ನವದೆಹಲಿ: ಆಗಸ್ಟ್ ತಿಂಗಳಿನಲ್ಲಿ ಹಲವಾರು ಗ್ರಹಗಳ ಸಂಚಾರವಿದೆ. ಈ ಪೈಕಿ ಸಂಪತ್ತಿನ ಅಧಿಪತಿಯಾದ ಶುಕ್ರನ ಸಂಚಾರವಿದ್ದು, ಇದರಿಂದ ಅನೇಕ ರಾಶಿಯವರಿಗೆ ಲಾಭವಾಗಲಿದೆ. ಆಗಸ್ಟ್ ತಿಂಗಳಿನಲ್ಲಿ ಒಟ್ಟು 4 ಗ್ರಹಗಳ ಸಂಚಾರವಿದೆ. ಇದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೂ ಆಗುತ್ತದೆ. ಶುಕ್ರನಿಂದ ಯಾವಾಗಲೂ ಲಾಭವೇ ಆಗುತ್ತದೆ. ಶುಕ್ರ ಸಂಚಾರದಿಂದ ಶುಭ ಯೋಗಗಳು ಸೃಷ್ಟಿಯಾಗುತ್ತದೆ. ಶುಕ್ರ ಸುಮಾರು 45 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಇದು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುವಾಗ ಕೆಲವು ರಾಶಿಗಳ ಅದೃಷ್ಟ ಬದಲಾಗುತ್ತದೆ. ಇದರಿಂದ ಆರ್ಥಿಕವಾಗಿ ಬಹಳ ಲಾಭವಾಗುತ್ತದೆ. ಈ ಶುಕ್ರ ಸಂಚಾರದಿಂದ ಯಾವ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಇಲ್ಲಿದೆ.
ಕನ್ಯಾ ರಾಶಿ: ಶುಕ್ರನ ಸಂಚಾರದಿಂದ ಕನ್ಯಾ ರಾಶಿಯವರಿಗೆ ಬಹಳ ಒಳ್ಳೆಯದಾಗುತ್ತದೆ. ಇವರು ಅಪಾರ ಸಂಪತ್ತನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ಹೊಸ ಹಣಕಾಸಿನ ವ್ಯವಹಾರ ಮಾಡಿದರೆ ಜೀವನವೇ ಬದಲಾಗುವ ರೀತಿಯಲ್ಲಿ ಯಶಸ್ಸು ಸಿಗುತ್ತದೆ. ಭವಿಷ್ಯದಲ್ಲಿ ಇದು ಉತ್ತಮ ಲಾಭವನ್ನು ಸಹ ನೀಡುತ್ತದೆ.
ಇದನ್ನೂ ಓದಿ: ಡಿಟಾಕ್ಸ್ ಡೈಯಟ್ ನಿಂದ ತೂಕ ಇಳಿಕೆ ಮಾಡಿಕೊಳ್ಳುವ ವಿಧಾನ ಎಷ್ಟೊಂದು ಸರಿ!
ಧನು ರಾಶಿ: ಶುಕ್ರನ ಈ ರಾಶಿ ಬದಲಾವಣೆಯಿಂದ ಧನು ರಾಶಿಯವರಿಗೆ ಉತ್ತಮ ಲಾಭವಾಗಲಿದ್ದು, ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ಪ್ರತಿಯೊಂದು ಕೆಲಸದಲ್ಲಿಯೂ ದೊಡ್ಡ ಯಶಸ್ಸು ಸಿಗುತ್ತದೆ.
ಮಕರ ರಾಶಿ: ಶುಕ್ರನ ಸಂಚಾರದಿಂದ ಮಕರ ರಾಶಿಯವರ ಧೈರ್ಯ ಹೆಚ್ಚಾಗುತ್ತದೆ. ವಿದೇಶಕ್ಕೆ ಸಂಬಂಧಿಸಿದಂತೆ ವ್ಯವಹಾರದಲ್ಲಿ ಯಶಸ್ಸು ಹಾಗೂ ಉತ್ತಮ ಹಣಕಾಸಿನ ಲಾಭವೂ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಕೂಡ ಸುಖ-ಸಂತೋಷ ಹೆಚ್ಚಾಗುತ್ತದೆ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಚಮತ್ಕಾರಿಕ ಪದ್ಧತಿಯಲ್ಲಿ ತೂಕ ಇಳಿಕೆ ಮಾಡುತ್ತೆ ಈ ಪೇಯ!
ಮೇಷ ರಾಶಿ: ಶುಕ್ರನ ಸಂಚಾರದಿಂದ ಮೇಷ ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ಆರ್ಥಿಕವಾಗಿ ಸಹ ಲಾಭವಾಗುತ್ತದೆ. ವಾಹನಗಳು ಮತ್ತು ಆಸ್ತಿ ಖರೀದಿಸಲು ಸಹ ಇದು ಸೂಕ್ತ ಸಮಯವಾಗಿದ್ದು, ನಿಮ್ಮ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.