ಬೆಂಗಳೂರು : ಜ್ಯೋತಿಷ್ಯದಲ್ಲಿ, ಪ್ರತಿ ಗ್ರಹದ ಸಂಚಾರ ಮತ್ತು  ಪಥ  ಬದಲಾವಣೆಗೆ ವಿಶೇಷ ಪ್ರಾಮುಖ್ಯತೆ ಇದೆ. ಯಾವುದಾದರೊಂದು ರಾಶಿಯ ಅಧಿಪತ್ಯ ಒಂದು ಗ್ರಹದ ಕೈಯ್ಯಲ್ಲಿ ಇರುತ್ತದೆ. ಈ ಕಾರಣದಿಂದಲೇ ಗ್ರಹಗಳ ರಾಶಿ ಬದಲಾವಣೆ, ಗ್ರಹಗಳ ನಡೆ ಬದಲಾವಣೆಯಾದಾಗ ಅದು ಪ್ರಾಮುಖ್ಯತೆ ವಹಿಸುತ್ತದೆ. ಬೃಹಸ್ಪತಿಯನ್ನು ಗ್ರಹಗಳ ಗುರು ಎಂದೇ ಕರೆಯಲಾಗುತ್ತದೆ.  ಹಾಗಾಗಿ ಈ ರಾಶಿಯ ಚಲನೆ ಮತ್ತು ಸಂಚಾರ ಪ್ರತಿ ರಾಶಿ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಫೆಬ್ರವರಿ ಒಂದರಂದು ಗುರು ತನ್ನ  ಯುವಾವಸ್ಥೆಗೆ ಪ್ರವೇಶ ಮಾಡಲಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಗುರು 12-18 ಡಿಗ್ರಿಗಳಷ್ಟು ಪ್ರಯಾಣ ಬೆಳೆಸುತ್ತಾನೆ. ಇದರಿಂದ ಕೆಲವು ರಾಶಿಯವರಿಗೆ ರಾಜಯೋಗಕ್ಕೆ ಸಮಾನವಾದ ಶುಭ ಫಲಗಳು ದೊರೆಯುತ್ತವೆ.


COMMERCIAL BREAK
SCROLL TO CONTINUE READING

ಧನು ರಾಶಿ :
ಧನು ರಾಶಿಯ ಜನರು ಗುರುವಿನ ಸ್ಥಾನ ಬದಲಾವಣೆಯ ಕಾರಣದಿಂದಾಗಿ, ಅನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ. ಗುರು ನಿಮ್ಮ ಜಾತಕದ ನಾಲ್ಕನೇ ಮನೆಯನ್ನು ಪ್ರವೇಶಿಸುತ್ತಿದ್ದಾನೆ. ಇದರಿಂದ ಹಂಸ ರಾಜಯೋಗ ಸೃಷ್ಟಿಯಾಗಲಿದೆ. ಈ ರಾಜಯೋಗವು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಈ ಸಮಯದಲ್ಲಿ, ವೃತ್ತಿಯಲ್ಲಿ ಉನ್ನತ ಹುದ್ದೆಗೆ ಏರುವುದು ಸಾಧ್ಯವಾಗುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ಜನರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.  


ಇದನ್ನೂ ಓದಿ : Dustbin Vastu Tips: ತಪ್ಪಾಗಿಯೂ ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡಬೇಡಿ


ಮಿಥುನ ರಾಶಿ :
ಗುರುವಿನ ಈ ಬದಲಾವಣೆಯು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಗುರು ಈ ರಾಶಿಯವರ ಜಾತಕದ ಕರ್ಮದ ಮನೆಗೆ ಪ್ರವೇಶಿಸುತ್ತಾನೆ. ಇದರೊಂದಿಗೆ ಮಿಥುನ ರಾಶಿಯವರ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ. ಇವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪೂರ್ವಿಕರ ಆಸ್ತಿಯ ಲಾಭ ಪಡೆಯುವುದು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶವಿರುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ.


ಮೀನ ರಾಶಿ :
ದೇವಗುರು ಸ್ಥಾನದ ಬದಲಾವಣೆಯಿಂದಾಗಿ, ಮೀನ ರಾಶಿಯಲ್ಲಿ ಕೂಡಾ ಹಂಸ ರಾಜಯೋಗ ರೂಪುಗೊಳ್ಳುತ್ತದೆ. ಇದು ಹಠಾತ್ ಸಂಪತ್ತಿಗೆ ದಾರಿ ಮಾಡಿಕೊಡುತ್ತದೆ. ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಬಲಪಡಿಸುತ್ತದೆ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಉತ್ತಮ ಸಂಬಂಧಗಳು ಏರ್ಪಡುತ್ತವೆ.   ವೃತ್ತಿಜೀವನದ ದೃಷ್ಟಿಯಿಂದಲೂ, ಗುರುವಿನ ಈ ಬದಲಾವಣೆಯು ತುಂಬಾ ಮಂಗಳಕರವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.


ಇದನ್ನೂ ಓದಿ : Ketu Astrology: ಕೇತುವಿನ ಪ್ರಭಾವದಿಂದ 2023ರಲ್ಲಿ ಈ ರಾಶಿಯವರ ಮೇಲೆ ಅಶುಭ ಪರಿಣಾಮ!


ಕನ್ಯಾರಾಶಿ :
ದೇವಗುರುವಿನ ಪರಿವರ್ತನೆಯಿಂದ ಕನ್ಯಾ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಗುರು ಗ್ರಹವು ತನ್ನ ಪಥವನ್ನು ಬದಲಾಯಿಸಿ, ಕನ್ಯಾ ರಾಶಿಯ ಜಾತಕದ 7 ನೇ ಮನೆಗೆ ಪ್ರವೇಶಿಸುತ್ತದೆ. ಗುರುವಿನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ರಾಜಯೋಗ ಸೃಷ್ಟಿಯಾಗಲಿದೆ. ಇದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ಹಾಗಾಗಿ ನೀವು ಕೈ ಹಾಕುವ ಪ್ರತಿಯೊಂದು  ಕೆಲಸದಲ್ಲಿ ಯಶಸ್ವಿಯಾಗುವಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.