Surya Gochar 2023: ಇನ್ನೆರಡು ದಿನಗಳಲ್ಲಿ ಕನ್ಯಾ ರಾಶಿಗೆ ಸೂರ್ಯನ ಪ್ರವೇಶ, ಮೂರು ರಾಶಿಯವರಿಗೆ ಸಂಕಷ್ಟ
Surya Gochar 2023: ಗ್ರಹಗಳ ರಾಜ ಸೂರ್ಯ ಇನ್ನೆರಡು ದಿನಗಳಲ್ಲಿ ರಾಶಿ ಪರಿವರ್ತನೆ ಮಾಡಲಿದ್ದಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೆ, ಮೂರು ರಾಶಿಯವರ ಜೀವನದಲ್ಲಿ ಮಾತ್ರ ಭಾರೀ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
Surya Rashi Parivartan 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ಕೂಡ ನಿಗದಿತ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಗ್ರಹಗಳ ರಾಜ ಸೂರ್ಯ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಾನೆ. ಇನ್ನೆರಡು ದಿನಗಳಲ್ಲಿ ಎಂದರೆ ಸೆಪ್ಟೆಂಬರ್ 17 ರಂದು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಮುಂದಿನ ಒಂದು ತಿಂಗಳುಗಳ ಕಾಲ ಅಕ್ಟೋಬರ್ 18, 2023ರವರೆಗೆ ಇದೆ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರ ಶುಭ-ಅಶುಭ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ರಾಶಿ ಪರಿವರ್ತನೆಯು ಮೂರು ರಾಶಿಯವರ ಜೀವನದಲ್ಲಿ ಅಶುಭ ಫಲಗಳನ್ನು ಉಂಟು ಮಾಡಲಿದ್ದಾನೆ. ಮುಂದಿನ ಮೂರು ತಿಂಗಳು ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಶನಿ ನೇರ ನಡೆ: 50 ದಿನಗಳ ಬಳಿಕ ಈ ನಾಲ್ಕು ರಾಶಿಯವರ ಜೀವನದಲ್ಲಿ ಸೋಲೆಂಬುದೇ ಇಲ್ಲ
ಇನ್ನೊಂದು ತಿಂಗಳು ಮೂರು ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟ:-
ತುಲಾ ರಾಶಿ:
ಸೂರ್ಯ ರಾಶಿ ಪರಿವರ್ತನೆಯು ತುಲಾ ರಾಶಿಯವರ ಜೀವನದಲ್ಲಿ ಆರ್ಥಿಕ ಸಂಕಷ್ಟಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಯಾರಿಗಾದರೂ ಹಣ ನೀಡಿದರೆ ಅದು ಹಿಂದಿರುಗಿ ಬರುವುದು ಅನುಮಾನ. ವ್ಯಾಪಾರ-ವ್ಯವಹಾರದಲ್ಲಿ ನಷ್ಟ. ಹೂಡಿಕೆಯಿಂದ ಕೈ ಸುಟ್ಟಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಸೆಪ್ಟೆಂಬರ್ 17 ಮತ್ತು ಅಕ್ಟೋಬರ್ 18 ರ ನಡುವೆ ಯಾವುದೇ ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಿದರೆ ಒಳಿತು.
ಕುಂಭ ರಾಶಿ:
ಸೂರ್ಯ ಸಂಚಾರವು ಕುಂಭ ರಾಶಿಯವರಿಗೂ ಕೂಡ ಅಶುಭ ಪರಿಣಾಮಗಳನ್ನು .. ಈ ಸಮಯದಲ್ಲಿ ನೀವು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಮನೆಯಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ಭಿನ್ನಾಭಿಪ್ರಾಯಗಳ ಸಾಧ್ಯತೆ ಇರುವುದರಿಂದ ಮಾತಿನ ಮೇಲೆ ಹಿಡಿತ ಹೊಂದಿರುವುದು ಅಗತ್ಯವಾಗಿದೆ. ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ಸಲುವಾಗಿ ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಿ.
ಇದನ್ನೂ ಓದಿ- Astro Tips: ಯಾರೇ ಆದರೂ ಈ 3 ರಾಶಿಯ ಹೆಣ್ಣು ಮಕ್ಕಳ ಮುಂದೆ ತಲೆ ಬಾಗಲೇಬೇಕಂತೆ!
ಮೀನ ರಾಶಿ:
ಸೂರ್ಯನ ರಾಶಿ ಬದಲಾವಣೆಯು ಮೀನ ರಾಶಿಯವರ ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮವನ್ನು ಉಂಟು ಮಾಡಬಹುದು. ಹಣಕಾಸಿನ ವಿಷಯದಲ್ಲೂ ಮುಂದಿನ ಒಂದು ತಿಂಗಳು ಅಷ್ಟು ಶುಭಕರವಾಗಿರುವುದಿಲ್ಲ. ಸಾಧ್ಯವಾದಷ್ಟು ಬೇರೆಯವರಿಂದ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.