Rahu Ketu Gochar 2023 Effect: ವೈದಿಕ ಜ್ಯೋತಿಷ್ಯದಲ್ಲಿ, ನ್ಯಾಯದ ದೇವರು, ಕರ್ಮಫಲದಾತ ಶನಿ ಗ್ರಹವನ್ನು ಕ್ರೂರ ಗ್ರಹ ಎಂತಲೂ ಕರೆಯಲಾಗುತ್ತದೆ. ಅಂತೆಯೇ, ರಾಹು-ಕೇತು ಎರಡೂ ಗ್ರಹಗಳನ್ನು ನೆರಳು ಗ್ರಹಗಳು, ಪಾಪ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಸದಾ ಹಿಮ್ಮುಖವಾಗಿ ಚಲಿಸುವ ಈ ಎರಡೂ ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಯು ಜೀವನದಲ್ಲಿ ನಾನಾ ರೀತಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ, ಸುಮಾರು ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುವ ರಾಹು-ಕೇತುಗಳು 2023 ರಲ್ಲಿ ರಾಶಿ ಸಂಚಾರ ಮಾಡಲಿವೆ. 2023 ರ ಅಕ್ಟೋಬರ್ ತಿಂಗಳಿನಲ್ಲಿ ಈ ಗ್ರಹಗಳು ರಾಶಿ ಪರಿವರ್ತನೆ ಮಾಡಲಿದ್ದು ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಕಂಡು ಬರಲಿದೆ. ಆದಾಗ್ಯೂ, ನಾಲ್ಕು ರಾಶಿಯ ಜನರ ಮೇಲೆ ಇದರ ನಕಾರಾತ್ಮಕ ಪ್ರಭಾವ ಹೆಚ್ಚು ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
2023ರಲ್ಲಿ ಈ ನಾಲ್ಕು ರಾಶಿಯ ಜನರ ಜೀವನದಲ್ಲಿ ಕೋಲಾಹಲ ಸೃಷ್ಟಿಸಲಿದ್ದಾರೆ ರಾಹು-ಕೇತು :
ಮೇಷ ರಾಶಿ:
2023 ರಲ್ಲಿ ರಾಹು-ಕೇತು ಗ್ರಹಗಳ ರಾಶಿ ಪರಿವರ್ತನೆಯ ಪ್ರಭಾವವು ಮೇಷ ರಾಶಿಯವರಿಗೆ ಉತ್ತಮವಾಗಿರುವುದಿಲ್ಲ. ರಾಹು-ಕೇತು ಸಂಚಾರವು ಈ ರಾಶಿಯವರ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದರಿಂದಾಗಿ ನಿಮ್ಮ ಖರ್ಚು-ವೆಚ್ಚಗಳು ಹೆಚ್ಚಾಗಲಿವೆ. ಅನಾವಶ್ಯಕ ಸುತ್ತಾಟದಿಂದ ಬಳಲಿಕೆ ಹೆಚ್ಚಲಿದೆ. ಸಣ್ಣ-ಪುಟ್ಟ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ- Shani Gochar 2023: ಹೊಸ ವರ್ಷದಲ್ಲಿ ಈ ರಾಶಿಯವರನ್ನು ಬೆಂಬಿಡದೆ ಕಾಡಲಿದ್ದಾನೆ ಶನಿ ದೇವ
ವೃಷಭ ರಾಶಿ:
2023ರಲ್ಲಿ ರಾಹು-ಕೇತುಗಳ ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟಗಳನ್ನು ತಂದೊಡ್ಡಲಿದೆ. ನಿಮ್ಮ ಆದಾಯಕ್ಕಿಂತ ವೆಚ್ಚಗಳು ಹೆಚ್ಚಾಗಿ ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಗಬಹುದು. ಹಾಗಾಗಿ, ನೀವು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ನಿಮ್ಮ ಬಜೆಟ್ ಗೆ ಅನುಸಾರವಾಗಿಯೇ ನಿರ್ಧಾರಗಳನ್ನು ಕೈಗೊಳ್ಳುವುದು ಉತ್ತಮ. ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಕನ್ಯಾ ರಾಶಿ:
2023ರಲ್ಲಿ ರಾಹು-ಕೇತು ರಾಶಿ ಪರಿವರ್ತನೆಯನ್ನು ಕನ್ಯಾ ರಾಶಿಯವರಿಗೂ ಸಹ ಶುಭ ಎಂದು ಪರಿಗಣಿಸಲಾಗುವುದಿಲ್ಲ. ವಾಸ್ತವವಾಗಿ, ಈ ವರ್ಷ ಕೇತು ಕನ್ಯಾ ರಾಶಿಯಲ್ಲಿಯೇ ಸಂಚರಿಸಲಿದ್ದು ಈ ರಾಶಿಯವರ ಜೀವನದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಲಿದ್ದಾನೆ. ರಾಹು-ಕೇತುಗಳ ನಕಾರಾತ್ಮಕ ಪರಿಣಾಮದಿಂದಾಗಿ ಕನ್ಯಾ ರಾಶಿಯವರು 2023ರಲ್ಲಿ ಉದ್ಯೋಗ-ವ್ಯವಹಾರದಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯದೆಯೂ ಇರಬಹುದು.
ಇದನ್ನೂ ಓದಿ- Ketu Mahadasha: ವ್ಯಕ್ತಿಯ ಸುಖ-ಶಾಂತಿಯನ್ನು ಕಸಿದುಕೊಳ್ಳುತ್ತೆ ಕೇತು ಮಹಾದಶಾ
ಮೀನ ರಾಶಿ:
2023 ರಲ್ಲಿ, ಪಾಪ ಗ್ರಹ ರಾಹುವು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ವ್ಯಾಪಾರ-ವ್ಯವಹಾರದ ದೃಷ್ಟಿಯಿಂದ ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ರಾಹು-ಕೇತು ಸಂಚಾರದ ಪ್ರಭಾವದಿಂದಾಗಿ ಈ ಅವಧಿಯಲ್ಲಿ ಮೀನ ರಾಶಿಯವರಿ ಆದಾಯಕ್ಕಿಂತ ಖರ್ಚುಗಳು ಅಧಿಕವಾಗಳಿವೆ. ನೀವು ಪಡೆದ ಸಾಲವನ್ನು ಹಿಂದಿರುಗಿಸಲು ನಾನಾ ರೀತಿಯ ತೊಂದರೆಗಳು ಎದುರಾಗಬಹುದು. ಹೂಡಿಕೆಗಳು ಉತ್ತಮವಲ್ಲ. ನೀವು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮೊದಲು ಸೂಕ್ತ ತಜ್ಞರಿಂದ, ಹಿರಿಯರಿಂದ ಸಲಹೆಯನ್ನು ಪಡೆಯಿರಿ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.