Mercury and Sun Conjunction: ಬುಧಾದಿತ್ಯ ಯೋಗದಿಂದ ಈ ಮೂರು ರಾಶಿಯವರಿಗೆ ಸಿಗಲಿದೆ ಮಹಾಲಾಭ

Mercury and Sun Conjunction: ಸೂರ್ಯ ಮತ್ತು ಬುಧ ಗ್ರಹಗಳು ಯಾವುದೇ ರಾಶಿಯಲ್ಲಿ ಒಟ್ಟಿಗೆ ಬಂದರೆ ಅದನ್ನು ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಬುಧಾದಿತ್ಯ ಯೋಗವನ್ನು ಅತ್ಯಂತ ಮಂಗಳಕರ ಯೋಗ ಎಂದು ಪರಿಗಣಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕರ್ಕಾಟಕದಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ. 

Written by - Ranjitha R K | Last Updated : Jul 11, 2022, 10:55 AM IST
  • ಸೂರ್ಯ ಮತ್ತು ಬುಧ ಒಟ್ಟಿಗೆ ಸೇರಿ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ.
  • ಜುಲೈ 16 ರಂದು, ಸೂರ್ಯ ದೇವ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಬುಧಾದಿತ್ಯ ಯೋಗವು 3 ರಾಶಿಯ ಜನರಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.
Mercury and Sun Conjunction: ಬುಧಾದಿತ್ಯ ಯೋಗದಿಂದ  ಈ ಮೂರು ರಾಶಿಯವರಿಗೆ ಸಿಗಲಿದೆ ಮಹಾಲಾಭ  title=
Mercury and Sun Conjunction (file photo)

ಬೆಂಗಳೂರು : Mercury and Sun Conjunction: ಜುಲೈ ತಿಂಗಳಲ್ಲಿ, ಸೂರ್ಯ ಮತ್ತು ಬುಧ ಒಟ್ಟಿಗೆ ಸೇರಿ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ. ಈ ಬುಧಾದಿತ್ಯ ಯೋಗವು ಕರ್ಕಾಟಕ ರಾಶಿಯಲ್ಲಿ ರೂಪುಗೊಳ್ಳಲಿದೆ. ಜುಲೈ 16 ರಂದು, ಸೂರ್ಯ ದೇವ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಜುಲೈ 16 ರ ತಡರಾತ್ರಿ, ಬುಧ ಗ್ರಹವು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಈ ರೀತಿಯಾಗಿ ಕರ್ಕಾಟಕದಲ್ಲಿ ಬುಧ ಮತ್ತು ಸೂರ್ಯನ ಸಂಯೋಗವಾಗಲಿದೆ. ಕರ್ಕಾಟಕದಲ್ಲಿ ರೂಪುಗೊಳ್ಳಲಿರುವ ಬುಧಾದಿತ್ಯ ಯೋಗವು 3 ರಾಶಿಯ ಜನರಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.

ಈ ರಾಶಿಯವರ ಭಾಗ್ಯ ಜುಲೈ 16, 2022 ರಿಂದ ಬೆಳಗಲಿದೆ  : 
ಮೇಷ ರಾಶಿ : ಕರ್ಕಾಟಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಕ್ರಮಣವು ಮೇಷ ರಾಶಿಯವರಿಗೆ ಶುಭ ಫಲ ನೀಡಲಿದೆ. ಈ ರಾಶಿಯವರು ವೃತ್ತಿಯಲ್ಲಿ ಪ್ರಗತಿ ಹೊಂದಲಿದ್ದಾರೆ. ಬಡ್ತಿ-ಹೊಸ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಈಗ ಒಳ್ಳೆಯ ಸುದ್ದಿ ಸಿಗಲಿದೆ. ಹಣಕಾಸಿನ ಪ್ರಯೋಜನವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. 

ಇದನ್ನೂ ಓದಿ : ನಾಳೆಯಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ಆರಂಭ .!

ಮಿಥುನ : ಬುಧಾದಿತ್ಯ ಯೋಗವು ಮಿಥುನ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಹಿರಿಯರ ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಇರುತ್ತದೆ. ಸಂಬಳ ಹೆಚ್ಚಾಗಬಹುದು. ಹೊಸ ರೀತಿಯಲ್ಲಿ ಆದಾಯ ಬರಬಹುದು. ಈ ಸಮಯ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. 

ತುಲಾ : ಕರ್ಕಾಟಕ ರಾಶಿಯಲ್ಲಿ ಬುಧ-ಸೂರ್ಯನ ಸಂಯೋಗವು ತುಲಾ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಈ ರಾಶಿಚಕ್ರದ ಜನರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿಯನ್ನು ಪಡೆಯುತ್ತಾರೆ. ಹೊಸ ಉದ್ಯೋಗ ದೊರೆಯಲಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳಿಗೂ ಲಾಭವಾಗಲಿದೆ. ಹೂಡಿಕೆ ಮಾಡುವ ಮೂಲಕ ಲಾಭ ಗಳಿಸಬಹುದು. ಹೊಸ ಮನೆ-ಕಾರು ಖರೀದಿಸಬಹುದು. 

ಇದನ್ನೂ ಓದಿ : Vastu Tips : ಮನೆಯಲ್ಲಿ ಖಾಲಿ ಜಾಗ ಎಲ್ಲಿರಬೇಕು? ಏನು ಲಾಭ, ವಾಸ್ತು ಶಾಸ್ತ್ರದ 10 ನಿಯಮ ತಿಳಿದುಕೊಳ್ಳಿ!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News