Sun Transit 2022 Effect: ಸೂರ್ಯ ದೇವನ ಆಶೀರ್ವಾದಿಂದ ರಾತ್ರೋ ರಾತ್ರಿ ಶ್ರೀಮಂತರಾಗುತ್ತಾರೆ ಈ ರಾಶಿಯವರು
Sun Transit 2022 Effect: 2022ರ ಕೊನೆಯ ತಿಂಗಳು ಡಿಸೆಂಬರ್ ಮಾಸದಲ್ಲಿ ಗ್ರಹಗಳ ರಾಜ ಸೂರ್ಯ ದೇವನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವೂ ನಾಲ್ಕು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದು ಅವರು ಜೀವನದಲ್ಲಿ ಸಾಕಷ್ಟು ಹಣದ ಜೊತೆಗೆ ಅಪಾರ ಕೀರ್ತಿಯನ್ನೂ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Sun Transit 2022 Effect: ವೈದಿಕ ಜ್ಯೋತಿಷ್ಯದಲ್ಲಿ, ನವಗ್ರಹಗಳಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಹೇಳಲಾಗುತ್ತದೆ. ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ 16, 2022 ರಂದು, ಸೂರ್ಯ ದೇವನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಧನು ರಾಶಿಗೆ ಸೂರ್ಯನ ಪ್ರವೇಶವು ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆದರೂ, ಈ ಸಮಯವು ನಾಲ್ಕು ರಾಶಿಯ ಜನರಿಗೆ ಅಪಾರ ಹಣದ ಜೊತೆಗೆ ಕೀರ್ತಿಯನ್ನೂ ನೀಡಲಿದೆ. ಸೂರ್ಯ ದೇವನ ಆಶೀರ್ವಾದದಿಂದ ಅವರು ರಾತ್ರೋ ರಾತ್ರಿ ಶ್ರೀಮಂತರಾಗುತ್ತಾರೆ. ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಡಿಸೆಂಬರ್ ಮಾಸದಲ್ಲಿ ಸೂರ್ಯ ರಾಶಿ ಪರಿವರ್ತನೆ ಈ ನಾಲ್ಕು ರಾಶಿವರಿಗೆ ಬಾರೀ ಅದೃಷ್ಟ:
ಮಿಥುನ ರಾಶಿ:
ವರ್ಷಾಂತ್ಯದಲ್ಲಿ ಸೂರ್ಯ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು, ಜೀವನದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ನಿಮ್ಮ ಪ್ರೀತಿ-ಪಾತ್ರರಿಂದ ಸಾಕಷ್ಟು ಪ್ರೀತಿ-ಕಾಳಜಿಯನ್ನು ಅನುಭವಿಸುವಿರಿ. ಒಟ್ಟಾರೆಯಾಗಿ ಈ ಸಮಯವು ನಿಮಗೆ ತುಂಬಾ ಮಂಗಳಕರ ಎಂದು ಸಾಬೀತುಪಡಿಸಬಹುದು.
ಇದನ್ನೂ ಓದಿ- Rahu Ketu Gochar 2023 Effect: 2023ರಲ್ಲಿ ಈ ನಾಲ್ಕು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾರೆ ರಾಹು-ಕೇತು
ಕನ್ಯಾ ರಾಶಿ:
ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಗೆ ಪ್ರವೇಶಿಸಲಿರುವ ಸೂರ್ಯನು ಕನ್ಯಾ ರಾಶಿಯವರಿಗೆ ಆರ್ಥಿಕ ಪ್ರಗತಿಯನ್ನು ನೀಡಲಿದ್ದಾನೆ. ಇದರಿಂದ ಜೀವನದಲ್ಲಿ ಸಂತೋಷದ ಜೊತೆಗೆ ನೆಮ್ಮದಿಯೂ ನಿಮ್ಮದಾಗಲಿದೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಹೊಸ ಮನೆ, ವಾಹನ ಖರೀದಿಸುವ ಯೋಗವೂ ಇದೆ. ರಿಯಲ್ ಎಸ್ಟೇಟ್ ಕೆಲಸಕ್ಕೆ ಸಂಬಂಧಿಸಿದ ಜನರಿಗೆ ಧನ ವೃದ್ಧಿಯಾಗಲಿದ್ದು ಸಮಾಜದಲ್ಲಿ ಕೀರ್ತಿಯೂ ಹೆಚ್ಚಾಗಲಿದೆ.
ಸಿಂಹ ರಾಶಿ:
ಸೂರ್ಯ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅದೃಷ್ಟ ಜೋತೆಯಾಗಲಿದೆ. ಸಿಂಹ ರಾಶಿಯ ಅಧಿಪತಿಯಾಗಿರುವ ಸೂರ್ಯನು ಡಿಸೆಂಬರ್ ತಿಂಗಳಿನಲ್ಲಿ ಈ ರಾಶಿಯವರಿಗೆ ಉತ್ತಮ ಯಶಸ್ಸು, ಉದ್ಯೋಗದಲ್ಲಿ ಪ್ರಗತಿಯನ್ನು ನೀಡಲಿದ್ದಾನೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೂ ಜಯ ಪ್ರಾಪ್ತಿಯಾಗಲಿದೆ. ವ್ಯಾಪಾರ-ವ್ಯವಹಾರದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ.
ಇದನ್ನೂ ಓದಿ- Rahu Transit: 2023ರಲ್ಲಿ ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ ರಾಹು
ಧನು ರಾಶಿ:
ಧನು ರಾಶಿಯಲ್ಲಿಯೇ ಸೂರ್ಯನ ಸಂಕ್ರಮಣ ನಡೆಯುತ್ತಿದ್ದು ಈ ಸಮಯವು ಈ ರಾಶಿಯವರ ಮೇಲೆ ಗರಿಷ್ಠ ಪರಿಣಾಮ ಉಂಟು ಮಾಡಲಿದೆ. ಇದರಿಂದ ಧನು ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಸ್ಥಾನ ಬಲವಾಗಿರಲಿದ್ದು ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆಯೂ ಇದೆ. ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು ಹೂಡಿಕೆಯು ಫಲಪ್ರದವಾಗಿರಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.