Surya Gochar 2022: ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ- ಈ ರಾಶಿಯವರಿಗೆ ಧನ ಹಾನಿ
Surya Gochar 2022: ಇನ್ನು ಎರಡು ದಿನಗಳಲ್ಲಿ ಗ್ರಹಗಳ ರಾಜ ಎಂದು ಪರಿಗಣಿಸಲ್ಪಡುವ ಸೂರ್ಯನು ತನ್ನ ರಾಶಿಚಕ್ರವನ್ನು ಬದಲಾಯಿಸದಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡುತ್ತಾನೆ ಎಂದು ಹೇಳಲಾಗುತ್ತಿದೆ.
ಸೂರ್ಯ ಗೋಚರ ಪರಿಣಾಮ: ಇನ್ನೆರಡು ದಿನಗಳಲ್ಲಿ ಅಂದರೆ ಜುಲೈ 16, 2022 ರಂದು ಸೂರ್ಯ ದೇವನು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕರ್ಕ ರಾಶಿಯ ಅಧಿಪತಿ ಚಂದ್ರನಾಗಿದ್ದು, ಚಂದ್ರನ ಮನೆಗೆ ಸೂರ್ಯನ ಪ್ರವೇಶವು ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಗ್ರಹಗಳ ರಾಜ ಎಂದು ಪರಿಗಣಿಸಲ್ಪಡುವ ಸೂರ್ಯನ ಈ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡುತ್ತಾನೆ ಎಂದು ಹೇಳಲಾಗುತ್ತಿದೆ. ಜುಲೈ ತಿಂಗಳಲ್ಲಿ ಸೂರ್ಯನ ಸಂಚಾರ ಮೀನ ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂದು ತಿಳಿಯೋಣ...
ಜುಲೈ 16ರ ರಾತ್ರಿ ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಕರ್ಕಾಟಕ ರಾಶಿಗೆ ಸೂರ್ಯನ ಪ್ರವೇಶವು ಮೀನ ರಾಶಿಯವರಿಗೆ ಅಷ್ಟು ಶುಭಕರವಲ್ಲ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮೀನ ರಾಶಿಯವರು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಬಹಳ ಮುಖ್ಯ. ನೀವು ಯಾವುದೇ ರೀತಿಯ ಕೆಲಸವನ್ನು ಮಾಡುವ ಮೂಲಕ ಅದರ ಆಗುಹೋಗುಗಳ ಬಗ್ಗೆ ನೂರು ಬಾರಿ ಯೋಚಿಸಿ, ನಂತರವೇ ಮುಂದುವರೆಯಿರಿ. ಯಾವುದೇ ಕೆಲಸದಲ್ಲಿ ಗೊಂದಲಕ್ಕೆ ಆಸ್ಪದ ನೀಡಬೇಡಿ. ದೃಢ ನಿರ್ಧಾರದಿಂದ ಮುಂದುವರೆದರೆ ಖಂಡಿತ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ.
ಇದನ್ನೂ ಓದಿ- ಇಂದಿನಿಂದ ಬದಲಾಗಲಿದೆ ಈ ಮೂರು ರಾಶಿಯವರ ಅದೃಷ್ಟ , ಪ್ರತಿ ಕೆಲಸದಲ್ಲೂ ಯಶಸ್ಸು ನೀಡಲಿದ್ದಾನೆ ಶನಿ ಮಹಾತ್ಮ
ಅಪಘಾತದ ಅಪಾಯ:
ಸೂರ್ಯನ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಪ್ರಯಾಣಕ್ಕೆ ಹೊರಡುವ ಮೊದಲು, ಸಂಪೂರ್ಣ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕು. ನೀವು ಖಾಸಗಿ ವಾಹನದ ಮೂಲಕ ಪ್ರಯಾಣಿಸಲು ಬಯಸಿದರೆ, ನಿಮ್ಮ ವಾಹನವನ್ನು ಮುಂಚಿತವಾಗಿ ಸರ್ವಿಸ್ ಮಾಡಿಸುವುದು ಉತ್ತಮ. ಜೊತೆಗೆ ಸ್ಟೆಪ್ನಿ ಮತ್ತು ಟೂಲ್ ಬಾಕ್ಸ್ ಅನ್ನು ಪರಿಶೀಲಿಸಿ. ಪ್ರಯಾಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ಆದ್ದರಿಂದ ನೀವು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಪ್ರಯಾಣ ಕೈಗೊಳ್ಳಿ. ಇಲ್ಲವೇ ನಿಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ.
ಧನ ಹಾನಿ ಸಾಧ್ಯತೆ:
ಸೂರ್ಯನ ಸಂಚಾರದ ಈ ಅವಧಿಯಲ್ಲಿ ಉದ್ಯಮಿಗಳು ಬಹಳ ಎಚ್ಚರಿಕೆಯಿಂದ ಹಣವನ್ನು ಹೂಡಿಕೆ ಮಾಡಿ. ಲಾಭದ ಆಸೆಗೆ ಯೋಚಿಸದೆ ಹೂಡಿಕೆ ಮಾಡಿದರೆ ನೀವು ಹಣವನ್ನು ಕಳೆದುಕೊಳ್ಳಬಹುದು. ಮಾತ್ರವಲ್ಲ, ಈ ತಿಂಗಳು ನಿಮ್ಮ ಮನೆಯಲ್ಲಿಯೂ ವೆಚ್ಚ ಹೆಚ್ಚಾಗಬಹುದು. ಸಾಧ್ಯವಾದಷ್ಟು ಖರ್ಚು-ವೆಚ್ಚಗಳನ್ನು ನಿಯಂತ್ರಿಸಿ. ಇಲ್ಲವೇ, ಮುಂದಿನ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗಬಹುದು.
ಇದನ್ನೂ ಓದಿ- ಮಕರ ರಾಶಿಗೆ ಶನಿಯ ಪ್ರವೇಶ, ಶನಿಯ ಕೆಟ್ಟದೃಷ್ಟಿಯಿಂದ ಪಾರಾಗಲು ಈ ಉಪಾಯಗಳನ್ನು ಮಾಡಿ
ಆರೋಗ್ಯದ ಬಗ್ಗೆ ನಿಗಾವಹಿಸಿ:
ಈ ಸಮಯದಲ್ಲಿ ನಿಮ್ಮ ಅರೋಗ್ಯ ಸಹ ಕೈ ಕೊಡಬಹುದು. ಹಾಗಾಗಿ, ನಿಮ್ಮ ಆಹಾರ ಪಾನೀಯಗಳ ಬಗ್ಗೆ ನಿಗಾವಹಿಸಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯನ್ನೂ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಕೆಲವೊಮ್ಮೆ ಸಣ್ಣ ಕಾಯಿಲೆಗಳು ನಂತರ ದೊಡ್ಡದಾಗುತ್ತವೆ. ಆದ್ದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ