ಈ ಮೂರು ರಾಶಿಗಳ ಜನರು ತುಂಬಾ ಬುದ್ಧಿವಂತರು ಹಾಗೂ ಚತುರರು, ಇತರರಿಂದ ಕೆಲಸ ತೆಗೆಯುವುದರಲ್ಲಿ ನಿಪುಣರು!

Clever Zodiac Signs: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ರಾಶಿಗಳ ಜನರು ತುಂಬಾ ಬುದ್ಧಿವಂತರು ಹಾಗೂ ಚತುರರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಯಾಕೆ ಇತರರಿಂದ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಇವರು ತುಂಬಾ ನಿಪುಣರಾಗಿರುತ್ತಾರೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 9 ಗ್ರಹಗಳು 12 ರಾಶಿಗಳು ಹಾಗೂ 27 ನಕ್ಷತ್ರಗಳ ವರ್ಣನೆ ಇದೆ. ಎಲ್ಲಾ ದ್ವಾದಶ ರಾಶಿಗಳ ಜನರ ವ್ಯಕ್ತಿತ್ವ ಹಾಗೂ ಸ್ವಭಾವ ಭಿನ್ನವಾಗಿರುತ್ತದೆ. ಏಕೆಂದರೆ ಪ್ರತಿಯೊಂದು ರಾಶಿಯ ಮೇಲೆ ವಿವಿಧ ಗ್ರಹಗಳ ಆಧಿಪತ್ಯವಿರುತ್ತದೆ. ಇಲ್ಲಿ ನಾವು 3 ರಾಶಿಗಳ ಜನರ ಬಗ್ಗೆ ಮಾತನಾಡುತ್ತಿದ್ದರು, ಈ ಜನರು ತುಂಬಾ ಬುದ್ಧಿವಂತರು ಹಾಗೂ ಚತುರರಾಗಿರುತ್ತಾರೆ. ಇತರರಿಂದ ತಮ್ಮ ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕು ಎನ್ನುವುದರಲ್ಲಿ ಇವರು ತುಂಬಾ ನಿಪುಣರಾಗಿರುತ್ತಾರೆ. ಅವರ ಈ ಗುಣವೇ ಅವರಿಗೆ ಅವರ ವೃತ್ತಿ ಜೀವನದಲ್ಲಿ ಸಾಕಷ್ಟು ಉನ್ನತಿಯನ್ನು ಸಾಧಿಸುವ ಹಾಗೆ ಮಾಡುತ್ತದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-ಎಲ್ಲಕ್ಕಿಂತ ಹೆಚ್ಚು ಈ ಕಂಪನಿಯ ಬೈಕ್ ಖರೀದಿಸುತ್ತಿದ್ದಾರೆ ಜನ, Royal Enfield ಎಷ್ಟನೆ ಸ್ಥಾನದಲ್ಲಿದೆ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Clever Zodiac Signs: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ರಾಶಿಗಳ ಜನರು ತುಂಬಾ ಬುದ್ಧಿವಂತರು ಹಾಗೂ ಚತುರರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಯಾಕೆ ಇತರರಿಂದ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಇವರು ತುಂಬಾ ನಿಪುಣರಾಗಿರುತ್ತಾರೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

2 /5

ಮಕರ ರಾಶಿ: ಮಕರ ರಾಶಿಯ ಜಾತಕದವರು ತುಂಬಾ ಬುದ್ಧಿವಂತರು ಹಾಗೂ ಚತುರರಾಗಿರುತ್ತಾರೆ. ಇತರರಿಂದ ಕೆಲಸ ಹೇಗೆ ಮಾಡಿಸಬೇಕು ಎಂಬುದರ ಕಲೆ ಇವರಲ್ಲಡಗಿರುತ್ತದೆ. ಜೊತೆಗೆ ಈ ಜನರು ತುಂಬಾ ಪರಿಶ್ರಮಿಗಳು ಅಥವಾ ಕಠಿಣ ಪರಿಶ್ರಮಿಗಳು ಎಂದರೆ ತಪ್ಪಾಗಲಾರದು. ತನ್ನ ಯಾವುದೇ ಒಂದು ಕೆಲಸ ಮಾಡಿಸಿಕೊಳ್ಳಲು ಇವರು ಕೊನೆಯ ಕ್ಷಣದವರೆಗೆ ಪ್ರಯತ್ನಿಸುತ್ತಾರೆ. ಇದಲ್ಲದೆ ಇವರು ಬಹುಮುಖ ಪ್ರತಿಭೆಯ ಧಣಿಗಳಾಗಿರುತ್ತಾರೆ ಮತ್ತು ಇವರು ತಮ್ಮ ನಿರ್ಧಾರಗಳನ್ನು ಸ್ವತಃ ತೆಗೆದುಕೊಳ್ಳುತ್ತಾರೆ. ಸಾಕಷ್ಟು ದೂರದೃಷ್ಟಿಯನ್ನು ಹೊಂದಿದ ಇವರು ಘಟನೆಗಳನ್ನು ಮುಂಚಿತವಾಗಿಯೇ ಅರ್ಥೈಸಿಕೊಳ್ಳುವವರಾಗಿರುತ್ತಾರೆ. ಇವರು ಯಾವುದೇ ಒಂದು ನಿರ್ಧಾರವನ್ನು ಕೈಗೊಂಡರೆ ಅದನ್ನು ಪೂರ್ಣಗೊಳಿಸಿಯೇ ನಿಟ್ಟುಸಿರು ಬಿಡುತ್ತಾರೆ. ಸ್ವತಂತ್ರವಾಗಿರುವುದು ಇವರಿಗೆ ಇಷ್ಟ. ಹೀಗಾಗಿ ಇವರು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಮಕರ ರಾಶಿಗೆ ಶನಿ ಅಧಿಪತಿ. ಶನಿಯೇ ಅವರಿಗೆ ಈ ಗುಣಗಳನ್ನು ದಯಪಾಲಿಸುತ್ತಾನೆ.  

3 /5

ವೃಶ್ಚಿಕ ರಾಶಿ: ಈ ರಾಶಿಗೆ ಮಂಗಳ ಅಧಿಪತಿ. ಗ್ರಹಗಳ ಸೇನಾಪತಿ ಸಾಹಸ ಹಾಗೂ ಶೌರ್ಯವನ್ನು ತುಂಬುವವನಾಗಿದ್ದಾನೆ. ಹೀಗಾಗಿ ವೃಶ್ಚಿಕ ರಾಶಿಯ ಜನರು ಸಾಮಾನ್ಯವಾಗಿ ಯಾವುದಕ್ಕೂ ಹೆದರುವುದಿಲ್ಲ. ಯಾವುದೇ ವ್ಯಕ್ತಿಯಿಂದ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಇವರು ನಿಷ್ಣಾತರು. ಇವರು ಯಾವಾಗಲೂ ಸಾಕಷ್ಟು ಊರ್ಜೆಯಿಂದ ತುಂಬಿರುತ್ತಾರೆ ಮತ್ತು ಎದುರಿಗೆ ಇರುವ ವ್ಯಕ್ತಿಯನ್ನು ಬಹುಬೇಗ ಅರ್ಥಮಾಡಿಕೊಳ್ಳುತ್ತಾರೆ. ಎಷ್ಟೇ ವಿಪರೀತ ಪ್ರಸಂಗ ಎದುರಾದರೂ ಕೂಡ ಈ ಜನರು ತುಂಬಾ ಶಾಂತರಾಗಿರುತ್ತಾರೆ ಮತ್ತು ಪ್ರತಿಯೊಂದು ಕ್ಷಣದಲ್ಲಿ ಗೆಲ್ಲಲು ಇಷ್ಟಪಡುತ್ತಾರೆ. ಇವರಿಂದ ಸೋಲು ಅರಗಿಸಿಕೊಳ್ಳಲು ಆಗುವುದಿಲ್ಲ. ಇನ್ನೊಂದೆಡೆ ಅಪಾಯಕಾರಿ ಕೆಲಸ ಇವರಿಗೆ ತುಂಬಾ ಇಷ್ಟವಾಗುತ್ತವೆ.   

4 /5

ಕನ್ಯಾ ರಾಶಿ: ಕನ್ಯಾ ರಾಶಿಯ ಜನರು ತುಂಬಾ ಬುದ್ಧಿವಂತರು ಹಾಗೂ ಸಾಕಷ್ಟು ದೂರದೃಷ್ಟಿ ಉಳ್ಳವರು ಆಗಿರುತ್ತಾರೆ. ಆದರೆ, ಈ ರಾಶಿಯ ಕಲ ಜನರು ನಾಚಿಕೆ ಸ್ವಭಾವದವರಾಗಿರುತ್ತಾರೆ. ಆದರೆ, ಯಾವುದೇ ಕೆಲಸ ಮಾಡಿಸಿಕೊಳ್ಳುವುದರರಿಂದ ಇವರು ಕದಲುವುದಿಲ್ಲ. ಕೆಲಸ ಮುಗಿಯುವವರೆಗೆ ಇವರು ವಿನಮ್ರರಾಗಿರುತ್ತಾರೆ ಮತ್ತು ತಮ್ಮ ಸುಮಧುರ ಸ್ವಭಾವದ ಕಾರಣ ಕೆಲಸವನ್ನು ಮಾಡಿಸಿಕೊಂಡೇ ತೀರುತ್ತಾರೆ. ಇವರ ಮಾತುಕತೆಯ ಶೈಲಿ ಇತರರಿಗಿಂತ ಭಿನ್ನವಾಗಿರುತ್ತದೆ. ಇನ್ನೊಂದೆಡೆ ಇವರು ತುಂಬಾ ಬಿಸ್ನೆಸ್ ಮೈಂಡ್ ಆಗಿರುತ್ತಾರೆ. ಅಷ್ಟೇ ಅಲ್ಲ ತುಂಬಾ ತಮಾಷೆಯ ಸ್ವಭಾವದವರೂ ಕೂಡ ಆಗಿರುತ್ತಾರೆ. ಸಾಮಾನ್ಯವಾಗಿ ಈ ರಾಶಿಯ ಮೇಲೆ ಬುಧನ ಆಧಿಪತ್ಯವಿದೆ. ಆತನೇ ಇವರಿಗೆ ಆ ಗುಣಗಳನ್ನು ದಯಪಾಲಿಸಿದ್ದಾನೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)