Surya Gochar 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಒಂಬತ್ತು ಗ್ರಹಗಳು ಸಹ ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. ಅತಿ ನಿಧಾನವಾಗಿ ರಾಶಿಚಕ್ರವನ್ನು ಬದಲಾಯಿಸುವ ಶನಿ ದೇವನು ಎರಡೂವರೆ ವರ್ಷಗಳಿಗೆ ಒಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ. ಗ್ರಹಗಳ ರಾಜನಾದ ಸೂರ್ಯದೇವನು ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸುತ್ತಾನೆ. ಇದೀಗ ಆಗಸ್ಟ್‌ನಲ್ಲಿ ರಾಶಿ ಪರಿವರ್ತನೆ ಹೊಂದುವ ಮೂಲಕ ಸೂರ್ಯ ದೇವನು ತನ್ನದೇ ಆದ ರಾಶಿಚಕ್ರ ಚಿಹ್ನೆ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ,  ಬರೋಬ್ಬರಿ ಒಂದು ವರ್ಷದ ಬಳಿಕ ಸೂರ್ಯ ದೇವನು ಆಗಸ್ಟ್ 17, 2023ರಂದು ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಸೆಪ್ಟೆಂಬರ್ 16, 2023ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಸೂರ್ಯ ದೇವನು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟುಮಾಡಲಿದ್ದಾನೆ. ಹಾಗಿದ್ದರೆ, ಮುಂದಿನ ಒಂದು ತಿಂಗಳು ಯಾವ ರಾಶಿಯವರಿಗೆ ಅಮೋಘವಾಗಿದೆ, ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ... 


ಇದನ್ನೂ ಓದಿ- Shani Mahadasha Upay: ಜಾತಕದಲ್ಲಿ ಶನಿ ದೋಷದಿಂದ ಮುಕ್ತಿ ಪಡೆಯಲು ಸುಲಭ ಪರಿಹಾರ


ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ- ಈ ಐದು ರಾಶಿಯವರಿಗೆ ಭಾಗ್ಯೋದಯದ ಸಮಯ:- 
ಆಗಸ್ಟ್‌ನಲ್ಲಿ ಸೂರ್ಯನ ಸಂಚಾರವು ಐದು ರಾಶಿಯವರಿಗೆ ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ. ಆಗಸ್ಟ್ 17, 2023ರಂದು ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸಿದ ಬಳಿಕ ಮೇಷ, ಸಿಂಹ, ಕನ್ಯಾ, ಮಿಥುನ ಮತ್ತು ಧನು ರಾಶಿಯ ಜನರ ಜೀವನದಲ್ಲಿ ಭಾಗ್ಯದ ಬಾಗಿಲುಗಳು ತೆರೆಯಲಿವೆ. ಇದರಿಂದಾಗಿ, ಈ ರಾಶಿಯವರ ವೃತ್ತಿ ಭವಿಷ್ಯವು ಸೂರ್ಯನಂತೆ ಕಂಗೊಳಿಸಲಿದೆ ಎಂದು ಹೇಳಲಾಗುತ್ತಿದೆ. 


ಸೂರ್ಯ ರಾಶಿ ಪರಿವರ್ತನೆಯ ಶುಭ ಫಲದಿಂದಾಗಿ ಈ ಐದು ರಾಶಿಯ ಉದ್ಯೋಗಸ್ಥರು ವೃತ್ತಿ ರಂಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದು, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ಈ ರಾಶಿಗಳ ವ್ಯಾಪಾರಸ್ಥರಿಗೂ ಬಂಪರ್ ಲಾಭವಾಗಲಿದ್ದು, ಪ್ರಗತಿ ಸಾಧಿಸುವರು ಎಂದು ಹೇಳಲಾಗುತ್ತದೆ. ಹಣಕಾಸಿನ ವಿಷಯದಲ್ಲೂ ಸಮಯ  ಉತ್ತಮವಾಗಿದ್ದು ಬೇರೆಡೆ ಸಿಲುಕಿರುವ ಹಣ ಈಗ ನಿಮ್ಮ ಕೈ ಸೇರಲಿದೆ ಒಟ್ಟಾರೆಯಾಗಿ ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಈ ಐದು ರಾಶಿಯವರಿಗೆ ಬಂಗಾರದ ಸಮಯ ಎಂತಲೇ ಹೇಳಬಹುದು. 


ಇದನ್ನೂ ಓದಿ- Astro tips: ಶುಕ್ರನಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ..!


ಸಿಂಹ ರಾಶಿಯಲ್ಲಿ ಸೂರ್ಯ ರಾಶಿ ಪರಿವರ್ತನೆ: ಈ ಮೂರು ರಾಶಿಯವರು ಎಚ್ಚರಿಕೆಯಿಂದಿರಿ: 
ಇನ್ನೂ ಸಿಂಹ ರಾಶಿಯಲ್ಲಿ ಸೂರ್ಯನ ರಾಶಿ ಪರಿವರ್ತನೆಯನ್ನು ಮೂರು ರಾಶಿಯವರ ದೃಷ್ಟಿಯಲ್ಲಿ ಅಷ್ಟು ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿದೆ. ಆಗಸ್ಟ್ 17, 2023ರಂದು ಸೂರ್ಯ ಸಿಂಹ ರಾಶಿಗೆ ಪ್ರವೇಶಿಸಿದ ಬಳಿಕ ಮುಂದಿನ ಒಂದು ತಿಂಗಳುಗಳ ಕಾಲ ವೃಷಭ, ತುಲಾ ಮತ್ತು ಕುಂಭ ರಾಶಿಯ ಜನರು ಬಹಳ ಎಚ್ಚರಿಕೆಯಿಂದ ಮುಂದುವರೆಯಬೇಕು. ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಿರುತ್ತದೆ. ಇದಲ್ಲದೆ, ಬೇರೆಯವರನ್ನು ನಂಬಿ ಹಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ, ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ನರಳಾಡಬೇಕಾಗುತ್ತದೆ, ಎಚ್ಚರ. 


ಇನ್ನುಳಿದಂತೆ  ನಾಲ್ಕು ರಾಶಿಯವರಿಗೆ ಸೂರ್ಯ ರಾಶಿ ಪರಿವರ್ತನೆಯು ಮಿಶ್ರ ಫಲವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.