Surya Rashi Parivartane: ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ ದೇವ ಇನ್ನೂ ಐದು ದಿನಗಳಲ್ಲಿ ಎಂದರೆ ಸೆಪ್ಟೆಂಬರ್ 17, 2023ರಂದು ಮಧ್ಯಾಹ್ನ 1:30ಕ್ಕೆ ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. 2023ರ ಅಕ್ಟೋಬರ್ 17 ರ ಮಧ್ಯರಾತ್ರಿಯವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಸೂರ್ಯ ಎಲ್ಲಾ 12  ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದ್ದಾನೆ. ನಿಮ್ಮ ಮೇಲೆ ಸೂರ್ಯ ರಾಶಿ ಪರಿವರ್ತನೆಯ ಪರಿಣಾಮ ಏನು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಸೂರ್ಯ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಏನು ಪರಿಣಾಮ:- 
ಮೇಷ ರಾಶಿ: 

ಸೂರ್ಯ ಸಂಚಾರವು ಮೇಷ ರಾಶಿಯವರಿಗೆ ಶುಭ ದಿನಗಳನ್ನು ತರಲಿದೆ. ಈ ಸಂದರ್ಭದಲ್ಲಿ ನ್ಯಾಯಾಲದಲ್ಲಿರುವ ಪ್ರಕರಣಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. 
ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾದ ತಡಮಾಡಬೇಡಿ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಬಹುದು. 


ವೃಷಭ ರಾಶಿ: 
ವೃಷಭ ರಾಶಿಯ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರಿಗಾಗಿ ಸೂರ್ಯ ರಾಶಿ ಪರಿವರ್ತನೆಯು ಅದೃಷ್ಟದ ಸಮಯ ಎಂದು ಸಾಬೀತು ಪಡಿಸಲಿದೆ. ವಿವಾಹಿತರಿಗೆ ದಾಂಪತ್ಯ ಜೀವನ ಸುಖ-ಸಂತೋಷದಿಂದ ಕೂಡಿರಲಿದೆ. ಮಕ್ಕಳಿಂದ ಸಂತಸದ ಸುದ್ದಿಯನ್ನು ಸ್ವೀಕರಿಸುವಿರಿ. ಕುಟುಂಬದ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಂಭವವಿರುವುದರಿಂದ ವಾದ-ವಿವಾದಗಳನ್ನು ತಪ್ಪಿಸಿ. 


ಮಿಥುನ ರಾಶಿ: 
ಸೂರ್ಯ ಸಂಚಾರವು ಮಿಥುನ ರಾಶಿಯವರಿಗೆ ಏರಿಳಿತಗಳಿಂದ ಕೂಡಿರಲಿದೆ. ಈ ಸಮಯದಲ್ಲಿ ಕೌಟುಂಬಿಕ ಬಿಕ್ಕಟ್ಟು ಹೆಚ್ಚಾಗಲಿದ್ದು ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಸ್ನೇಹಿತರು ಮತ್ತು ಸಂಬಂಧಿಕರಿಂದ ಅಹಿತಕರ ಸುದ್ದಿಗಳನ್ನು ಕೇಳುವ ಸಾಧ್ಯತೆಯಿದೆ. ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಿ. ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂಬುದನ್ನೂ ನೆನಪಿನಲ್ಲಿಡಿ. 


ಕರ್ಕಾಟಕ ರಾಶಿ: 
ಸೂರ್ಯ ರಾಶಿ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಸರ್ಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸಮಯ ಅತ್ಯುತ್ತಮವಾಗಿದೆ. ದಾನ ಮಾಡುವುದರಿಂದ ಶುಭ ಫಲಗಳನ್ನು ಪಡೆಯುವಿರಿ. ಆದರೆ, ನಿಮ್ಮಿಂದ ಕಿರಿಯರೊಡನೆ ಮಾತನಾಡುವಾಗ ಅವರ ಮನಸ್ಸಿಗೆ ನೋವಾಗುವಂತಹ ಪದಗಳನ್ನು ಬಳಸಬೇಡಿ. ಇದು ನಿಮ್ಮ ನಡುವೆ ಭಿನ್ನಾಭಿಪ್ರಾಯವನ್ನು ಮೂಡಿಸಬಹುದು. 


ಇದನ್ನೂ ಓದಿ- Shani Margi: 2024ರವರೆಗೆ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸು ನೀಡಲಿದ್ದಾನೆ ಶನಿ ದೇವ


ಸಿಂಹ ರಾಶಿ: 
ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಗೆ ಪ್ರವೇಶಿಸಲಿರುವ ಸೂರ್ಯ ಆರ್ಥಿಕ ಬಲವನ್ನು ನೀಡಲಿದ್ದಾನೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿದ್ದ ಹಣ ನಿಮ್ಮ ಕೈ ಸೇರುವ ನಿರೀಕ್ಷೆ ಇದೆ. ಅನಿರೀಕ್ಷಿತವಾಗಿ ಆಹ್ಲಾದಕರ ಸುದ್ದಿಗಳಿಂದ ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ. ಆದಾಗ್ಯೂ, ಅಂತಹ ಪರಿಸ್ಥಿತಿಯಲ್ಲಿ ಯಾರೋ ಒಬ್ಬರ ಕಾರಣದಿಂದಾಗಿ ಪ್ರತ್ಯೇಕತೆಯ ಪರಿಸ್ಥಿತಿ ಉದ್ಭವಿಸಲು ಬಿಡಬೇಡಿ. ಯಾವುದೇ ನಿರ್ಧಾರ ಕೈಗೊಳ್ಳುವಾಗ ಎಲ್ಲಾ ಆಯಾಮಗಳಿಂದಲೂ ಯೋಚಿಸಿ ನಿರ್ಧರಿಸಿ. 


ಕನ್ಯಾ ರಾಶಿ: 
ಸ್ವ ರಾಶಿಯಲ್ಲಿ ಸೂರ್ಯನ ಪ್ರವೇಶವು ಸಕಲ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಆರೋಗ್ಯದ ದೃಷ್ಟಿಯಿಂದ ಪ್ರತಿಕೂಲವಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನು ತಪ್ಪಿಸಲು ಯಾವುದೇ ರೀತಿಯ ಸಣ್ಣ ಆರೋಗ್ಯ ಸಮಸ್ಯೆಗಳನ್ನು ಕೂಡ ನಿರ್ಲಕ್ಷಿಸಬೇಡಿ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ನಿಮ್ಮ ಪರವಾಗಿ ಆಗಲಿದೆ. ನೀವು ಯಾವುದೇ ರೀತಿಯ ಸರ್ಕಾರಿ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ ಸಮಯ ಅತ್ಯುತ್ತಮವಾಗಿದೆ. 


ತುಲಾ ರಾಶಿ: 
ಸೂರ್ಯನ ಸಂಚಾರವು ತುಲಾ ರಾಶಿಯವರಿಗೆ ಅತಿಯಾದ ಓಡಾಟ ಮತ್ತು ಅನಗತ್ಯ ಖರ್ಚನ್ನು ಹೆಚ್ಚಿಸಲಿದ್ದಾನೆ. ನಿಮ್ಮ ಆತ್ಮೀಯ ಸ್ನೇಹಿತರು ಮತ್ತು ಸಂಬಂಧಿಕರಿಂದ ಶುಭ ಸುದ್ದಿ ಪಡೆಯುವ ಸಾಧ್ಯತೆಯಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಲು ಪ್ರಯತ್ನಿಸುತ್ತಿರುವವರಿಗೆ ನಿಮ್ಮ ಬಹುದಿನದ ಕನಸು ನನಸಾಗುವ ಸಾಧ್ಯತೆ ಇದೆ.  ಈ ಸಮಯದಲ್ಲಿ ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಬೇಕಾಗಬಹುದು. 


ವೃಶ್ಚಿಕ ರಾಶಿ: 
ಸೂರ್ಯ ರಾಶಿ ಪರಿವರ್ತನೆಯು ವೃಶ್ಚಿಕ ರಾಶಿಯವರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ವೃತ್ತಿ ರಂಗದಲ್ಲಿ ನೀವು ಹೊಸ ಒಪ್ಪಂದಕ್ಕೆ ಸಹಿ ಹಾಕಬೇಕಾಗಬಹುದು. ಯಾವುದೇ ದೊಡ್ಡ ಕೆಲಸಗಳನ್ನು ಮಾಡಲು ಯೋಚಿಸುತ್ತಿರುವರಿಗೆ ನಿಮ್ಮ ಯೋಜನೆಗಳು ಕೈಗೂಡುವ ಸಕಾಲ ಇದಾಗಿದೆ. ನಿಮ್ಮ ಕೆಲಸದ ದಕ್ಷತೆ ಮತ್ತು ನಾಯಕತ್ವದ ಶಕ್ತಿಯನ್ನು ಜನರು ಮೆಚ್ಚುತ್ತಾರೆ. ಇದರಿಂದ ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಚುನಾವಣೆ ಸಂಬಂಧಿತ ಕ್ಷೇತ್ರದಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ನೀವು ಬಯಸಿದರೆ ಗ್ರಹಗಳ ಸಂಚಾರವು ಅನುಕೂಲಕರವಾಗಿರುತ್ತದೆ.


ಇದನ್ನೂ ಓದಿ- Budh Vakri 2023: ಅಕ್ಟೋಬರ್ 1ರವರೆಗೆ ಈ ರಾಶಿಯವರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ


ಧನು ರಾಶಿ: 
ಸೂರ್ಯ ರಾಶಿ ಬದಲಾವಣೆಯು ಧನು ರಾಶಿಯ ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅನುಕೂಲಕರವಾಗಿದೆ. ಆದರೆ, ನಿಮ್ಮ ಪೋಷಕರ ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಿ.  ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳಲಿವೆ. ನೀವು ಯಾವುದೇ ರೀತಿಯ ಸರ್ಕಾರಿ ಟೆಂಡರ್‌ಗೆ ಅರ್ಜಿ ಸಲ್ಲಿಸಬೇಕಿದ್ದರೂ ಸಹ ಗ್ರಹಗಳ ಸಂಚಾರವು ಅನುಕೂಲಕರವಾಗಿರುತ್ತದೆ. ಭೂ ವಿವಾದಗಳು ಬಗೆಹರಿಯುತ್ತವೆ. ಹೊಸ ವಾಹನ ಖರೀದಿ ಯೋಗವೂ ಇದೆ. 


ಮಕರ ರಾಶಿ: 
ಸೂರ್ಯ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಈ ಸಂದರ್ಭದಲ್ಲಿ ನಿಮಗೆ ಧರ್ಮ ಮತ್ತು ಆಧ್ಯಾತ್ಮದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ, ಆದರೆ ಕೆಲಸದಲ್ಲಿ ಎಲ್ಲೋ ಅಡಚಣೆಯ ಲಕ್ಷಣಗಳು ಗೋಚರಿಸುತ್ತವೆ. ಆದರೆ, ಯಾವುದೇ ಕಾರಣಕ್ಕೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಪ್ರತಿ ಸಮಸ್ಯೆಗೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ.  ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧೆಗಳಿಗೆ ಹಾಜರಾಗುವವರಿಗೆ ಸಮಯವು ಹೆಚ್ಚು ಅನುಕೂಲಕರವಾಗಿರುತ್ತದೆ. 


ಕುಂಭ ರಾಶಿ: 
ಸೂರ್ಯ ಸಂಕ್ರಮಣ ಕುಂಭ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೂ, ನೀವು ಹಿಂದೆ ಮಾಡಿರುವ ಪುಣ್ಯ ಕೆಲಸಗಳು ಈ ಸಮಯದಲ್ಲಿ ಉತ್ತಮ ಫಲ ನೀಡಲಿದ್ದು, ವಿಶೇಷವಾಗಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಯಾವುದೇ ಸರ್ಕಾರಿ ಗೌರವ ಅಥವಾ ಪ್ರಶಸ್ತಿಯನ್ನು ಸಹ ಘೋಷಿಸಬಹುದು. ಆದರೆ, ನಿಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನ ಕೊಡ. ಯಾವುದೇ ರೀತಿಯ ವಿವಾದಿತ ವಿಷಯಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸುವುದು ಜಾಣತನ. 


ಮೀನ ರಾಶಿ: 
ಸೂರ್ಯನ ಸಂಕ್ರಮಣದ ಪರಿಣಾಮವು ತುಂಬಾ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವು ಕಹಿ ಘಟನೆಗಳು ಉಂಟಾಗಬಹುದು. ಮಹಿಳೆಯರು ಅತ್ತೆ-ಮಾವಂದಿರೊಂದಿಗಿನ ಸಂಬಂಧಗಳು ಹದಗೆಡಲು ಬಿಡಬೇಡಿ.  ನೀವು ಯಾವುದೇ ರೀತಿಯ ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಬಯಸಿದರೆ ಸಂಪೂರ್ಣವಾಗಿ ಕಾಗದ ಪತ್ರಗಳನ್ನು ಓದಿದ ನಂತರವೇ ಸಹಿ ಹಾಕಿ. ಇಲ್ಲದಿದ್ದರೆ, ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.