ವಕೀಲನ ಲುಕ್‌

  • Oct 10, 2024, 01:20 AM IST
1 /6

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ʼಟಾಕ್ಸಿಕ್‌ʼ ಸಿನಿಮಾ ತಂಡ ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿಕೊಂಡು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ.

2 /6

ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʼಟಾಕ್ಸಿಕ್‌ʼ ಸಿನಿಮಾದ 30 ದಿನಗಳ ಶೂಟಿಂಗ್‌ ಈಗಾಗಲೇ ಮುಗಿದಿದೆ. 

3 /6

ಬೆಂಗಳೂರು ಹೊರವಲಯದಲ್ಲಿ ಈ ಸಿನಿಮಾಕ್ಕಾಗಿ ಬೃಹತ್‌ ಸೆಟ್‌ಅನ್ನು ನಿರ್ಮಿಸಲಾಗಿತ್ತು. ಇದೀಗ ಚಿತ್ರತಂಡವು ನೇರವಾಗಿ ವಾಣಿಜ್ಯ ನಗರಿ ಮುಂಬೈಗೆ ಶಿಫ್ಟ್‌ ಆಗಿದೆ.

4 /6

ಈ ನಡುವೆ ಯಶ್‌ ಅವರ ಹೊಸ ಲುಕ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿ ಸಖತ್‌ ವೈರಲ್‌ ಆಗುತ್ತಿದೆ. ಕೋರ್ಟ್‌ ಧರಿಸಿ ವಕೀಲನ ಲುಕ್‌ನಲ್ಲಿ ರಾಕಿಬಾಯ್‌ ಕಾಣಿಸಿಕೊಂಡಿದ್ದಾರೆ. 

5 /6

ವಕೀಲನ ಲುಕ್‌ನಲ್ಲಿರುವ ನಟ ಯಶ್‌ ಬ್ಲಾಕ್‌ ಕೋಟ್ ಧರಿಸಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ವೈರಲ್‌ ಆಗಿರುವ ಈ ಫೋಟೋ ಸದ್ಯ ಜಾಹಿರಾತಿನದ್ದು ಎಂದು ಹೇಳಲಾಗುತ್ತಿದೆ. ಆದರೆ ಇದು ಸಿನಿಮಾದ್ದಾ ಅಥವಾ ಜಾಹಿರಾತಿದ್ದಾ? ಅನ್ನೋದು ಇನ್ನೂ ಕನ್ಫರ್ಮ್‌ ಆಗಿಲ್ಲ.

6 /6

ಮುಂಬೈನಲ್ಲಿ ಈ ಆಡ್‌ ಶೂಟ್‌ ನಡೆದಿದ್ದು, ನಟಿ ರಾಧಿಕಾ ಪಂಡಿತ್‌ ಸಹ ಯಶ್‌ ಜೊತೆಗಿದ್ದರು. ಆದರೆ ಫ್ಯಾನ್ಸ್‌ಗೆ ʼಟಾಕ್ಸಿಕ್ʼ ಸಿನಿಮಾದಲ್ಲಿ ರಾಕಿಬಾಯ್ ಪಾತ್ರ ಹೇಗಿರುತ್ತೆ? ಈ ಸಿನಿಮಾದಲ್ಲಿ ಯಶ್‌ ವಕೀಲನಾ ಅನ್ನೋ ಸಂಶಯ ಮೂಡಿದೆ.