Venus entry in Capricorn: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು  ಸಂಪತ್ತು, ಐಶ್ವರ್ಯ, ಪ್ರೇಮ ವ್ಯವಹಾರಗಳು, ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಹಾಗಾಗಿ, ಶುಕ್ರ ಸಂಚಾರದಲ್ಲಿನ ಬದಲಾವಣೆಯು ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರಲಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದಾರೆ ಆತ  ಜೀವನದಲ್ಲಿ ಭೌತಿಕ ಸಂತೋಷವನ್ನು ಪಡೆಯುತ್ತಾನೆ. ಜೊತೆಗೆ ಅವರ ಪ್ರೇಮ, ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಫೆಬ್ರವರಿಯಲ್ಲಿ ಶುಕ್ರ ರಾಶಿ ಬದಲಾವಣೆ: 
ಶುಕ್ರನು ಶೀಘ್ರದಲ್ಲೇ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಿ ಶನಿಯ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ಫೆಬ್ರವರಿ 12 ರಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದು ಮಾರ್ಚ್ 06ರವರೆಗೆ ಅದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಶುಕ್ರ ರಾಶಿ ಪರಿವರ್ತನೆಯು ಎಲ್ಲಾ 12  ರಾಶಿಯವರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಇದು ಮೂರು ರಾಶಿಯವರಿಗೆ ವಿಶೇಷ ಲಾಭವನ್ನು ತರಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 


ಇದನ್ನೂ ಓದಿ- Surya Gochar 2024: ಶತ್ರು ಗ್ರಹದೊಂದಿಗೆ ಸೂರ್ಯ- ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ


ಶನಿ ರಾಶಿಚಕ್ರ ಚಿಹ್ನೆಗೆ ಶುಕ್ರನ ಪ್ರವೇಶ: ಈ ರಾಶಿಯವರಿಗೆ ವಿಶೇಷ ಲಾಭ:-
ಮೇಷ ರಾಶಿ: 

ಶುಕ್ರ ರಾಶಿ ಬದಲಾವಣೆಯ ಪರಿಣಾಮವಾಗಿ ಮುಂದಿನ ಒಂದು ತಿಂಗಳು ಮೇಷ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ಪಡೆಯಲಿದ್ದಾರೆ. ಇದಕ್ಕಾಗಿ ಉದ್ಯೋಗ ಕ್ಷೇತ್ರದಲ್ಲಿ ನೀವು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಗುರಿ ಸಾಧನೆಗಳಿಗೆ ಹಿರಿಯರ ಸಂಪೂರ್ಣ ಬೆಂಬಲ ದೊರೆಯಲಿದೆ. ಒಟ್ಟಾರೆಯಾಗಿ ಈ ಒಂದು ತಿಂಗಳು ಆರ್ಥಿಕ ಸಮೃದ್ಧಿಯನ್ನು ಅನುಭವಿಸುವಿರಿ. 


ಕರ್ಕಾಟಕ ರಾಶಿ: 
ಶುಕ್ರ ಸಂಕ್ರಮಣವು ಕರ್ಕಾಟಕ ರಾಶಿಯ ಜನರಿಗೆ ಪ್ರೇಮ ಹಾಗೂ ದಾಂಪತ್ಯ ಜೀವನದಲ್ಲಿ ಆನಂದಮಯ ಸಮಯವನ್ನು ತರಲಿದೆ.  ಅದೇ ಸಮಯದಲ್ಲಿ,  ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆಯೂ ಇದೆ. ವೃತ್ತಿ-ವ್ಯವಹಾರದಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ಬಗೆಹರಿಸಲು ಹಿರಿಯರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಕೀರ್ತಿ ಹೆಚ್ಚಾಗಲಿದೆ. 


ಇದನ್ನೂ ಓದಿ- Ruchak Yog: ಮಂಗಳ ಸಂಚಾರದಿಂದ ರುಚಕ್ ರಾಜಯೋಗ: 3 ರಾಶಿಯವರಿಗೆ ಭಾಗ್ಯೋದಯದ ಸಮಯ


ಮಕರ ರಾಶಿ: 
ಸ್ವ ರಾಶಿಯಲ್ಲಿ ಶುಕ್ರನ ಸಂಚಾರವು ಈ ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಸಂಬಂಧಿಕರ ನಡುವೆ ಮೂಡಿದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ವ್ಯವಹಾರದಲ್ಲಿ ತಲೆದೂರಿದ್ದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಇದು ನಿಮ್ಮ ಜೀವನದಲ್ಲಿ ಸುಖ-ಸಂತೋಷವನ್ನು ಹೆಚ್ಚಿಸಲಿದೆ. 


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.