ಈ ರಾಶಿಯವರ ಭಾಗ್ಯ ಬೆಳಗುತ್ತದೆ ವರ್ಷದ ಮೊದಲ ಸೂರ್ಯ ಗ್ರಹಣ !
ಸೂರ್ಯಗ್ರಹಣದ ಆರಂಭವು ಏಪ್ರಿಲ್ 10 ರಂದು ಬೆಳಿಗ್ಗೆ 07:05 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಗ್ರಹಣಕ್ಕೆ ಮಹತ್ವವಿದೆ. ಅದರಲ್ಲೂ ಈ ಸೂರ್ಯಗ್ರಹಣವು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
ಬೆಂಗಳೂರು : 2023 ರ ಮೊದಲ ಸೂರ್ಯಗ್ರಹಣವು 10 ಏಪ್ರಿಲ್ 2023 ರಂದು ನಡೆಯಲಿದೆ. ಈ ಸಮಯದಲ್ಲಿ, ಸೂರ್ಯನು ಮೇಷ ರಾಶಿಯಲ್ಲಿದ್ದು, ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತಾನೆ. ಭಾರತದಲ್ಲಿ ಸೂರ್ಯಗ್ರಹಣದ ಆರಂಭವು ಏಪ್ರಿಲ್ 10 ರಂದು ಬೆಳಿಗ್ಗೆ 07:05 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ಜ್ಯೋತಿಷ್ಯದ ಪ್ರಕಾರ ಈ ಗ್ರಹಣಕ್ಕೆ ಮಹತ್ವವಿದೆ. ಇದು ದ್ವಾದಶ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಈ ಸೂರ್ಯಗ್ರಹಣವು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
ಯಾವಾಗ ಸಂಭವಿಸುತ್ತದೆ ಸೂರ್ಯಗ್ರಹಣ ? :
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಮಧ್ಯೆ ಬಂದಾಗ, ಸೂರ್ಯನ ದೃಷ್ಟಿ ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ಬಂಧಿಸಲ್ಪಡುತ್ತದೆ. ಸೂರ್ಯಗ್ರಹಣವು ಧಾರ್ಮಿಕ-ಜ್ಯೋತಿಷ್ಯ ಮಾತ್ರವಲ್ಲ, ಖಗೋಳಶಾಸ್ತ್ರದ ಪ್ರಮುಖ ವಿದ್ಯಮಾನವಾಗಿದೆ.
ಇದನ್ನೂ ಓದಿ : ಈ 2 ದಿನ ಯಾವುದೇ ಕಾರಣಕ್ಕೂ ತುಳಸಿ ಗಿಡಕ್ಕೆ ನೀರೆರೆಯಬೇಡಿ
ಏಪ್ರಿಲ್ 2023 ರ ಸೂರ್ಯಗ್ರಹಣವು ಈ ರಾಶಿಯವರಿಗೆ ಲಾಭದಾಯಕ :
ವೃಷಭ ರಾಶಿ : 2023 ರ ಮೊದಲ ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಈ ರಾಶಿಯವರ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಲಾಭವಾಗುತ್ತದೆ. ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ಉನ್ನತ ಹುದ್ದೆಗೆ ಏರುವ ಅವಕಾಶವಿರುತ್ತದೆ. ವೇತನದಲ್ಲಿಯೂ ಹೆಚ್ಚಳವಾಗಲಿದೆ. ವ್ಯಾಪಾರ ಆರಂಭಿಸುವುದಕ್ಕೂ ಇದು ಸರಿಯಾದ ಸಮಯ.
ಮಿಥುನ ರಾಶಿ : ಸೂರ್ಯಗ್ರಹಣವು ಮಿಥುನ ರಾಶಿಯವರ ಜೀವನದಲ್ಲಿ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ರಾಶಿಯವರು ಇದ್ದಕ್ಕಿದ್ದಂತೆ ಹಣವನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿಯೂ ಇದು ಬಹಳ ಮುಖ್ಯ ಸಮಯವಾಗಿರಲಿದೆ. ಉದ್ಯಮಿಗಳ ವ್ಯಾಪಾರವು ವೇಗವಾಗಿ ಬೆಳೆಯುತ್ತದೆ.
ಇದನ್ನೂ ಓದಿ : Vastu Tips: ಈ ಒಂದು ವಸ್ತುವನ್ನು ಮನೆಯಲ್ಲಿ ಇಡಿ, ಧನವೃಷ್ಟಿ ಜೊತೆ ಆರೋಗ್ಯ ವೃದ್ಧಿಯೂ ಆಗುತ್ತೆ.!
ಧನು ರಾಶಿ : ಈ ಸೂರ್ಯಗ್ರಹಣವು ಧನು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಜೀವನದಲ್ಲಿ ಒಂದರ ನಂತರ ಒಂದರಂತೆ ಯಶಸ್ಸು ಕಾಣುವಿರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.