ಆಸ್ಟ್ರೋ ಸಲಹೆ: ದೇವಸ್ಥಾನಕ್ಕೆ ಹೋದಾಗ ಅಯ್ಯೋ ನಮ್ಮ ಚಪ್ಪಲಿಯನ್ನು ಯಾರಾದರೂ ಕದ್ದರೆ ಎಂಬ ಭಯ ಒಂದು ಕ್ಷಣಕ್ಕಾದರೂ ಕಾಡುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಸ್ಥಾನದಲ್ಲಿ ಪಾದರಕ್ಷೆ ಕಳೆದು ಹೋಗುವುದು ತುಂಬಾ ಮಂಗಳಕರ. ಅದರಲ್ಲೂ, ದೇವಾಲಯದಲ್ಲಿ ಶನಿವಾರದಂದು ಚಪ್ಪಲಿ ಕಳೆದುಹೋದರೆ ಅದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ದೇವಾಲಯದಲ್ಲಿ ಪಾದರಕ್ಷೆ ಕಳುವಾಗುವುದರ ಅರ್ಥ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ದೇವಸ್ಥಾನದ ಹೊರಗೆ ಯಾರೊಬ್ಬರ ಪಾದರಕ್ಷೆ ಮತ್ತು ಚಪ್ಪಲಿಗಳು ಕಳ್ಳತನವಾದರೆ, ಆ ವ್ಯಕ್ತಿಗೆ ಕೆಟ್ಟ ಕಾಲದಿಂದ ಮುಕ್ತಿ ದೊರೆಯಲಿದೆ ಎಂದರ್ಥ. ಅದೇ ಸಮಯದಲ್ಲಿ, ವ್ಯಕ್ತಿಯು ಬಡತನದಿಂದಲೂ ಹೊರಬರುತ್ತಾನೆ ಎಂದು ನಂಬಿಕೆ ಇದೆ. 


ಇದನ್ನೂ ಓದಿ- ಶನಿ ಕೋಪ ಶಮನಗೊಳಿಸಲು ಶ್ರಾವಣ ಮಾಸ ತುಂಬಾ ವಿಶೇಷ


ಶನಿವಾರದಂದು ಪಾದರಕ್ಷೆ ಕಳುವಾಗುವುದನ್ನು ಏಕೆ ಶುಭಕರ ಎಂದು ಪರಿಗಣಿಸಲಾಗುತ್ತದೆ:
ಶನಿವಾರದಂದು ದೇವಾಲಯದಿಂದ ಪಾದರಕ್ಷೆಗಳು ಕಣ್ಮರೆಯಾಗುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಶನಿಯಿಂದ ಉಂಟಾಗುವ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಶನಿಯು ಪಾದದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಆದ್ದರಿಂದ, ಪಾದರಕ್ಷೆಯು ಪಾದಗಳಿಗೆ ಸಂಬಂಧಿಸಿರುವುದರಿಂದ, ಶನಿಯನ್ನು ಪಾದರಕ್ಷೆಗಳ ಅಂಶವೆಂದು ಪರಿಗಣಿಸಲಾಗುತ್ತದೆ. 


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪ್ಪಲಿಯನ್ನು ದಾನ ಮಾಡುವುದರಿಂದ ಶನಿದೇವನ ಆಶೀರ್ವಾದ ದೊರೆಯುತ್ತದೆ. ಜಾತಕದಲ್ಲಿ ಶನಿಯ ಅಶುಭ ದಶಾದಿಂದಾಗಿ ವ್ಯಕ್ತಿಯು ಮಾಡಿದ ಕೆಲಸವು ಹಾಳಾಗುತ್ತದೆ. ಅವರು ಯಾವುದೇ ಕೆಲಸದಲ್ಲಿ ಸುಲಭವಾಗಿ ಯಶಸ್ಸು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಶನಿವಾರದಂದು ದೇವಸ್ಥಾನದಲ್ಲಿ ವ್ಯಕ್ತಿಯ ಪಾದರಕ್ಷೆಗಳು ಮತ್ತು ಚಪ್ಪಲಿಗಳು ಕಳ್ಳತನವಾಗಿದ್ದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. 


ಇದನ್ನೂ ಓದಿ- Surya Gochar 2022: ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ- ಈ ರಾಶಿಯವರಿಗೆ ಧನ ಹಾನಿ


ಅದೇ ಸಮಯದಲ್ಲಿ, ಕೆಲವರು ಶನಿವಾರ ದೇವಸ್ಥಾನದಲ್ಲಿ ತಮ್ಮ ಪಾದರಕ್ಷೆ ಮತ್ತು ಚಪ್ಪಲಿಯನ್ನು ಬಿಟ್ಟು ಹೋಗುತ್ತಾರೆ. ಹೀಗೆ ಮಾಡುವುದರಿಂದ ಶನಿದೇವನು ವ್ಯಕ್ತಿಯ ಕಷ್ಟಗಳನ್ನು ಕಡಿಮೆ ಮಾಡುತ್ತಾನೆ ಎಂದು ನಂಬಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.