ದಿನಭವಿಷ್ಯ 11-10-2024: ಆಯುಧ ಪೂಜೆಯಂದೇ ಸುಕರ್ಮ ಯೋಗ, ದ್ವಾದಶ ರಾಶಿಗಳಿಗೆ ಏನು ಫಲ..!
Today Horoscope 11th October 2024: ಆಯುಧಪೂಜೆ ಹಬ್ಬದ ಈ ದಿನ ಶುಕ್ರವಾರ ಉ.ಷಾ. ನಕ್ಷತ್ರ, ಸುಕರ್ಮ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಅಷ್ಟಮಿಯ ಈ ದಿನ ಶುಕ್ರವಾರ ಉ.ಷಾ. ನಕ್ಷತ್ರ, ಸುಕರ್ಮ ಯೋಗ, ಬಾಲವ ಕರಣ ಇರಲಿದೆ. ಆಯುಧಪೂಜೆ ಹಬ್ಬದ ಈ ದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಶಕ್ತಿಯುತವಾದ ದಿನ. ಯಾವುದೇ ಕೆಲಸಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಭಾವನಾತ್ಮಕವಾಗಿ ಅಲ್ಲದೆ ಚೆನ್ನಾಗಿ ಯೋಚಿಸಿ ನಿರ್ಧರಿಸಿದರೆ ಪ್ರಯೋಜನ. ಧನಾತ್ಮಕ ಫಲಗಳನ್ನು ಪಡೆಯಲು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ. ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಸಂತೋಷ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇದು ನಿಮಗೆ ಸಮಸ್ಯೆಗಳಿಂದ ಕೂಡಿದ ದಿನ. ಆದರೂ, ವೈವಾಹಿಕ ಜೀವನದಲ್ಲಿರುವ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಬಹುದು. ವಿವಾದಗಳ ಸಂದರ್ಭದಲ್ಲಿ ತಾಳ್ಮೆಯಿಂದಿರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಧನಾತ್ಮಕ ಫಲಗಳನ್ನು ಕಾಣುವಿರಿ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಹೆಚ್ಚಾಗಲಿದೆ. ಕೆಲಸ ಒತ್ತಡದಿಂದ ಆಯಾಸ ಹೆಚ್ಚಾಗಬಹುದು. ದಿಢೀರ್ ವೆಚ್ಚಗಳು ನಿಮ್ಮ ಬಜೆಟ್ ಹಾಳುಮಾಡಬಹುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳಿಬರಲಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಹಣಕಾಸಿನ ದೃಷ್ಟಿಯಿಂದ ಇದು ನಿಮಗೆ ಒಳ್ಳೆಯ ದಿನ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ಉದ್ಯೋಗದಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆಯಲಿದ್ದು ಹೊಸ ಎತ್ತರಕ್ಕೆ ಬೆಳೆಯುವಿರಿ. ಖರ್ಚುಗಳು ಹೆಚ್ಚಾಗುವುದರಿಂದ ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು.
ಇದನ್ನೂ ಓದಿ- ಶನಿ ರಾಶಿಗೆ ರಾಹು ಪ್ರವೇಶ: 2025ರಲ್ಲಿ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮನೆ, ವಾಹನ ಯೋಗ
ಸಿಂಹ ರಾಶಿಯವರ ಭವಿಷ್ಯ (Leo Horoscope):
ನಿಮ್ಮ ವೈಯಕ್ತಿಕ ಜೀವನದ ಯಾವುದೇ ವಿಷಯದಲ್ಲಿ ಸಹೋದರ-ಸಹೋದರಿಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ಪ್ರೀತಿ ಪಾತ್ರರಿಂದ ಆಶ್ಚರ್ಯಕರ ಉಡುಗೊರೆಗಳನ್ನು ಪಡೆಯುವಿರಿ. ಕಳೆದುಹೋದ ಪ್ರೀತಿ ಮತ್ತೆ ಕೈಗೂಡುವ ದಿನ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ನಿಮಗಿಂದು ದಿಢೀರ್ ಧನಲಾಭ ಸಾಧ್ಯತೆ ಇದೆ. ಬಹು ದಿನಗಳಿಂದ ಈಡೇರದ ಕನಸೊಂದು ನನಸಾಗಲಿದೆ. ಉದ್ಯೋಗದಲ್ಲಿದ್ದ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ಕೈಗೂದಲಿದೆ. ನಿಮ್ಮ ಮಕ್ಕಳ ಕಡೆಯಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಕೆಲಸದಲ್ಲಿ ಸಂಪೂರ್ಣ ಗಮನ ಹರಿಸಿದರೆ ಶುಭ ಫಲಗಳನ್ನು ಪಡೆಯಬಹುದು. ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಗಳನ್ನು ಯೋಜಿಸಬಹುದು. ವೃತ್ತಿಪರರು ಸಹೋದ್ಯೋಗಿಗಳೊಂದಿಗೆ ನಯವಾಗಿ ವರ್ತಿಸಿದರೆ ಒಳಿತು. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಗಳು ನಿಮ್ಮ ಮನಸ್ಸಿನ ಸಂತಸವನ್ನು ಇಮ್ಮಡಿಗೊಳಿಸಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮಗೆ ಆನಂದದಾಯಕ ದಿನ. ನಿಮ್ಮ ಕನಸುಗಳು ನನಸಾಗುವುದರಿಂದ ಸಂತೋಷಕ್ಕೆ ಪಾರವೇ ಇಲ್ಲದ ಸ್ಥಿತಿಯನ್ನು ಅನುಭವಿಸುವಿರಿ. ವೃತ್ತಿ ಬದುಕಿನ ಸಮಸ್ಯೆಗಳಿಗೆ ಪರಿಹಾರ. ಕೆಲಸಗಳು ಸುಲಭವಾಗಿ ಪೂರ್ಣಗೊಂಡು ವಿರೋಧಿಗಳನ್ನು ಮಣಿಸುವಿರಿ.
ಇದನ್ನೂ ಓದಿ- ಗುರು ಶುಕ್ರ ಮೈತ್ರಿಯಿಂದ ಸಂಸಪ್ತಕ ರಾಜಯೋಗ, ಈ ರಾಶಿಯವರಿಗೆ ಹಣಕ್ಕಿಲ್ಲ ಕೊರತೆ, ಮುಟ್ಟಿದ್ದೆಲ್ಲಾ ಬಂಗಾರ
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಕೆಲಸದ ಸ್ಥಳದಲ್ಲಿ ಏರಿಳಿತಗಳನ್ನು ಅನುಭವಿಸುವಿರಿ. ಆದರೆ, ನಿಮ್ಮ ಬುದ್ದಿವಂತಿಕೆಯಿಂದ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಅಚ್ಚರಿಯ ಫಲಿತಾಂಶ ಪಡೆಯಬಹುದು. ಆಸ್ತಿ ವಿಚಾರದಲ್ಲಿ ಲಾಭವಾಗಲಿದೆ. ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ ಹೆಚ್ಚಾಗಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ನಿಮಗೆ ಸಂತೋಷದ ದಿನ. ನಿಮ್ಮ ಒತ್ತಡಕ್ಕೆ ಕಾರಣವಾಗಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಮಕ್ಕಳು ನಿಮಗಾಗಿ ಒಳ್ಳೆಯ ಸುದ್ದಿಯನ್ನು ನೀಡಬಹುದು. ವೃತ್ತಿ ಬದುಕಿನಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಸಂಜೆ ವೇಳೆಗೆ ಧನಾಗಮನ ಸಾಧ್ಯತೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇದು ನಿಮಗೆ ಸಮಸ್ಯೆಗಳಿಂದ ತುಂಬಿದ ದಿನ. ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ವಿಚಾರದಿಂದ ಇಂದು ಪರಿಹಾರ ದೊರೆಯಬಹುದು. ಯಾವುದೇ ಚಿರಾಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ಬಹಳ ಜಾಗರೂಕರಾಗಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮಗೆ ಅತ್ಯಂತ ಫಲಪ್ರದವಾದ ದಿನ. ವ್ಯವಹಾರದಲ್ಲಿ ಭಾರೀ ಲಾಭ ಸಾಧ್ಯತೆ. ಹೊಸ ಕೆಲಸಗಳನ್ನು ಆರಂಭಿಸಲು ಇದು ಸಕಾಲ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಂಭವವಿದೆ. ಮಕ್ಕಳ ಪ್ರಗತಿಯಿಂದ ಹೆಮ್ಮೆಯ ಕ್ಷಣಗಳನ್ನು ಅನುಭವಿಸುವಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.