Astrology: ಅತ್ಯಂತ ಅಶುಭ ನಕ್ಷತ್ರ ಇದು, ಜನವರಿ ತಿಂಗಳಿನಲ್ಲಿ ಯಾವ-ಯಾವ ದಿನ ಈ ನಕ್ಷತ್ರ ಇರಲಿದೆ?

Astrology: ಒಟ್ಟು 27 ನಕ್ಷತ್ರಗಳ ಕುರಿತು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಇವುಗಳಲ್ಲಿ ಗಂಡ್ ಮೂಲ ನಕ್ಷತ್ರವನ್ನು ಅತ್ಯಂತ ಅಶುಭ ನಕ್ಷತ್ರವೆಂದು ಪರಿಗಣಿಸಲಾಗುತ್ತದೆ, ಈ ಜನವರಿಯಲ್ಲಿ ಗಂಡ್ ಮೂಲ ನಕ್ಷತ್ರವು ಯಾವಾಗ ಮತ್ತು ಎಷ್ಟು ಬಾರಿ ದಿನ ಇರಲಿದೆ ಮತ್ತು ಅದು ನಮ್ಮ ಜೀವನದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 5, 2023, 04:29 PM IST
  • ಅಶುಭ ನಕ್ಷತ್ರಗಳನ್ನು ಗಂಡ್ ಮೂಲ ನಕ್ಷತ್ರ ಎಂದು ಕರೆಯಲಾಗುತ್ತದೆ.
  • ಅಶ್ವಿನಿ, ಆಶ್ಲೇಷ, ಮಾಘ, ಜ್ಯೇಷ್ಠ, ಮೂಲ ಮತ್ತು ರೇವತಿ ಗಂಡ್ ನಕ್ಷತ್ರಪುಂಜಗಳ ವರ್ಗದಲ್ಲಿ ಬರುತ್ತವೆ.
  • ವ್ಯಕ್ತಿಯು ಈ ನಕ್ಷತ್ರಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಪಡೆಯುತ್ತಾನೆ.
Astrology: ಅತ್ಯಂತ ಅಶುಭ ನಕ್ಷತ್ರ ಇದು, ಜನವರಿ ತಿಂಗಳಿನಲ್ಲಿ ಯಾವ-ಯಾವ ದಿನ ಈ ನಕ್ಷತ್ರ ಇರಲಿದೆ? title=
Gand Mool Effect

Ganda Mool Nakshtra 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 27 ನಕ್ಷತ್ರಗಳಿವೆ. ಶಾಸ್ತ್ರಗಳ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಗಳು ಖಂಡಿತವಾಗಿಯೂ ಮಾನವ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಆಕಾಶದಲ್ಲಿ ಇರುವ ತಾರೆಗಳನ್ನು ನಕ್ಷತ್ರಗಳು ಎಂದು ಕರೆಯಲಾಗುತ್ತದೆ. ಚಂದ್ರನು ಭೂಮಿಯ 360 ಡಿಗ್ರಿ ಕಕ್ಷೆಯನ್ನು 27.3 ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ, ಈ ಕಕ್ಷೆಯಲ್ಲಿ ಚಂದ್ರನು ಒಟ್ಟು 27 ನಕ್ಷತ್ರಗಳ ಮೂಲಕ ಹಾದುಹೋಗುತ್ತಾನೆ.

ಚಂದ್ರ ಮತ್ತು ತಾರೆಯರ ಸಮೂಹಗಳ ಈ ಸಂಯೋಜನೆಯನ್ನು ನಕ್ಷತ್ರ ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಕೆಲ ನಕ್ಷತ್ರಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಕೆಲ ನಕ್ಷತ್ರಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಗಂಡ್ ಮೂಲ ನಕ್ಷತ್ರವನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ, ಈ ವರ್ಷದ ಜನವರಿಯಲ್ಲಿ ಗಂಡ್ ಮೂಲ ನಕ್ಷತ್ರವು ಯಾವಾಗ ಮತ್ತು ಎಷ್ಟು ಬಾರಿ ಬೀಳುತ್ತದೆ ಮತ್ತು ಅದು ನಮ್ಮ ಜೀವನದ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಗಂಡ್ ಮೂಲ ನಕ್ಷತ್ರ ಎಂದರೇನು?
ಅಶುಭ ನಕ್ಷತ್ರಗಳನ್ನು ಗಂಡ್ ಮೂಲ ನಕ್ಷತ್ರ ಎಂದು ಕರೆಯಲಾಗುತ್ತದೆ. ಅಶ್ವಿನಿ, ಆಶ್ಲೇಷ, ಮಾಘ, ಜ್ಯೇಷ್ಠ, ಮೂಲ ಮತ್ತು ರೇವತಿ ಗಂಡ್ ನಕ್ಷತ್ರಪುಂಜಗಳ ವರ್ಗದಲ್ಲಿ ಬರುತ್ತವೆ. ವ್ಯಕ್ತಿಯು ಈ ನಕ್ಷತ್ರಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಪಡೆಯುತ್ತಾನೆ. ಒಬ್ಬ ವ್ಯಕ್ತಿಗೆ ಇದು ಎಷ್ಟು ಶುಭ ಮತ್ತು ಅಶುಭವಾಗಿರುತ್ತದೆ ಎಂಬುದು ಜಾತಕದಲ್ಲಿನ ಆರು ನಕ್ಷತ್ರಗಳಲ್ಲಿ ಯಾವುದಾದರೂ ಒಂದರಲ್ಲಿ ಚಂದ್ರನ ಸ್ಥಾನ ಮತ್ತು ಅದು ಯಾವ ನಕ್ಷತ್ರದಲ್ಲಿದೆ ಎಂಬುದನ್ನು ನೋಡಿ ನಿರ್ಧರಿಸಲಾಗುತ್ತದೆ.

ಶಾಸ್ತ್ರಗಳ ಪ್ರಕಾರ, ಈ ನಕ್ಷತ್ರದಲ್ಲಿ ಜನಿಸಿದವರ ಜೀವನವು ಏರುಪೇರು ಮತ್ತು ಉದ್ವಿಗ್ನತೆಯಿಂದ ಕೂಡಿರುತ್ತದೆ. ಕುಟುಂಬದ ಪ್ರಗತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ, ಹುಟ್ಟಿದವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಇರುತ್ತವೆ, ಕುಟುಂಬದಲ್ಲಿ ಬಡತನ ಬರಲಾರಂಭಿಸುತ್ತದೆ. ಆದ್ರೆ, ಪೂಜೆ-ಶಾಂತಿಗಳನ್ನು ಮಾಡುವ ಮೂಲಕ ಜನರು ಅವುಗಳನ್ನು ಸರಿಪಡಿಸಿಕೊಳ್ಳುತ್ತಾರೆ.

ಇದನ್ನೂ ಓದಿ-Astro Remedies 2023: ಹೊಸ ವರ್ಷದಲ್ಲಿ ಅದೃಷ್ಟದ ಬೆಂಬಲ ಪಡೆಯಲು ಇಂದಿನಿಂದಲೇ ಈ ಕೆಲಸ ಆರಂಭಿಸಿ

ಜನವರಿ 2023 ರಲ್ಲಿ ಗಂಡಮೂಲ ನಕ್ಷತ್ರಗಳು ಯಾವಾಗ ಬೀಳುತ್ತಿವೆ?

ಗಂಡ್ ಮೂಲ ನಕ್ಷತ್ರ ಆರಂಭ: ಸೋಮವಾರ, 09 ಜನವರಿ 2023 06:05 AM ಕ್ಕೆ

ಗಂಡ್  ಮೂಲ ನಕ್ಷತ್ರ ಅಂತ್ಯ: ಬುಧವಾರ, ಜನವರಿ 11, 2023 11:50 AM ಕ್ಕೆ

ಗಂಡ್ ಮೂಲ ನಕ್ಷತ್ರ ಆರಂಭ: 18 ಜನವರಿ 2023, ಬುಧವಾರ ಸಂಜೆ 05:23 ಕ್ಕೆ

ಗಂಡ್ ಮೂಲ ನಕ್ಷತ್ರ ಅಂತ್ಯ: ಶುಕ್ರವಾರ, 20 ಜನವರಿ 2023 ಮಧ್ಯಾಹ್ನ 12:40 ಕ್ಕೆ

ಗಂಡ್ ಮೂಲ ನಕ್ಷತ್ರ ಆರಂಭ: ಗುರುವಾರ, 26 ಜನವರಿ 2023 06:57 PM ಕ್ಕೆ

ಗಂಡ್ ಮೂಲ ಅಂತ್ಯ : ಶನಿವಾರ, ಜನವರಿ 28, 2023 07:06 PM ಕ್ಕೆ

ಇದನ್ನೂ ಓದಿ-Special Tea: ತೂಕ ಇಳಿಕೆಯಿಂದ ಹಿಡಿದು ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಈ ಟೀ ರಾಮಬಾಣ ಔಷಧಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News