Shukra Asta: ಸೂರ್ಯನ ರಾಶಿಯಲ್ಲಿ ಅಸ್ತಮಿಸಲಿರುವ ಶುಕ್ರ, ಮೂರು ರಾಶಿಯವರಿಗೆ ಅಶುಭ ದಿನಗಳು ಆರಂಭ

                                              

Shukra Asta: ಸುಖ-ಸಂಪತ್ತು ಕಾರಕನಾದ ಶುಕ್ರನು ಸದ್ಯ ಸೂರ್ಯನ ರಾಶಿಯಾದ ಸಿಂಹ ರಾಶಿಯಲ್ಲಿದ್ದಾನೆ.  ಆಗಸ್ಟ್ 3, 2023 ರಂದು ಇದೇ ರಾಶಿಯಲ್ಲಿ ಶುಕ್ರ ಅಸ್ತಮಿಸಲಿದ್ದು ಇದರಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟಗಳು ಎದುರಾಗಲಿವೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸುಖ-ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಕಿಂಚಿತ್ತೂ ಸಹ ಕಷ್ಟ ಎಂಬುದೇ ಇರುವುದಿಲ್ಲ. ಆದರೆ, ಜಾತಕದಲ್ಲಿ ಶುಕ್ರನ ಅಶುಭ ಸ್ಥಾನವು ವ್ಯಕ್ತಿಯ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ ಎಂದು ಹೇಳಲಾಗುತ್ತದೆ. 

2 /8

ಗ್ರಹವು ಸೂರ್ಯನ ಹತ್ತಿರ ಬಂದಾಗ, ಅದು ಅಸ್ತಮಿಸುತ್ತದೆ. ಯಾವುದೇ ಒಂದು ಗ್ರಹದ ಆಸ್ತಮ ಸ್ಥಿತಿಯಿಂದಾಗಿ ಆ ಗ್ರಹದ ಪ್ರಕಾಶಮಾನ ಅಥವಾ ಅದರ ಮಂಗಳಕರ ಪರಿಣಾಮವು ಕಡಿಮೆಯಾಗುತ್ತದೆ. ಪ್ರಸ್ತುತ ಶುಕ್ರನು ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶುಕ್ರನು ಇದೇ ರಾಶಿಯಲ್ಲಿ ಆಗಸ್ಟ್ 3, 2023 ರಂದು  ಅಸ್ತಮಿಸುತ್ತಾನೆ.   

3 /8

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2023ರ ಆಗಸ್ಟ್ 19 ರಂದು ಶುಕ್ರನು ಕನ್ಯಾ ರಾಶಿಯಲ್ಲಿ ಉದಯಿಸಲಿದ್ದಾನೆ. 

4 /8

ಆಗಸ್ಟ್ 3, 2023ರಿಂದ ಆಗಸ್ಟ್ 19, 2023ರವರೆಗೆ ಸುಮಾರು 16 ದಿನಗಳವರೆಗೆ ಅಸ್ತಮಿಸಲಿರುವ ಶುಕ್ರನು ಈ ಸಮಯದಲ್ಲಿ ಎಲ್ಲಾ 12 ರಾಶಿಯವರ ಮೇಲೆ ಶುಭ ಅಶುಭ ಪರಿಣಾಮಗಳನ್ನು ಉಂಟು ಮಾಡಲಿದ್ದಾನೆ. ಆದಾಗ್ಯೂ, ಮೂರು ರಾಶಿಯವರ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯಿರಿ. 

5 /8

ಶುಕ್ರನ ಆಸ್ತಮ ಸ್ಥಿತಿಯು ಮಿಥುನ ರಾಶಿಯವರಿಗೆ ತುಂಬಾ ಎಚ್ಚರಿಕೆಯಿಂದ ಇರಬೇಕಾದ ಸಮಯವಾಗಿದೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿಯು ದುರ್ಬಲವಾಗಿರುತ್ತದೆ. ಅನಾವಶ್ಯಕ ಚರ್ಚೆಗಳು ನಿಮ್ಮ ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡಬಹುದು. 

6 /8

ಸಿಂಹ ರಾಶಿಯಲ್ಲಿ ಅಸ್ತಮಿಸಲಿರುವ ಶುಕ್ರನು ವೃತ್ತಿ-ವ್ಯಾಪಾರದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡಳಿದ್ದಾನೆ. ಈ ಸಮಯದಲ್ಲಿ ನೀವು ಯಾವುದೇ ರೀತಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿದರೆ ಒಳ್ಳೆಯದು. ಈ ಸಮಯದಲ್ಲಿ ಹೂಡಿಕೆಯಿಂದ ಕೈ ಸುಟ್ಟಿಕೊಳ್ಳುವ ಸಾಧ್ಯತೆ ಇದ್ದು, ಹೂಡಿಕೆಗಳನ್ನು ತಪ್ಪಿಸಿ. 

7 /8

ಆಗಸ್ಟ್ 3ರಂದು ಅಸ್ತಮಿಸಲಿರುವ ಶುಕ್ರನು ಧನು ರಾಶಿಯವರಿಗೆ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಿಸುವಂತೆ ಮಾಡಲಿದ್ದಾನೆ. ಶುಕ್ರ ಆಸ್ತಮದ 16 ದಿನಗಳು ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ನಾನಾ ರೀತಿಯ ಸಂಕಷ್ಟಗಳು ಎದುರಾಗಲಿವೆ. ಉದ್ಯಮಿಗಳು ತಮ್ಮ ಕೆಲಸದಲ್ಲಿ ಕಡಿಮೆ ಲಾಭವನ್ನು ಪಡೆಯುತ್ತಾರೆ, ಇದರಿಂದಾಗಿ ಹಣದ ಕೊರತೆ ಇರುತ್ತದೆ. 

8 /8

ವಿಶೇಷ ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.