Malavya Rajayoga Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಪರಿವರ್ತನೆಯೊಂದಿಗೆ ಹಲವು ಮಂಗಳಕರ ಶುಭ ರಾಜಯೋಗಗಳು ಸೃಷ್ಟಿಯಾಗುತವೆ. ಈ ರಾಜಯೋಗಗಳು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಹೊಸ ವರ್ಷದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಸಂಪತ್ತು, ಐಶಾರಾಮಿ ಜೀವನಕಾರಕನಾದ ಶುಕ್ರ ಗ್ರಹ ಮೀನ ರಾಶಿಗೆ ಪ್ರವೇಶಿಸಲಿದೆ. ಮೀನ ರಾಶಿಗೆ ಶುಕ್ರನ ಪ್ರವೇಶದಿಂದ ಮಾಲವ್ಯ ರಾಜಯೋಗ ಸೃಷ್ಟಿಯಾಗಲಿದೆ. ಜ್ಯೋತಿಷ್ಯದ ಪ್ರಕಾರ, ಮಾಲವ್ಯ ರಾಜಯೋಗವನ್ನು ಅತ್ಯಂತ ಮಂಗಳಕರ ರಾಜಯೋಗ ಎಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯದ ಪ್ರಕಾರ, ಮಾಲವ್ಯ ರಾಜಯೋಗವನ್ನು ಸಂತೋಷ, ಸಂಪತ್ತು ಮತ್ತು ಐಶ್ವರ್ಯ ವೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ. ಶುಕ್ರನ ರಾಶಿ ಪರಿವರ್ತನೆಯಿಂದ ರೂಪುಗೊಳ್ಳುವ ಈ ಮಾಲವ್ಯ ರಾಜಯೋಗವು ದೈಹಿಕ, ತರ್ಕ, ಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ವ್ಯಕ್ತಿಗೆ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕೂಡ ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. 


2023 ರಲ್ಲಿ ಈ ದಿನ ರೂಪುಗೊಳ್ಳಲಿದೆ ಮಾಲವ್ಯ ರಾಜಯೋಗ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2023ರಲ್ಲಿ ಫೆಬ್ರವರಿ 15 ರಂದು ಶುಕ್ರ ಗ್ರಹವು ಮೀನ ರಾಶಿಯನ್ನು ಪ್ರವೇಶಿಸಲಿದೆ. ಫೆಬ್ರವರಿ 15ರ ರಾತ್ರಿ 8.12ಕ್ಕೆ ಶುಕ್ರನ ರಾಶಿ ಪರಿವರ್ತನೆಯೊಂದಿಗೆ ಮಾಲವ್ಯ ರಾಜಯೋಗವು ರೂಪುಗೊಳ್ಳಲಿದೆ.


ಇದನ್ನೂ ಓದಿ- Shani Gochar 2023: 30 ವರ್ಷಗಳ ಬಳಿಕ ಈ ರಾಶಿಯವರಿಗೆ ವಿಶೇಷ ಕೃಪೆ ತೋರಲಿದ್ದಾನೆ ಶನಿ ದೇವ


ಮಾಲವ್ಯ ರಾಜ್ಯಯೋಗ ಎಂದರೇನು?
ವೈದಿಕ ಜ್ಯೋತಿಷ್ಯದ ಪ್ರಕಾರ, ಮಾಲವ್ಯ ರಾಜಯೋಗವು ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾಗಿದೆ. ಶುಕ್ರನ ಪ್ರಭಾವದಿಂದಾಗಿ ಈ ರಾಜಯೋಗವು ನಿರ್ಮಾಣವಾಗುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಶುಕ್ರನು ಲಗ್ನ ಮತ್ತು ಚಂದ್ರನಿಂದ 1, 4, 7 ಮತ್ತು 10 ನೇ ಮನೆಯಲ್ಲಿ ವೃಷಭ, ತುಲಾ ಅಥವಾ ಮೀನದಲ್ಲಿ ಸ್ಥಿತರಾಗಿದ್ದರೆ, ಆಗ ಈ ರಾಜಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.


2023ರಲ್ಲಿ ಮೂರು ಬಾರಿ ರೂಪುಗೊಳ್ಳಲಿದೆ ಮಾಲವ್ಯ ರಾಜಯೋಗ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ 2023ರಲ್ಲಿ ಸಂಪತ್ತು, ಐಶಾರಾಮಿ ಜೀವನಕಾರಕನಾದ ಶುಕ್ರನು ಮೂರು ಬಾರಿ ಈ ಮಂಗಳಕರ ಮಾಲವ್ಯ ರಾಜಯೋಗವನ್ನು  ರೂಪಿಸಲಿದ್ದಾನೆ. 
* ಮೊದಲಿಗೆ ಶುಕ್ರನು ಫೆಬ್ರವರಿ 15 ರಂದು ಮೀನರಾಶಿಯನ್ನು ಪ್ರವೇಶಿಸುವ ಮೂಲಕ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತದೆ.
*  ಏಪ್ರಿಲ್ 6 ರಂದು ವೃಷಭ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಈ ರಾಜಯೋಗ ರೂಪುಗೊಳ್ಳಲಿದೆ.
* ನಂತರ ನವೆಂಬರ್ 29 ರಂದು ಶುಕ್ರ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಿದಾಗ ಮೂರನೇ ಬಾರಿಗೆ ಈ ರಾಜಯೋಗ ರೂಪುಗೊಳ್ಳಲಿದೆ.


ಇದನ್ನೂ ಓದಿ- Rahu Transit Effect: 2023ರಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾನೆ ರಾಹು


ಮಾಲವ್ಯ ರಾಜಯೋಗದಿಂದ ಈ ರಾಶಿಯವರಿಗೆ ಭಾರೀ ಅದೃಷ್ಟ:
2023ರಲ್ಲಿ ಮೊದಲ ಬಾರಿಗೆ ಎಂದರೆ ಫೆಬ್ರವರಿಯಲ್ಲಿ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಫೆಬ್ರವರಿ 15 ರಂದು ಶುಕ್ರನು ಮೀನರಾಶಿಗೆ ಪ್ರವೇಶಿಸಿದ ತಕ್ಷಣ ಮಿಥುನ, ಧನು ಮತ್ತು ಮೀನ ರಾಶಿಯವರಿಗೆ ವಿಶೇಷ ಪ್ರಯೋಜನವಾಗಲಿದೆ. ಈ ಸಮಯದಲ್ಲಿ ಈ ರಾಶಿಯವರು ಮಾಲವ್ಯ ರಾಜಯೋಗದ ಪರಿಣಾಮದಿಂದಾಗಿ ಹಠಾತ್ ಧನ ಯೋಗವನ್ನು ಪಡೆಯಲಿದ್ದಾರೆ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಇದರಿಂದ ಬಡತನದಿಂದಲೂ ಮುಕ್ತಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.