ಆಗಸ್ಟ್ 17 ರವರೆಗೆ ಆದಿತ್ಯನ ಕೃಪೆಯಿಂದ ಹಲವರ ಭಾಗ್ಯ ಚಿನ್ನದಂತೆ ಹೊಳೆಯಲಿದೆ!
Surya Ashlesha Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಆಶ್ಲೇಷಾ ನಕ್ಷತ್ರದಲ್ಲಿ ಪ್ರವೇಶಿಸಿದ್ದಾನೆ (Spiritual News In Kannada). ಸೂರ್ಯನ ಈ ಆಶ್ಲೇಷಾ ಗೋಚರ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಲಾಭವನ್ನು ತಂದುಕೊಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಯಂತೆ ಗ್ರಹಗಳ ನಕ್ಷತ್ರ ಪ್ರವೇಶಕ್ಕೂ ಕೂಡ ವಿಶೇಷ ಮಹತ್ವವನ್ನು ನೀಡಲಾಗಿದೆ. (Spiritual News In Kannada) ಹೀಗಿರುವಾಗ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯದೇವ ಪ್ರಸ್ತುತ ಕರ್ಕ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ನಕ್ಷತ್ರದ ಕುರಿತು ಹೇಳುವುದಾದರೆ, ಆಗಸ್ಟ್, 2, 2023 ಅಂದರೆ ಗುರುವಾರ ಸಂಜೆ 4 ಗಂಟೆ 4 ನಿಮಿಷಕ್ಕೆ ಆಶ್ಲೇಷಾ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಆಗಸ್ಟ್ 17, 2023 ರ ಗುರುವಾರ ಮಧ್ಯಾಹ್ನ 1 ಗಂಟೆ 44 ನಿಮಿಷದ ವರೆಗೆ ಆತ ಆಶ್ಲೇಷಾ ನಕ್ಷತ್ರದಲ್ಲಿಯೇ ಮುಂದುವರೆಯಲಿದ್ದಾನೆ. ಸೂರ್ಯನ ಈ ನಕ್ಷತ್ರ ಗೋಚರ ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯ ಎಲ್ಲಾ ಜಾತಕದವರ ಮೇಲೆ ಗೋಚರಿಸಲಿದೆ. ಬುಧ ಆಶ್ಲೇಷಾ ನಕ್ಷತ್ರಕ್ಕೆ ಅಧಿಪತಿ. ಇದರಿಂದ ಹಲವು ರಾಶಿಗಳ ಜನರಿಗೆ ಇದರ ವಿಶೇಷ ಲಾಭ ಸಿಗಲಿದೆ. ಬನ್ನಿ ತಿಳಿದುಕೊಳ್ಳೋಣ,
ಮೇಷ ರಾಶಿ: ಸೂರ್ಯನ ಆಶ್ಲೇಷಾ ಗೋಚರ ಮೇಷ ರಾಶಿಯ ಜನರಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಅವಧಿಯಲ್ಲಿ ಪದೋನ್ನತಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. ಖಾಸಗಿ ಕ್ಷೇತ್ರದಲ್ಲಿಯೂ ಕೆಲಸ ಮಾಡುವವರಿಗೆ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ದೀರ್ಘಾವಹಿಯಿಂದ ನಡೆದುಬಂದ ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ವಾಹನ ಖರೀದಿಸುವ ನಿಮ್ಮ ಆಸೆ ಈಡೇರಲಿದೆ. ವೃತ್ತಿಜೀವನದಲ್ಲಿಯೂ ಕೂಡ ಸಫಲತೆ ನಿಮ್ಮದಾಗಲಿದೆ.
ವೃಷಭ ರಾಶಿ: ಸೂರ್ಯನ ಆಶ್ಲೇಷಾ ಗೋಚರ ನಿಮ್ಮ ಪಾಲಿಗೂ ಕೂಡ ಶುಭ ಸಾಬೀತಾಗಲಿದೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದ ಹುಡುಕಾಟದಲ್ಲಿರುವ ವ್ಯಕ್ತಿಗಳ ಹುಡುಕಾಟಕ್ಕೆ ತೆರೆಬೀಳಲಿದೆ. ಯಾವುದಾದರೊಂದು ಕೆಲಸದಲ್ಲಿ ದೀರ್ಘ ಕಾಲದಿಂದ ಯಶಸ್ಸು ಸಿಗುತ್ತಿಲ್ಲ ಎಂದಾದ ಪಕ್ಷದಲ್ಲಿ, ಇದೀಗ ಯಶಸ್ಸು ಸಿಗಲಿದೆ. ಹೀಗಾಗಿ ಸಾಕಷ್ಟು ಪರಿಶ್ರಮಪಟ್ಟು ಅದನ್ನು ಪೂರ್ಣಗೊಳಿಸಿ. ವ್ಯಾಪಾರದ ಕುರಿತು ಹೇಳುವುದಾದರೆ, ನಿಮ್ಮ ಪ್ರಯತ್ನಗಳಿಗೆ ಸಂಪೂರ್ಣ ಯಶಸ್ಸು ಸಿಗಲಿದೆ. ನಿಮಗೆ ಬರಬೇಕಾದ ಮತ್ತು ದೀರ್ಘಕಾಲದಿಂದ ಸಿಲುಕಿಬಿದ್ದ ಹಣ ನಿಮ್ಮತ್ತ ಮರಳಲಿದೆ ಮತ್ತು ನಿಮ್ಮ ಆರ್ಥಿಕ ಪಕ್ಷ ಬಲಿಷ್ಠವಾಗಲಿದೆ.
ಇದನ್ನೂ ಓದಿ-ಅಕ್ಟೋಬರ್ 3 ರವರೆಗೆ ಅಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ 3 ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ!
ಸಿಂಹ ರಾಶಿ: ಸೂರ್ಯನ ಈ ಆಶ್ಲೇಷಾ ಗೋಚರ ಸಿಂಹ ರಾಶಿಯ ಜಾತಕದವರ ಪಾಲಿಗೂ ಕೂಡ ಅತ್ಯದ್ಭುತ ಸಾಬೀತಾಗಲಿದೆ. ಯಾವುದಾದರೊಂದು ಪ್ರಶಸ್ತಿ ನಿಮ್ಮದಾಗುವ ಯೋಗವಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ವಿಶೇಷಕ್ಕೆ ಹೋಗುವ ನಿಮ್ಮ ಕನಸು ನನಸಾಗಬಹುದು. ವ್ಯಾಪಾರದಲ್ಲಿ ಹೊಸ ವೇಗ ಕಾಣಿಸಿಕೊಳ್ಳಲಿದೆ. ಯಶಸ್ಸಿನ ಜೊತೆಗೆ ಅಪಾರ ಧನ ಪ್ರಾಪ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಕಾಲ ಇದು.
ಇದನ್ನೂ ಓದಿ-ಗುರು-ಶನಿಯ ವಿಶೇಷ ಕೃಪಾವೃಷ್ಟಿಯಿಂದ 3 ರಾಶಿಗಳ ಜನರ ಮನೆಯಂಗಳದಲ್ಲಿ ನಲಿದಾಡುವಳು ಧನಲಕ್ಷ್ಮಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ