Shukra Bharani Nakshatra Gochar: ಎಲ್ಲಾ ನವಗ್ರಹಗಳು ಒಂದು ನಿಶ್ಚಿತ ಕಾಲಾಂತರದ ಬಳಿಕ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತವೆ. ಗ್ರಹಗಳ ಈ ಸಂಚಾರ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನು ಬೀರುತ್ತವೆ ಮತ್ತು ಕೆಲವೊಮ್ಮೆ ಮಂಗಳಕರ ಯೋಗಗಳನ್ನು ಕೂಡ ಸೃಷ್ಟಿಸುತ್ತವೆ.  ಪ್ರಸ್ತುತ ಶುಕ್ರ ಗ್ರಹ ಶೀಘ್ರದಲ್ಲೇ ತನ್ನ ನಕ್ಷತ್ರ ಬದಲಾಯಿಸಲಿದ್ದು, ಇದು ಕೆಲ ರಾಶಿಗಳ ಜನರಿಗೆ ಸಾಕಷ್ಟು ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. 


COMMERCIAL BREAK
SCROLL TO CONTINUE READING

ಮೇ 6 ರಂದು ಶುಕ್ರನ ಭರಣಿ ನಕ್ಷತ್ರ ಗೋಚರ
ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ವೈವಾಹಿಕ ಜೀವನ, ಸೌಕರ್ಯ, ಐಷಾರಾಮಿ ಮತ್ತು ಖ್ಯಾತಿಯ ಕಾರಕ ಎಂದು ಪರಿಗಣಿಸಲಾಗಿದೆ. 2 ದಿನಗಳ ನಂತರ ಅಂದರೆ ಮೇ 6 ರಂದು ಶುಕ್ರನು ಭರಣಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದ, 4 ರಾಶಿಗಳ ಜನರಿಗೆ ಸಾಕಷ್ಟು ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಇದರಿಂದ ಈ ಜನರ ಆರ್ಥಿಕ ಪರಿಸ್ಥಿತಿಯಲ್ಲಿಯೂ ಸುಧಾರಣೆ ಕಂಡುಬರಲಿದೆ. ಅದೃಷ್ಟವಂತ ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ.


1. ಮೇಷ ರಾಶಿ: ಶುಕ್ರನ ನಕ್ಷತ್ರ ಪರಿವರ್ತನೆ ಮೇಷ ರಾಶಿಯ ಜನರಿಗೆ ಬಹಳ ಪ್ರಯೋಜನಕಾರಿ ಸಾಬೀತಾಗಲಿದೆ. ಈ ಜನರ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಲಿದೆ. ಹೂಡಿಕೆ ಮಾಡಲು ಸಮಯ ಉತ್ತಮವಾಗಿದೆ ಮತ್ತು ಅದರಿಂದ ಭವಿಷ್ಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಈ ಅವಧಿಯಲ್ಲಿ, ವೆಚ್ಚಗಳು ಕಡಿಮೆಯಾಗುತ್ತವೆ, ಇದು ಸಂಪತ್ತಿನಲ್ಲಿ ಸಮೃದ್ಧಿಯನ್ನು ತರುತ್ತದೆ. ಕೌಟುಂಬಿಕ ಜೀವನದಲ್ಲಿ ಮಧುರತೆ ಇರಲಿದೆ. ವೈವಾಹಿಕ ಜೀವನದ ಸಮಸ್ಯೆಗಳಿಂದಲೂ ನೀವು ಪರಿಹಾರವನ್ನು ಪಡೆಯುವಿರಿ.


2. ಮಿಥುನ ರಾಶಿ: ಮಿಥುನ ರಾಶಿಯ ಜನರ ಸೌಕರ್ಯ ಸಾಧನಗಳಲ್ಲಿ ಹೆಚ್ಚಳ ಕಂಡುಬರಲಿದೆ. ನೀವು ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಪ್ರಯಾಣ ಸಂಭವಿಸುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಸಮಯ ಉತ್ತಮವಾಗಿರುತ್ತದೆ, ಹೊಸ ವ್ಯವಹಾರಗಳನ್ನು ಆರಂಭಿಸಬಹುದು ಮತ್ತು ಹೆಚ್ಚಿನ ಲಾಭವನ್ನು ಸಹ ಪಡೆಯಬಹುದು. ಇದರೊಂದಿಗೆ, ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಸಮಯವು ಸಾಕಷ್ಟು ಅನುಕೂಲಕರವಾಗಿರುತ್ತದೆ.


3. ಸಿಂಹ ರಾಶಿ: ಸಿಂಹ ರಾಶಿಯ ಜನರಿಗೆ ತಾಯಿ ಲಕ್ಷ್ಮಿಯ ಅನುಗ್ರಹ ಸಿಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸ್ಥಿರತೆಯನ್ನು ತರುವ ಹೊಸ ಆದಾಯದ ಮೂಲಗಳನ್ನು ತೆರೆದುಕೊಳ್ಳಲಿವೆ. ಕೆಲಸ ಮಾಡುವ ಜನರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ ಮತ್ತು ಬಡ್ತಿಯ ಅವಕಾಶವೂ ಇರಲಿದೆ. ನಿಮ್ಮ ವೇತನ ಕೂಡ ಹೆಚ್ಚಾಗಬಹುದು. ವಹಿವಾಟುಗಳಿಗೆ ಸಮಯ ಉತ್ತಮವಾಗಿರುತ್ತದೆ. ಹೂಡಿಕೆ ಮಾಡಬಹುದು. ಕುಟುಂಬ ಸಂಬಂಧಗಳು ಬಲವಾಗಿರುತ್ತವೆ, ನೀವು ಸಹೋದರ ಸಹೋದರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ.


ಇದನ್ನೂ ಓದಿ-ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಬೇಕೆ? ಈ 4 ಅಭ್ಯಾಸಗಳಿಗೆ ಟಾಟಾ-ಬೈಬೈ ಹೇಳಿ!


4. ಕನ್ಯಾರಾಶಿ: ಶುಕ್ರನ ನಕ್ಷತ್ರ ಪರಿವರ್ತನೆ, ಕನ್ಯಾ ರಾಶಿಯ ಜನರ ನೆನೆಗುದಿಗೆ ಬಿದ್ದ  ಕೆಲಸಗಳು ಪೂರ್ಣಗೊಳ್ಳಲಿವೆ. ಅಲ್ಲದೆ, ಸಿಲುಕಿಹಾಕಿಕೊಂಡ ಹಣ ಮರಳಿ ಸಿಗಲಿದೆ. ವ್ಯಾಪಾರಿಗಳಿಗೆ ಹೊಸ ಒಪ್ಪಂದಗಳು ಫೈನಲ್ ಆಗುವ ಸಾಧ್ಯತೆ ಇದೆ. ಹಣಕಾಸಿನ ವೇದಿಕೆ ಸಾಕಷ್ಟು ಬಲವಾಗಿರುತ್ತದೆ, ಆದರೆ ವೆಚ್ಚಗಳ ಮೇಲೆ ನಿಗಾ ಇರಿಸಿ. ಹೊಸ ಕಾರು ಅಥವಾ ಮನೆ ಖರೀದಿಸಬಹುದು.


ಇದನ್ನೂ ಓದಿ-Chanakya Niti: ಹೆಣ್ಣನ್ನು ಖುಷಿಪಡಿಸಲು ಒಂಟೆಯ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಮೊದಲ ಪ್ರಯತ್ನದಲ್ಲೇ ಫುಲ್ ರಿಸಲ್ಟ್ ಗ್ಯಾರಂಟಿ!


(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು  ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.