ನೇರನಡೆಯ ಶನಿಯಿಂದ ಶಶ ರಾಜಯೋಗ ನಿರ್ಮಾಣ, ಝಣಝಣಿಸುತ್ತ ಸುರಿಯಲಿದೆ ಹಣದ ಸುರಿಮಳೆ!

Shash Rajyog 2023: ನವಗ್ರಹಗಳಲ್ಲಿ ಶನಿಯನ್ನು ಅತ್ಯಂತ ಮಹತ್ವಪೂರ್ಣ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶನಿ ತನ್ನ ರಾಶಿಯನ್ನು ಬದಲಾಯಿಸಲು ಸುಮಾರು ಎರಡೂವರೆ ವರ್ಷಗಳ ಕಾಲ ತೆಗೆದುಕೊಳ್ಳುತ್ತಾನೆ. ಪ್ರಸ್ತುತ ಆತ ತನ್ನ ಹಿಮ್ಮುಖ ನಡೆಯನ್ನು ಅನುಸರಿಸುತ್ತಿದ್ದಾನೆ, ಆದರೆ ಆತ ಒಮ್ಮೆ ನೆರನಡೆಗೆ ಬಂದರೆ, ಕೆಲ ರಾಶಿಗಳ ಜನರಿಗೆ ಆತ ಶುಭ ಫಲಿತಾಂಶಗಳನ್ನು ನೀಡಲು ಆರಂಭಿಸಲಿದ್ದಾನೆ (Lifestyle News In Kannada).  

Written by - Nitin Tabib | Last Updated : Aug 14, 2023, 09:38 PM IST
  • ನವೆಂಬರ್ 4 ರಿಂದ ಶನಿದೇವ ಮಾರ್ಗಿಯಾಗಲಿದ್ದಾನೆ. ಅಂದರೆ ಆತ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ.
  • ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸಲಿರುವ ಆತ ಷಶ ರಾಜಯೋಗ ನಿರ್ಮಿಸಲಿದ್ದಾನೆ.
  • ಜ್ಯೋತಿಷ್ಯದಲ್ಲಿ, ಈ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.
  • ಈ ರಾಜಯೋಗದ ಪ್ರಭಾವದಿಂದ ಕೆಲವು ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ನೇರನಡೆಯ ಶನಿಯಿಂದ ಶಶ ರಾಜಯೋಗ ನಿರ್ಮಾಣ, ಝಣಝಣಿಸುತ್ತ ಸುರಿಯಲಿದೆ ಹಣದ ಸುರಿಮಳೆ! title=

ಬೆಂಗಳೂರು: ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ಅತ್ಯಂತ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ. ಇಂತನ ಪರಿಸ್ಥಿತಿಯಲ್ಲಿ, ಆತನ ನಡೆಯಲ್ಲಿನ ಬದಲಾವಣೆಯು ಮಾನವನ ಜೀವನ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗಲಿದೆ. ಶನಿ ದೇವ್ ಜೂನ್ 17 ರಂದು ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ, ಅಂದರೆ ಪ್ರಸ್ತುತ ಆತ ವಕ್ರಭಾವದಲ್ಲಿ ಸಂಚರಿಸುತ್ತಿದ್ದಾನೆ ಎಂದರ್ಥ (Lifestyle News In Kannada). ನವೆಂಬರ್ ವರೆಗೆ ಆತ ಇದೇ ಸ್ಥಿತಿಯಲ್ಲಿರಲಿದ್ದಾನೆ. ಇದಾದ ನಂತರ ನವೆಂಬರ್ 4 ರಿಂದ ಶನಿದೇವ ಮಾರ್ಗಿಯಾಗಲಿದ್ದಾನೆ.  ಅಂದರೆ ಆತ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ. ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸಲಿರುವ ಆತ ಷಶ ರಾಜಯೋಗ ನಿರ್ಮಿಸಲಿದ್ದಾನೆ. ಜ್ಯೋತಿಷ್ಯದಲ್ಲಿ, ಈ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಈ ರಾಜಯೋಗದ ಪ್ರಭಾವದಿಂದ ಕೆಲವು ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

ಕುಂಭ ರಾಶಿ
ಶನಿಯ ನೇರ ಸಂಚಾರದಿಂದ ಕುಂಭ ರಾಶಿಯವರಿಗೆ ಶುಭ ದಿನಗಳು ಆರಂಭವಾಗಲಿದೆ. ಶನಿಯು ಕುಂಭ ರಾಶಿಯ ಅಧಿಪತಿಯಾಗಿದ್ದು, ಈ ಅವಧಿಯಲ್ಲಿ ಆತ  ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಂಭ ರಾಶಿಯಲ್ಲಿ ಶನಿಯ ಧನಾತ್ಮಕ ಸಂಚಾರವು ಈ ರಾಶಿಯ ಸ್ಥಳೀಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಉನ್ನತ ಶ್ರೇಣಿಯ ಜನರೊಂದಿಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. ಆರ್ಥಿಕ ಲಾಭವಿರುತ್ತದೆ. ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಕಾಣುವಿರಿ. ಪಾಲುದಾರಿಕೆ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು.

ವೃಷಭ ರಾಶಿ
ಶನಿಯ ಸಕಾರಾತ್ಮಕ ಸಂಚಾರ ವೃಷಭ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಶಶ್ ರಾಜಯೋಗವು ಈ ಜನರ ಅದೃಷ್ಟವನ್ನೇ ಬದಲಾಯಿಸಲಿದೆ. ನಿಮ್ಮ ಎಲ್ಲಾ ಆಸೆಗಳು ಈಡೇರಲಿವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಬಲವಾದ ಪ್ರಗತಿಯನ್ನು ಸಾಧಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಸುವರ್ಣ ಅವಕಾಶಗಳನ್ನು ಪಡೆಯುವಿರಿ, ಇದು  ನಿಮಗೆ ಉನ್ನತ ಸ್ಥಾನ ಮತ್ತು ವೇತನ ಹೆಚ್ಚಳ ನೀಡಲಿದೆ. ನೀವು ಬಲವಾದ ಆರ್ಥಿಕ ಪ್ರಯೋಜನಗಳನ್ನು ಪಡೆಯುವಿರಿ ಮತ್ತು ಇದರಿಂದ  ನಿಮ್ಮ ಜೀವನದಲ್ಲಿ ಆರ್ಥಿಕ ಸಮೃದ್ಧಿ ಬರಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ-ಬುಧನ ಮನೆಯಲ್ಲಿ ಮಿತ್ರ ಸೂರ್ಯನ ಜೊತೆಗೆ ಭೂಮಿ ಪುತ್ರನ ಯುತಿ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಭಾಗ್ಯ!

ಸಿಂಹ ರಾಶಿ
ಶನಿ ಮಾರ್ಗಿಯಿಂದ ರೂಪಗೊಳ್ಳುವ ಶಶ ರಾಜಯೋಗವು ಸಿಂಹ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ವಿಶೇಷವಾಗಿ ಕೌಟುಂಬಿಕ ಜೀವನದಲ್ಲಿ ಸಂತೋಷ ಇರಲಿದೆ. ವಿವಾಹಿತರ ಜೀವನದಲ್ಲಿ ಸಂತೋಷ ಇರಲಿದೆ. ಪತಿ ಪತ್ನಿಯರ ಸಂಬಂಧ ಗಟ್ಟಿಯಾಗಲಿದೆ. ಭೌತಿಕ ಸುಖಗಳು ಹೆಚ್ಚಾಗಳಿವೆ. ಆರ್ಥಿಕ ದೃಷ್ಟಿಯಿಂದಲೂ ಸಾಕಷ್ಟು ಲಾಭವಾಗಲಿದೆ. ಯಾವುದೇ ವಿವಾದಿತ ವಿಷಯದಲ್ಲಿ ಯಶಸ್ಸು ನಿಮ್ಮದಾಗಲಿದೆ.

ಇದನ್ನೂ ಓದಿ-ಬುಧ-ಶುಕ್ರರ ಮೈತ್ರಿಯಿಂದ ನಿರ್ಮಾಣಗೊಳ್ಳುತ್ತಿದೆ ಅದ್ಭುತ ಯೋಗ, ಲಕ್ಷ್ಮಿ-ನಾರಾಯಣರ ಕೃಪೆಯಿಂದ ಈ ಜನರಿಗೆ ಆಕಸ್ಮಿಕ ಧನಲಾಭ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News