ಆಗಸ್ಟ್ 7ರಂದು ಶುಕ್ರ ಸಂಕ್ರಮಣ: ಈ 5 ರಾಶಿಯವರಿಗೆ ಭಾರೀ ಲಾಭ
Venus Transit 2022: ಪ್ರೀತಿ, ಪ್ರಣಯ, ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹವು ಇನ್ನು ಐದು ದಿನಗಳ ನಂತರ ರಾಶಿಯನ್ನು ಬದಲಾಯಿಸಲಿದ್ದಾನೆ. ಈ ಶುಕ್ರ ಸಂಕ್ರಮವು ಐದು ರಾಶಿಯ ಜನರಿಗೆ ಅದೃಷ್ಟವನ್ನು ಬೆಳಗಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು?
ಶುಕ್ರ ಗೋಚರ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯು ತುಂಬಾ ಶ್ರೀಮಂತನಾಗುತ್ತಾನೆ ಮತ್ತು ಐಷಾರಾಮಿ ಜೀವನವನ್ನು ಆನಂದಿಸುತ್ತಾನೆ ಎಂದು ನಂಬಲಾಗಿದೆ. ಪ್ರೀತಿ, ಪ್ರಣಯ, ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹವು ಇನ್ನು ಐದು ದಿನಗಳ ನಂತರ ಅಂದರೆ 7ನೇ ಆಗಸ್ಟ್ 2022 ರಂದು, ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿದೆ. ಈ ಸಮಯದಲ್ಲಿ ಶುಕ್ರನು ಕರ್ಕಾಟಕ ರಾಶಿಗೆ ಬದಲಾಯಿಸಲಿದ್ದಾನೆ. ಇದರೊಂದಿಗೆ 23 ದಿನಗಳವರೆಗೆ ಕೆಲವು ರಾಶಿಯವರಿಗೆ ಈ ಸಮಯವೂ ಭಾರೀ ಅದೃಷ್ಟವನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.
ಆಗಸ್ಟ್ 7 ರಿಂದ 23 ದಿನಗಳವರೆಗೆ ಈ ರಾಶಿಯವರಿಗೆ ಅದೃಷ್ಟವನ್ನು ಕರುಣಿಸಲಿದ್ದಾನೆ ಶುಕ್ರ:
ಮೇಷ ರಾಶಿ:
ಆಗಸ್ಟ್ ತಿಂಗಳಲ್ಲಿ ಶುಕ್ರನ ಸಂಚಾರವು ಮೇಷ ರಾಶಿಯವರಿಗೆ ಹಣ ಮತ್ತು ಪ್ರತಿಷ್ಠೆ ಎರಡನ್ನೂ ತರುತ್ತದೆ. ವೃತ್ತಿ ಜೀವನದಲ್ಲಿ ಬಲವಾದ ಯಶಸ್ಸನ್ನು ಪಡೆಯಬಹುದು. ಹೊಸ ಉದ್ಯೋಗ, ಬಡ್ತಿ ದೊರೆಯುವ ಸಾಧ್ಯತೆ ಇದೆ.
ವೃಷಭ ರಾಶಿ:
ಉದ್ಯೋಗ ಬದಲಾವಣೆಗೆ ಯೋಚಿಸುತ್ತಿರುವ ವೃಷಭ ರಾಶಿಯವರಿಗೆ ಇದು ಉತ್ತಮ ಸಮಯ. ಹಣವು ಪ್ರಯೋಜನಕಾರಿಯಾಗಲಿದೆ. ಹಠಾತ್ ಹಣವನ್ನು ಪಡೆಯುವ ಬಲವಾದ ಅವಕಾಶಗಳಿವೆ. ನೀವು ವಿದೇಶಕ್ಕೆ ಹೋಗಲು ಬಯಸಿದರೆ ನಿಮ್ಮ ಈ ಕನಸು ನನಸಾಗಬಹುದು.
ಇದನ್ನೂ ಓದಿ- Shani Dev Ashubh Sanket: ನಿಮ್ಮ ಮೇಲೆ ಶನಿ ವಕ್ರದೃಷ್ಟಿ ಬೀರಿದ್ದಾನೆ ಎನ್ನುತ್ತವೆ ಈ 6 ಸಂಕೇತಗಳು, ಈ ಉಪಾಯ ಅನುಸರಿಸಿ
ಮಿಥುನ ರಾಶಿ:
ಕರ್ಕಾಟಕ ರಾಶಿಯಲ್ಲಿ ಶುಕ್ರನ ಸಂಚಾರವು ಮಿಥುನ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರಲಿದೆ. ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಪ್ರಬಲ ಅವಕಾಶಗಳಿವೆ. ಹಣವು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ವೈವಾಹಿಕ ಜೀವನವೂ ಸುಖ- ಸಂತೋಷವನ್ನು ತರಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಶುಕ್ರನ ರಾಶಿಯ ಬದಲಾವಣೆಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ನೀಡುತ್ತದೆ. ಎಕ್ಸಾಂ, ಇಂಟರ್ ವ್ಯೂಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ನೀವು ಬಯಸಿದ ಉದ್ಯೋಗ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ಇದನ್ನೂ ಓದಿ- Nag Panchami 2022: ಹಲವು ವರ್ಷಗಳ ಬಳಿಕ ನಾಗ ಪಂಚಮಿಯಂದು ಈ ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ
ತುಲಾ ರಾಶಿ:
ಶುಕ್ರನ ರಾಶಿ ಪರಿವರ್ತನೆಯು ತುಲಾ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. 23 ದಿನಗಳವರೆಗೆ ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಬಲಗೊಳ್ಳುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಇದು ಭವಿಷ್ಯದಲ್ಲಿ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.