ಏಪ್ರಿಲ್ 22ರಿಂದ ಸೂರ್ಯ, ರಾಹು, ಗುರು ಮೈತ್ರಿ: ಈ ರಾಶಿಯವರು ತುಂಬಾ ಎಚ್ಚರದಿಂದಿರಬೇಕು
Sun-Rahu-Jupiter Conjunction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ರಾಶಿಚಕ್ರ ಚಿಹ್ನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಕೂಡಿದಾಗ ಗ್ರಹಗಳ ಯುತಿ ಉಂಟಾಗುತ್ತದೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಇದೀಗ ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಅಂತಹದ್ದೇ ಒಂದು ಗ್ರಹ ಮೈತ್ರಿ ರೂಪುಗೊಳ್ಳಲಿದೆ.
Surya-Rahu-Guru Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಸೂರ್ಯ, ರಾಹು ಮತ್ತು ಗುರು ಗ್ರಹಗಳು ಸಂಯೋಜಿಸಲಿವೆ. ಈ ಗ್ರಹಗಳ ಯುತಿಯ ಪರಿಣಾಮ ಏಪ್ರಿಲ್ 22 ರಿಂದ ಮೇ 14 ರವರೆಗೆ ಇರಲಿದೆ. ಒಂದೇ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗದಿಂದಾಗಿ ಎರಡು ಪ್ರಮುಖ ಯೋಗಗಳು ನೀರ್ಮಾನವಾಗಳಿವೆ.
ಈ ಸಮಯದಲ್ಲಿ ಸೂರ್ಯ ಮತ್ತು ರಾಹುವಿನ ಸಂಯೋಜನೆಯಿಂದಾಗಿ ಗ್ರಹಣ ಯೋಗ ರೂಪುಗೊಂಡರೆ, ಗುರು ಮತ್ತು ರಾಹುವಿನ ಯುತಿಯಿಂದಾಗಿ ಗುರು ಚಂಡಾಲ ಯೋಗ ನಿರ್ಮಾಣವಾಗಲಿದೆ. ಈ ಎರಡೂ ಯೋಗಗಳ ಶುಭ ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಮೂರು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುವುದು ತುಂಬಾ ಅಗತ್ಯ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Vastu Tips: ಮನೆಯಲ್ಲಿ ಈ 4 ಗಿಡಗಳಿದ್ದರೆ ಸಾಕು ಶನಿ-ರಾಹುವಿನ ದುಷ್ಟ ಕಣ್ಣು ನಿಮ್ಮ ಹತ್ತಿರವೂ ಸುಳಿಯಲ್ಲ
ಸೂರ್ಯ, ರಾಹು, ಗುರು ಯುತಿ: ಏಪ್ರಿಲ್ 22 ರಿಂದ ಮೇ 14ರವರೆಗೆ ಬಹಳ ಜಾಗರೂಕರಾಗಿರಬೇಕು ಈ ರಾಶಿಯವರು:-
ವೃಷಭ ರಾಶಿ:
ಏಪ್ರಿಲ್ 22 ರಿಂದ ನಿರ್ಮಾಣಗೊಳ್ಳಲಿರುವ ಗ್ರಹಣ ಯೋಗ, ಗುರು ಚಂಡಾಲ ಯೋಗವನ್ನು ವೃಷಭ ರಾಶಿಯವರಿಗೆ ಶುಭಕರ ಎಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ ನೀವು ಕುಟುಂಬ ಅಪಶ್ರುತಿಯನ್ನು ಎದುರಿಸಬೇಕಾಗುತ್ತದೆ ಮತ್ತು ಪ್ರಯಾಣದ ವೇಳೆ ಎಚ್ಚರಿಕೆ ಅಗತ್ಯ. ಇದಲ್ಲದೆ, ಆರ್ಥಿಕ ಸಮಸ್ಯೆಗಳು ಕೂಡ ಉಲ್ಬಣಗೊಳ್ಳಬಹುದು.
ಕನ್ಯಾ ರಾಶಿ:
ಒಂದೇ ರಾಶಿಯಲ್ಲಿ ಸೂರ್ಯ, ರಾಹು, ಗುರು ಗ್ರಹಗಳ ಸಂಯೋಗವು ಕನ್ಯಾರಾಶಿಯವರಿಗೂ ಕೂಡ ಅಷ್ಟು ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ವಾಹನ ಚಾಲನೆಯ ವೇಳೆ ತುಂಬಾ ಜಾಗರೂಕರಾಗಿರಿ. ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ. ಇಲ್ಲವೇ, ನಿಮ್ಮ ಮಾತೇ ನಿಮಗೆ ಶತ್ರುವಾಗಬಹುದು.
ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ಈ ಕೆಲಸ ಮಾಡಿದ್ರೆ ಎಂದಿಗೂ ಖಾಲಿಯಾಗಲ್ಲ ಖಜಾನೆ
ಮೀನ ರಾಶಿ:
ಮೇಷ ರಾಶಿಯಲ್ಲಿ ಮೂರು ಗ್ರಹಗಳ ಯುತಿಯಿಂದ ನಿರ್ಮಾಣಗೊಳ್ಳಲಿರುವ ಎರಡು ಯೋಗಗಳು ಈ ರಾಶಿಯವರಿಗೆ ಕುಟುಂಬದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ಅಷ್ಟೇ ಅಲ್ಲ, ಉದ್ಯೋಗ ರಂಗದಲ್ಲಿಯೂ ಕೂಡ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಫಲ ಸಿಗದಿರುವುದು ನಿಮ್ಮ ನಿರಾಸೆಗೂ ಕಾರಣವಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.