Snake in Dream Astrology: ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನವೂ ವಿವಿಧ ರೀತಿಯ ಕನಸುಗಳನ್ನ ಕಾಣುತ್ತಾನೆ. ನಿದ್ರೆಯಲ್ಲಿ ವಿವಿಧ ಅರ್ಥವಿಲ್ಲದ ಕನಸುಗಳನ್ನ ಕಾಣುತ್ತಾನೆ. ಈ ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ. ಈ ಕನಸುಗಳಲ್ಲಿ ಕೆಲವು ಮಂಗಳಕರವಾಗಿದ್ದರೆ, ಇನ್ನೂ ಕೆಲವು ಅಶುಭವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಹಾವನ್ನು ಕಂಡರೆ ಅದನ್ನ ಪ್ರಮುಖವೆಂದು ಪರಿಗಣಿಸಲಾಗಿದೆ. ಏಕೆಂದರೆ ಹಿಂದೂ ಧರ್ಮದಲ್ಲಿ ಹಾವುಗಳಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಇದರೊಂದಿಗೆ ಹಾವುಗಳನ್ನು ಸಂಪತ್ತಿನ ರಕ್ಷಕನೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಹಾವನ್ನು ಕಾಣುವುದು ವಿಶೇಷ ಸೂಚನೆಗಳನ್ನು ನೀಡುತ್ತದೆ. ಕನಸಿನಲ್ಲಿ ಹಾವುಗಳನ್ನು ಮತ್ತೆ ಮತ್ತೆ ನೋಡುವುದು ಸಹ ಜಾತಕದಲ್ಲಿ ಕಾಳ ಸರ್ಪದೋಷದ ಸಂಕೇತವಾಗಿದೆ, ಇದನ್ನು ತೆಗೆದುಹಾಕಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಕನಸಿನಲ್ಲಿ ಹಾವು ಕಂಡರೆ ಶುಭವೋ-ಅಶುಭವೋ?


ಕನಸಿನಲ್ಲಿ ಕಪ್ಪು ಹಾವು: ಕನಸಿನಲ್ಲಿ ಕಪ್ಪು ಬಣ್ಣದ ಹಾವನ್ನು ನೋಡುವುದು ಒಳ್ಳೆಯದಲ್ಲ. ಇದು ಹಣದ ನಷ್ಟವನ್ನು ಸೂಚಿಸುತ್ತದೆ ಅಥವಾ ಮುಂದಿನ ದಿನಗಳಲ್ಲಿ ನೀವು ಕೆಲವು ಕಾಯಿಲೆಯಿಂದ ಬಳಲುತ್ತೀರಿ ಎಂಬುದನ್ನ ಸೂಚಿಸುತ್ತದೆ. 


ಇದನ್ನೂ ಓದಿ: 57 ವರ್ಷಗಳ ಬಳಿಕ ನಿರ್ಮಾಣವಾದ ರಾಜಯೋಗವಿದು !ಈ ರಾಶಿಯವರ ಮೇಲಾಗುವುದು ಸಿರಿ ಸಂಪತ್ತಿನ ಮಳೆ ! ಇದ್ದಕ್ಕಿದ್ದಂತೆ ಒಲಿದು ಬರುವುದು ಧನ ಸಂಪತ್ತು


ಕನಸಿನಲ್ಲಿ ಬಿಳಿ ಹಾವು: ಕನಸಿನಲ್ಲಿ ಬಿಳಿ ಹಾವನ್ನು ನೋಡುವುದು ತುಂಬಾ ಮಂಗಳಕರ. ಶೀಘ್ರದಲ್ಲೇ ನೀವು ಧನಲಾಭವನ್ನು ಪಡೆಯುತ್ತೀರಿ ಎಂದು ಇದು ಸೂಚಿಸುತ್ತದೆ. ಇಂತಹ ಕನಸು ಅಪಾರ ಸಂಪತ್ತು ಮತ್ತು ಗೌರವ ಪಡೆಯುವುದನ್ನು ಸೂಚಿಸುತ್ತದೆ.


ಅನೇಕ ಹಾವುಗಳು: ನೀವು ಕನಸಿನಲ್ಲಿ ಅನೇಕ ಹಾವುಗಳನ್ನ ಕಂಡರೆ ಅದನ್ನು ಶುಭಕರವಲ್ಲ. ಕನಸಿನ ಪುಸ್ತಕದಲ್ಲಿ ಇಂತಹ ಕನಸುಗಳನ್ನ ಅಶುಭವೆಂದು ಹೇಳಲಾಗುತ್ತದೆ ಮತ್ತು ಈ ಕನಸು ಜೀವನದಲ್ಲಿ ಕೆಲವು ದೊಡ್ಡ ತೊಂದರೆಗಳನ್ನು ಸೂಚಿಸುತ್ತದೆ.


ಕನಸಿನಲ್ಲಿ ಹಾವು ಕೊಲ್ಲುವುದು: ಕನಸಿನಲ್ಲಿ ಹಾವನ್ನು ಕೊಲ್ಲುವುದನ್ನು ನೋಡುವುದು ಒಳ್ಳೆಯದು. ಇದರರ್ಥ ನೀವು ಶತ್ರುವಿನ ಮೇಲೆ ವಿಜಯವನ್ನು ಪಡೆಯಲಿದ್ದೀರಿ ಅಥವಾ ನೀವು ಕೆಲವು ದೊಡ್ಡ ಸಮಸ್ಯೆಗಳಿಂದ ಮುಕ್ತಿ ಹೊಂದಲಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ.   


ಕನಸಿನಲ್ಲಿ ಹಾವು ಕಚ್ಚಿದರೆ: ಕನಸಿನಲ್ಲಿ ಹಾವು ಕಚ್ಚಿದರೆ ಅಥವಾ ಕುಟುಕಿದರೆ ಅದು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಕೆಲವು ಕಾಯಿಲೆಗಳು ನಿಮ್ಮನ್ನು ಸುತ್ತುವರಿಯಬಹುದು ಎಂದು ಇದು ಹೇಳುತ್ತದೆ.


ಕನಸಿನಲ್ಲಿ ಸತ್ತ ಹಾವು: ಕನಸಿನಲ್ಲಿ ಸತ್ತ ಹಾವು ಮತ್ತೆ ಮತ್ತೆ ಕಂಡರೆ ಅದು ಜಾತಕದಲ್ಲಿ ರಾಹು ದೋಷದ ಲಕ್ಷಣವನ್ನು ಸೂಚಿಸುತ್ತದೆ. ಹೀಗಾಗಿ ನೀವು ರಾಹು ದೋಷದಿಂದ ಮುಕ್ತಿ ಹೊಂದಲು ಪರಿಹಾರ ಕ್ರಮಗಳನ್ನ ಕೈಗೊಳ್ಳಬೇಕು.


ಇದನ್ನೂ ಓದಿ: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ; ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!!


(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.