Surya Rashi Parivartane: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಆತ್ಮ ವಿಶ್ವಾಸ, ಇಚ್ಛಾಶಕ್ತಿಯ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಸೂರ್ಯ ದೇವನನ್ನು ಗ್ರಹಗಳ ರಾಜ ಎಂತಲೂ ಕರೆಯಲಾಗುತ್ತದೆ. ನಾಳೆ ಎಂದರೆ ಆಗಸ್ಟ್ 17, 2023ರಂದು ಸೂರ್ಯ ದೇವನು ತನ್ನದೇ ಆದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಸ್ವರಾಶಿಯಲ್ಲಿ ಸೂರ್ಯದೇವನ ಪ್ರವೇಶವು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳು ಕಂಡು ಬರುತ್ತವೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ರಾಶಿ ಪರಿವರ್ತನೆ ವೇಳೆ ಎಲ್ಲಾ 12 ರಾಶಿಯವರು ತಮ್ಮ ರಾಶಿಗೆ ಅನುಗುಣವಾಗಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತವೆ. ಅವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಸೂರ್ಯ ರಾಶಿ ಪರಿವರ್ತನೆ ವೇಳೆ ಯಾವ ರಾಶಿಯವರು ಯಾವ ಪರಿಹಾರ ಕೈಗೊಳ್ಳಬೇಕು ಎಂದು ತಿಳಿಯೋಣ... 


ಸಿಂಹ ರಾಶಿಗೆ ಸೂರ್ಯನ ಪ್ರವೇಶ: ನಿಮ್ಮ ರಾಶಿಗೆ ಅನುಗುಣವಾಗಿ ಈ ಕೆಲಸ ಮಾಡಿದರೆ ಶುಭ:- 
ಮೇಷ ರಾಶಿ: 

ಮೇಷ ರಾಶಿಯವರು ಸೂರ್ಯೋದಯಕ್ಕೆ ಮುನ್ನವೇ ಎದ್ದು ಕೆಂಪು ಬಣ್ಣದ ಹೂವಿನ ಸಸ್ಯಗಳಿಗೆ ನೀರುಣಿಸಿ. ಇದರೊಂದಿಗೆ ತಾಮ್ರ ಇಲ್ಲವೇ ಲೋಹದ ಪಾತ್ರೆಯಲ್ಲಿ ಗುಲಾಬಿ ಹೂವುಗಳನ್ನು ಇಡುವುದರಿದ ಜಾತಕದಲ್ಲಿ ಸೂರ್ಯ ಬಲಗೊಳ್ಳುತ್ತಾನೆ. 


ವೃಷಭ ರಾಶಿ: 
ವೃಷಭ ರಾಶಿಯವರು ಮುಸ್ಸಂಜೆ ವೇಳೆ ಅರಳಿ ಮರದ ಕೆಳಗೆ ನಾಲ್ಕು ಮುಖದ ದೀಪವನ್ನು ಬೆಳಗಿಸಿ. ಬಳಿಕ ಗೋ ಮಾತೆಗೆ ಬೆಲ್ಲವನ್ನು ತಿನ್ನಿಸಿ. ಇದರಿಂದ ನಿಮ್ಮ ಜೀವನದಲ್ಲಿ ತಲೆದೂರಿರುವ ಸಮಸ್ಯೆಗಳು ಬಗೆಹರಿಯುತ್ತವೆ. 


ಮಿಥುನ ರಾಶಿ: 
ಮಿಥುನ ರಾಶಿಯವರು ಭಾನುವಾರದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ (ಸಾಧ್ಯವಾದರೆ ನದಿಯಲ್ಲಿ ಸ್ನಾನಮಾಡಿ, ಇಲ್ಲವೇ ನೀವು ಸ್ನಾನ ಮಾಡುವ ನೀರಿನಲ್ಲಿ ನದಿಯ ನೀರನ್ನು ಬೆರೆಸಿ ಸ್ನಾನ ಮಾಡಿ) ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಇದರಿಂದ ಸೂರ್ಯ ದೋಷ ನಿವಾರಣೆ ಆಗುತ್ತದೆ. 


ಇದನ್ನೂ ಓದಿ- ಜಾತಕದಲ್ಲಿ ಲಕ್ಷ್ಮೀ ನಾರಾಯಣ ಯೋಗ! ಇನ್ನೊಂದು ವರ್ಷ ಈ ರಾಶಿಗೆ ಸೋಲೇ ಇಲ್ಲ, ಕಾಲಿಟ್ಟಲ್ಲೆಲ್ಲಾ ಯಶಸ್ಸು, ಸರ್ವ ಸಂಪತ್ತು ನಿಮ್ಮದೇ


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಭಾನುವಾರ ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡಿ ಕೆಂಪು ಚಂದನ, ಕೆಂಪು ಹೂವು, ಅಕ್ಷತೆ ಮತ್ತು ದುರ್ವವನ್ನು ಶುದ್ಧ ನೀರಿನಲ್ಲಿ ಬೆರೆಸಿ ಪಾತ್ರೆಯಲ್ಲಿ ಇರಿಸಿ. ಸೂರ್ಯ ಉದಯಿಸುವ ಸಮಯದಲ್ಲಿ ಈ ನೀರನ್ನು ಸೂರ್ಯ ದೇವನಿಗೆ ಅರ್ಪಿಸಿ. ಈ ರೀತಿ ಮಾಡುವುದರಿಂದ ಜಾತಕ್ದಲ್ಲಿ ಸೂರ್ಯ ಬಲಗೊಳ್ಳುತ್ತಾನೆ. 


ಸಿಂಹ ರಾಶಿ: 
ಸ್ವ ರಾಶಿಯಲ್ಲಿ ಸೂರ್ಯ ರಾಶಿ ಪರಿವರ್ತನೆಯು ಸಿಂಹ ರಾಶಿಯವರಿಗೆ ವಿಶೇಷ ಫಲವನ್ನು ನೀಡಲಿದೆ. ಆದರೂ, ನೀವು ಈ ಸಮಯದಲ್ಲಿ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ನಿಮ್ಮ ಕೈಲಾದದನ್ನು ಅಗತ್ಯವಿರುವವರಿಗೆ ದಾನ ಮಾಡಿ. ಓಂ ಹ್ರೀ ಹ್ರೀ ಸೂರ್ಯಾಯ ನಮಃ ಮಂತ್ರವನ್ನು ಜಪಿಸಿ. ಈ ರೀತಿ ಮಾಡುವುದರಿಂದ ಜೀವಂದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯುತ್ತವೆ ಎಂದು ನಂಬಲಾಗಿದೆ. 


ಕನ್ಯಾ ರಾಶಿ: 
ಕನ್ಯಾ ರಾಶಿಯವರು 12 ವಾರಗಳ ಕಾಲ ಪ್ರತಿ ಭಾನುವಾರ ಸೂರ್ಯೋದಯದ ಸಮಯದಲ್ಲಿ ಸೂರ್ಯಾಷ್ಟಕವನ್ನು ನಿರಂತರವಾಗಿ ಪಠಿಸಿ. ಜೊತೆಗೆ ನಿಮ್ಮ ಕೈಲಾದಷ್ಟೂ ಅಗತ್ಯವಿರುವವರಿಗೆ ದಾನ-ಧರ್ಮ ಮಾಡಿ. ಇದರಿಂದ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗುತ್ತದೆ. 


ತುಲಾ ರಾಶಿ: 
ತುಲಾ ರಾಶಿಯವರು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಸ್ನಾನ ಮಾಡಿ ಮಡಿ ಉಟ್ಟು ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಬಳಿಕ ಕೆಂಪು ಹೂವುಗಳು, ಕೆಂಪು ಚಂದನ, ಅಕ್ಕಿ ಇತ್ಯಾದಿಗಳನ್ನು ಅರ್ಪಿಸಿ. ಇದರಿಂದ ಸೂರ್ಯ ದೋಷ ನಿವಾರಣೆಯಾಗಿ, ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. 


ವೃಶ್ಚಿಕ ರಾಶಿ: 
ವೃಶ್ಚಿಕರಾಶಿಯವರು ಪ್ರತಿ ಭಾನುವಾರ ಉಪವಾಸ ಆಚರಿಸಿ ಹಾಗೆಯೇ ಓಂ ಘ್ರಿಣಿ: ಸೂರ್ಯ ನಮಃ ಎಂಬ ಸೂರ್ಯನ ಮಂತ್ರವನ್ನು ಪಠಿಸಿ. ಅಗತ್ಯವಿರುವವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿದರೆ ಶುಭವಾಗುತ್ತದೆ. 


ಇದನ್ನೂ ಓದಿ- ಶ್ರಾವಣದಲ್ಲಿ ಈ 5 ಗಿಡಗಳನ್ನು ನೆಟ್ಟರೆ ಶಿವನ ಅನುಗ್ರಹವಾಗುತ್ತೆ, ಮನೆಯಲ್ಲಿ ಧನಕನಕ ವೃದ್ಧಿಯಾಗುವುದು!


ಧನು ರಾಶಿ: 
ಧನು ರಾಶಿಯವರು ನಿಮ್ಮ ಜಾತಕದಲ್ಲಿ ಸೂರ್ಯನನ್ನು ಬಳಪಡಿಸಲು ಒಂದು ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಅದರಲ್ಲಿ ಅರಿಶಿನವನ್ನು ಬೆರೆಸಿ ಅದನ್ನು ಸೂರ್ಯ ದೇವನಿಗೆ ಅರ್ಘ್ಯವಾಗಿ ಅರ್ಪಿಸಿ. 


ಮಕರ ರಾಶಿ: 
ಮಕರ ರಾಶಿಯವರು ಭಾನುವಾರ ಸ್ನಾನ ಮಾಡಿ ಶುಭ್ರ ಕೆಂಪು ಬಟ್ಟೆಯನ್ನು ಧರಿಸಿ ಸೂರ್ಯ ದೇವನಿಗೆ ನೀರು ಅರ್ಪಿಸಿ. ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಾ ಇದರೊಂದಿಗೆ ಓಂ ಹ್ರಾನ್ ಹ್ರೀನ್ ಹ್ರಾನ್ ಸ: ಸೂರ್ಯಾಯ ನಮಃ ಮಂತ್ರವನ್ನು ಜಪಿಸಿ. ಇದರಿಂದ ಸೂರ್ಯ ದೋಷ ಪರಿಹಾರವಾಗುತ್ತದೆ. 


ಕುಂಭ ರಾಶಿ: 
ಕುಂಭ ರಾಶಿಯವರು ಪ್ರತಿ ಭಾನುವಾರ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಬಳಿಕ ಹಸು, ಮೀನುಗಳಿಗೆ ಆಹಾರವನ್ನು ನೀಡಿ. ಇದರಿಂದ ಸೂರ್ಯ ಗ್ರಹಕ್ಕೆ ಸಂಬಂಧಿಸಿದ ಯಾವುದೇ ದೋಷವಿದ್ದರೂ ಪರಿಹಾರವಾಗುತ್ತದೆ. 


ಮೀನ ರಾಶಿ: 
ಮೀನಾ ರಾಶಿಯವರು ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿ ಅದರಲ್ಲಿ ಕೆಂಪು ಚಂದನ, ಕೆಂಪು ಹೂವುಗಳು, ಅಕ್ಷತೆ ಮತ್ತು ದೂರ್ವಾವನ್ನು ಮಿಶ್ರಣ ಮಾಡಿ. ಈ ನೀರನ್ನು ಸೂರ್ಯದೇವನಿಗೆ ಅಪ್ರಿಸಿ. ಜೊತೆಗೆ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಸೂರ್ಯನನ್ನು ಬಳಪಡಿಸಬಹುದು ಎಂದು ನಂಬಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.