ಈ ಮೂರು ರಾಶಿಯವರ ಜೀವನದಲ್ಲಿ ಭಾರೀ ಧನಗಮನ ! ಮಾಡುವ ಕೆಲಸದಲ್ಲಿ ಕೈ ಹಿಡಿಯುವುದು ಅದೃಷ್ಟ
Shukra Mangal yuti 2023 :ಸಿಂಹರಾಶಿಯಲ್ಲಿ ಮಂಗಳ-ಶುಕ್ರ ಸಂಯೋಗ ಉಂಟಾಗುತ್ತಿದೆ. ಮಂಗಳ-ಶುಕ್ರ ಸಂಯೋಗದ ಪರಿಣಾಮವು 3 ರಾಶಿಯವರಿಗೆ ಬಂಪರ್ ಲಾಭವಾಗಲಿದೆ.
Shukra Mangal yuti 2023 : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ವಿವಿಧ ಗ್ರಹಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಶುಭ ಮತ್ತು ಅಶುಭ ಯೋಗವು ಎಲ್ಲಾ ದ್ವಾದಶ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಮಂಗಳ ಗ್ರಹ ಸಿಂಹರಾಶಿಯಲ್ಲಿದ್ದಾನೆ. ಜುಲೈ 7, 2023 ರಂದು ಶುಕ್ರನು ಸಹ ಸಂಕ್ರಮಿಸಿ ಸಿಂಹರಾಶಿಯನ್ನೇ ಪ್ರವೇಶಿಸಿದ್ದಾನೆ. ಇದರಿಂದಾಗಿ ಸಿಂಹರಾಶಿಯಲ್ಲಿ ಮಂಗಳ-ಶುಕ್ರ ಸಂಯೋಗ ಉಂಟಾಗುತ್ತಿದೆ. ಮಂಗಳ-ಶುಕ್ರ ಸಂಯೋಗದ ಪರಿಣಾಮವು 3 ರಾಶಿಯವರಿಗೆ ಬಂಪರ್ ಲಾಭವಾಗಲಿದೆ.
ಶುಭ ಫಲ ನೀಡಲಿದ್ದಾರೆ ಮಂಗಳ-ಶುಕ್ರ :
ಮೇಷ ರಾಶಿ : ಕುಜ-ಶುಕ್ರ ಸಂಯೋಗವು ಮೇಷ ರಾಶಿಯವರಿಗೆ ತುಂಬಾ ಶುಭವಾಗಿರಲಿದೆ. ಈ ಅವಧಿಯಲ್ಲಿ ಸಾಕಷ್ಟು ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ. ಉದ್ಯೋಗದಲ್ಲಿರುವವರಿಗೂ ಇದು ಉತ್ತಮ ಸಮಯ.
ಇದನ್ನೂ ಓದಿ : ಗಣೇಶನಿಗೆ ಅತ್ಯಂತ ಪ್ರಿಯ ಈ ರಾಶಿಯವರು ! ವಿಘ್ನ ಇವರ ಬಳಿಯೂ ಸುಳಿಯದು ! ಇಟ್ಟ ಹೆಜ್ಜೆ ಗೆಲುವಿನತ್ತಲೇ ಸಾಗುವುದು
ವೃಷಭ ರಾಶಿ : ವೃಷಭ ರಾಶಿಯವರಿಗೆ ಮಂಗಳ-ಶುಕ್ರ ಸಂಯೋಗವು ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯವರು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಸಾಲವನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುವಿರಿ. ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಅಧಿಕಾರಿಗಳು ಮತ್ತು ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ನಿಮ್ಮೊಂದಿಗೆ ಸಹಕರಿಸುತ್ತಾರೆ. ಹೊಸ ಉದ್ಯೋಗ ಸಿಗಬಹುದು.
ಕರ್ಕ ರಾಶಿ : ಶುಕ್ರ-ಮಂಗಳರ ಸಂಯೋಜನೆಯು ಕರ್ಕಾಟಕ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಣ ಗಳಿಸಲು ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಸಾಕಷ್ಟು ಪ್ರಗತಿ ಸಾಧಿಸುವಿರಿ. ವ್ಯವಹಾರಕ್ಕೆ ಉತ್ತಮ ಸಮಯ. ಪ್ರತಿ ಕೆಲಸದಲ್ಲಿಯೂ ಪ್ರಗತಿ ಸಾಧಿಸುವಿರಿ. ಜೀವನದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ : Shukra Asta: ಸೂರ್ಯನ ರಾಶಿಯಲ್ಲಿ ಅಸ್ತಮಿಸಲಿರುವ ಶುಕ್ರ, ಮೂರು ರಾಶಿಯವರಿಗೆ ಅಶುಭ ದಿನಗಳು ಆರಂಭ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.