Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ,  ಮಂಗಳವಾರದ ಈ ದಿನ ಮೂಲಾ ನಕ್ಷತ್ರ, ಶೂಲ ಯೋಗ, ತೈತಿಲ ಕರಣ. ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದಿನ ದಿನವು ನಿಮಗೆ ಉತ್ಸಾಹದಿಂದ ತುಂಬಿರರ್ಲಿದೆ. ಆಧ್ಯಾತ್ಮಿಕ ಚಟುವಟಿಕೆಗಳ ಕಡೆಗೆ ಒಲವು ಹೆಚ್ಚಾಗಲಿದ್ದು, ಕುಟುಂಬ ಸಮೇತ ಯಾವುದಾದರೂ ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣಿಸಲು ಯೋಚಿಸುವಿರಿ. ಯಾವುದೇ ಕೆಲಸದಲ್ಲಿ ಪ್ರಯತ್ನಪಟ್ಟರೆ ಮಾತ್ರ ಅದೃಷ್ಟದ ಬೆಂಬಲ ದೊರೆಯಲಿದೆ.  


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ದಿನವು ಉತ್ತಮವಾಗಿ ಆರಂಭವಾಗಲಿದೆ. ಪುತ್ರನ ಯಶಸ್ಸಿನಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ ವೈವಾಹಿಕ ಜೀವನದಲ್ಲಿ ಸಾಮರಸ್ಯ ತುಂಬಿರಲಿದೆ. ಇಂದು ವಿಶೇಷ ಸಂಬಂಧಿಯೊಬ್ಬರನ್ನು ಭೇಟಿಯಾಗುವಿರಿ. ಹೊಸ ಆದಾಯದ ಮೂಲಗಳು ಹೆಚ್ಚಾಗಲಿವೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನೀವಿಂದು ಪ್ರೀತಿಪಾತ್ರರಿಂದ ಸರ್ಪ್ರೈಸ್ ಉಡುಗೊರೆ ಸ್ವೀಕರಿಸುವಿರಿ. ಮಾಡುವ ಕೆಲಸ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸಿ. ನಿಮ್ಮ ಸಣ್ಣ ಪ್ರಯತ್ನವೂ ಕೂಡ ನಿರೀಕ್ಷಿತ ಫಲ ನೀಡಲಿದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯ ಜನರಿಗಿಂದು ಅನುಕೂಲಕರವಾದ ದಿನವಾಗಿರಲಿದೆ. ನಿರ್ದಿಷ್ಟ ವಿಷಯದ ಕುರಿತು ಸ್ನೇಹಿತರೊಂದಿಗೆ ಚರ್ಚೆ ನಡೆಸುವುದು ಪ್ರಯೋಜನಕಾರಿ ಆಗಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವು ಮನಸ್ಸಿಗೆ ಮುದ ನೀಡಲಿದೆ. ಉದ್ಯೋಗದಲ್ಲಿ ಇಂದು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು. 


ಇದನ್ನೂ ಓದಿ- ಧನುರ್ಮಾಸದಲ್ಲಿ ಸೂರ್ಯನ ಪ್ರಚಂಡ ಪ್ರಭಾವ: ಸಂಕ್ರಾಂತಿವರೆಗೆ ಈ ರಾಶಿಯವರಿಗೆ ಹಣವೋ ಹಣ!


ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮಗಿಂದು ವೃತ್ತಿ ಹಾಗೂ ವೈಯಕ್ತಿಕ ಬದುಕೆರಡಕ್ಕೂ ಒಳ್ಳೆಯ ದಿನ. ಅಧಿಕಾರಿಗಳ ಜೊತೆ ಸ್ವಲ್ಪ ಸಂಯಮದಿಂದ ವರ್ತಿಸಿ, ಹಣಕಾಸಿನ ಲಾಭದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ವ್ಯಾಪಾರಸ್ಥರಿಗೆ ಇಂದು ಉತ್ಸಾಹ ಹೆಚ್ಚಾಗಲಿದೆ. ಕಠಿಣ ಪರಿಶ್ರಮದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳಲಿವೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಅನುಪಯುಕ್ತ ವಿಷಯಗಳಿಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಆಗಷ್ಟೇ ಈ ದಿನವು ನಿಮಗೆ ಸಂತೋಷದ ಕ್ಷಣಗಳನ್ನು ತರಲಿದೆ. ಬಾಕಿ ಉಳಿದಿರುವ ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚು ಗಮನಹರಿಸಬೇಕು. ಇಲ್ಲವಾದರೆ, ಸಮಸ್ಯೆಗಳು ಹೆಚ್ಚಾಗಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮಗಿಂದು ಬಹಳ ವಿಶೇಷವಾದ ದಿನ. ಕೆಲಸದಲ್ಲಿ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳು ನಿಮಗೆ ಸಹಕಾರ ನೀಡುವರು. ಹೀಗಾಗಿ ನಿಮ್ಮ ಕೆಲಸ ಸಲೀಸಾಗಿ ಸಾಗುವುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಉದ್ಯಮಿಗಳಿಗೂ ಶುಭ ದಿನ. ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ಕಾಣುವಿರಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯವರಿಗಿಂದು ಶುಭ ದಿನ. ಆಡಳಿತಾತ್ಮಕ ಹುದ್ದೆಗಳಲ್ಲಿರುವವರಿಗೆ ಬಡ್ತಿ ಸಾಧ್ಯತೆ. ಹೊಸ ವಾಹನ ಖರೀದಿಸುವ ಬಗ್ಗೆ ಕುಟುಂಬಸ್ಥರೊಂದಿಗೆ ಚರ್ಚಿಸುವಿರಿ. ಮಕ್ಕಳಿಂದ ಸಂತೋಷವನ್ನು ಪಡೆಯುತ್ತೀರಿ. ಸಮಾಜದಲ್ಲಿ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸುಕೊಳ್ಳುವಿರಿ. 


ಇದನ್ನೂ ಓದಿ- ಕಪ್ಪು ದಾರವನ್ನು ಈ ರಾಶಿಯವರು ಕಟ್ಟಬಾರದು.. ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ! ಕೋಟ್ಯಾಧಿಪತಿಯೂ ಬೀದಿಗೆ ಬರುತ್ತಾನೆ


ಧನು ರಾಶಿಯವರ ಭವಿಷ್ಯ (Sagittarius Horoscope):  
ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಆಲೋಚನಾ ಸಾಮರ್ಥ್ಯ ಹೆಚ್ಚಿಸಿ. ಇಂದು ನಿಮ್ಮ ಮಾತಿಗೆ ಕಡಿವಾಣ ಹಾಕದಿದ್ದರೆ ಅದರಿಂದಲೇ ಸಮಸ್ಯೆ ಹೆಚ್ಚಾಗಬಹುದು ಎಚ್ಚರ. ವಿದ್ಯಾರ್ಥಿಗಳು ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ಫಲಿತಾಂಶವು ನಿಮ್ಮ ನಿರಾಶೆಗೆ ಕಾರಣವಾಗಲಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನವಾಗಿದೆ. ಪೋಷಕರಿಗೆ ಮಕ್ಕಳಿಂದ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ಬೇರೆಡೆ ಸಿಲುಕಿರುವ ಹಣವು ಕೈ ಸೇರಲಿದೆ. ಹೊಸ ಜನರ ಪರಿಚಯವು ಭವಿಷ್ಯದಲ್ಲಿ ನಿಮಗೆ ಸಹಕಾರಿ ಆಗಲಿದೆ ದಾಂಪತ್ಯ ಜೀವನದಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸುವಿರಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಹೊಸ ಕೆಲಸ ಬದಲಾವಣೆಯನ್ನು ತರಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಬಹುದು. ಇಂದು ನಡೆಯುವ ಕೆಲವು ಹಠಾತ್ ಬದಲಾವಣೆಗಳ ಮೇಲೆ ನಿಗಾವಹಿಸಿ. ಇಲ್ಲದಿದ್ದರೆ ಭಾರೀ ನಷ್ಟವಾಗಬಹುದು. ಅತಿಯಾದ ಕೆಲಸದ ಹೊರೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. 


ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ಮನಸ್ಸಿಗೆ  ನೋವುಂಟು ಮಾಡುತ್ತಿದ್ದ ಬೃಹತ್ ಸಮಸ್ಯೆಗೆ ನೀವಿಂದು ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿ ಪರಿಸ್ಥಿತಿ ಹೇಗೇ ಇದ್ದರೂ ನಿಮ್ಮ ಉತ್ತಮ ಆಲೋಚನೆಗಳಿಂದ ಅದನ್ನು ನಿಭಾಯಿಸಬಹುದು. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆಯನ್ನು ಅನುಭವಿಸುವಿರಿ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.