಷ್ಣು. ಸಿಂಹ ರಾಶಿಯವರ ಮೇಲೆ  ಭಗವಾನ್ ವಿಷ್ಣುವಿನ ವಿಶೇಷ ಆಶೀರ್ವಾದ ಇರುತ್ತದೆ. ಈ ಅವಧಿಯಲ್ಲಿ, ಈ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಮನಸ್ಸಿನ ಇಚ್ಛೆಯಂತೆ ಯಶಸ್ಸನ್ನು ಸಾಧಿಸುತ್ತಾರೆ. ಅಲ್ಲದೆ, ಕೈ ಕೊಟ್ಟಿದ್ದ ಕೆಲಸ ಕೂಡಾ ಈ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ. ಶುಕ್ರನ ಸಂಚಾರವು ಈ ರಾಶಿಯ  ಜನರ ಆದಾಯವನ್ನು ಹೆಚ್ಚಿಸುತ್ತದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳಿಗೆ ವೇಗ ಸಿಗಲಿದೆ. ಅವಿವಾಹಿತರಿಗೆ ಕಲ್ಯಾಣ ಭಾಗ್ಯ ಕೂಡಿ ಬರಬಹುದು. ಒಟ್ಟಾರೆಯಾಗಿ, ಈ ರಾಶಿಯ ಜನರಿಗೆ  ಶುಕ್ರ ಸಂಕ್ರಮಣ ಪ್ರಯೋಜನಕಾರಿಯಾಗಿರಲಿದೆ.  


ಇದನ್ನೂ ಓದಿ :  Friday Remedies: ಶುಕ್ರವಾರದ ದಿನ ಈ 5 ಕೆಲಸಗಳನ್ನು ಮಾಡಲೇಬಾರದು


ತುಲಾ ರಾಶಿ :
ಜ್ಯೋತಿಷ್ಯದ ಪ್ರಕಾರ, ತುಲಾ ರಾಶಿಯವರ ಅಧಿಪತಿ ಗ್ರಹ ಶುಕ್ರ. ಆರಾಧ್ಯ ದೇವತೆ ತಾಯಿ ದುರ್ಗಾ. ಈ ರಾಶಿಯವರ ಮೇಲೆ ತಾಯಿ ದುರ್ಗೆಯ ವಿಶೇಷ ಆಶೀರ್ವಾದವಿರುತ್ತದೆ. ತುಲಾ ರಾಶಿಯವರಿಗೆ ಈ ಅವಧಿಯಲ್ಲಿ ವಿಶೇಷ ಸಂತೋಷ ಸಿಗುತ್ತದೆ. ತುಲಾ ರಾಶಿಯವರು ಅಕ್ಟೋಬರ್‌ನಲ್ಲಿ ಶುಕ್ರನ ಸಂಚಾರದಿಂದ ವಿಶೇಷ ಫಲಗಳನ್ನು ಪಡೆಯುತ್ತಾರೆ. ವ್ಯಾಪಾರವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ