ಇಂದಿನಿಂದ ಈ ರಾಶಿಯವರ ಅದೃಷ್ಟ ಬದಲಾಯಿಸಲಿದ್ದಾನೆ ಶುಕ್ರ

Venus Transit 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಮ್ಮ ಜಾತಕದಲ್ಲಿ ಶುಕ್ರನು ಪ್ರಬಲ ಸ್ಥಾನವನ್ನು ಹೊಂದಿರುತ್ತಾನೆ. ಶುಕ್ರ ಜಾತಕದಲ್ಲಿ ಪ್ರಬಲನಾಗಿದ್ದಾಗ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.  

Written by - Ranjitha R K | Last Updated : Jul 13, 2022, 11:38 AM IST
  • ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ
  • ಗ್ರಹಗಳ ಪರಿಣಾಮ ವ್ಯಕ್ತಿಯ ಜೀವನದ ಮೇಲೆ ಸ್ಪಷ್ಟವಾಗಿ ಕಾಣುತ್ತದೆ.
  • ಇಂದು ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತಿದೆ.
ಇಂದಿನಿಂದ ಈ ರಾಶಿಯವರ ಅದೃಷ್ಟ ಬದಲಾಯಿಸಲಿದ್ದಾನೆ ಶುಕ್ರ title=
Venus Transit 2022 (file photo)

Venus Transit 2022 : ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ತಿಂಗಳು ಕೆಲವು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಹೀಗಾದಾಗ ಅದರ ಪರಿಣಾಮ ಕೂಡಾ ವ್ಯಕ್ತಿಯ ಜೀವನದ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಇಂದು ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತಿದೆ. ಇದರ ಶುಭ ಮತ್ತು ಅಶುಭ ಪರಿಣಾಮಗಳು ಎಲ್ಲಾ ರಾಶಿಗಳ ಮೇಲೆ ಬೀರಲಿದೆ. ಶುಕ್ರ ಗ್ರಹವನ್ನು ಪ್ರೀತಿ, ಮದುವೆ, ಸಂತೋಷ ಮತ್ತು ಸೌಂದರ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಮ್ಮ ಜಾತಕದಲ್ಲಿ ಶುಕ್ರನು ಪ್ರಬಲ ಸ್ಥಾನವನ್ನು ಹೊಂದಿರುತ್ತಾನೆ. ಶುಕ್ರ ಜಾತಕದಲ್ಲಿ ಪ್ರಬಲನಾಗಿದ್ದಾಗ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಅಲ್ಲದೆ, ಸಮೃದ್ಧಿ ಮತ್ತು ಸಂತೋಷ ಲಭಿಸುತ್ತದೆ. ಅದೇ ಸಮಯದಲ್ಲಿ, ಜಾತಕದಲ್ಲಿ ಶುಕ್ರನು ದುರ್ಬಲನಾಗಿದ್ದಾಗ ವ್ಯಕ್ತಿಯೂ ಜೀವನದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : Girls Shocking Search History: ಮದುವೆಗೂ ಮುನ್ನ ಯುವತಿಯರು ಗೂಗಲ್ ನಲ್ಲಿ ಏನು ಸರ್ಚ್ ಮಾಡುತ್ತಾರೆ?

ಮಿಥುನ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಈ ರಾಶಿಯವರಿಗೆ ಲಾಭ :
ಕುಂಭ ರಾಶಿ:  ಶುಕ್ರ ಜುಲೈ 13 ರಂದು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಅನೇಕ ರಾಶಿಯವರ ಜೀವನದ ಮೇಲೆ ಶುಭ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಒಂದು ಕುಂಭ. ಶುಕ್ರನ ಸಂಕ್ರಮಣವು ಕುಂಭ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಜೀವನದಲ್ಲಿ ಸಂತೋಷ ಬರುತ್ತದೆ. ಆರ್ಥಿಕ ಸ್ಥಿತಿ ಸದೃಢವಾಗಿರಲಿದೆ. ವಿತ್ತೀಯ ಲಾಭದ ಸಾಧ್ಯತೆಗಳಿವೆ. ಅನೇಕ ಹೊಸ ಉದ್ಯೋಗಾವಕಾಶಗಳು ಸಿಗಲಿವೆ. ಅದೇ ಸಮಯದಲ್ಲಿ, ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಪ್ರಯೋಜನವಾಗಲಿದೆ.  

ತುಲಾ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ  ಉತ್ತಮ ಬೆಳವಣಿಗೆ ಮತ್ತು ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ. ಆಧ್ಯಾತ್ಮದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಹಠಾತ್ ಪ್ರಯಾಣ ಯೋಗವು ವಿಶೇಷ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ, ಅದೃಷ್ಟವು ಸಂಪೂರ್ಣ ಬೆಂಬಲ ನೀಡಲಿದೆ. ಅದೇ ಸಮಯದಲ್ಲಿ, ವೃತ್ತಿಜೀವನದಲ್ಲಿ ಬಡ್ತಿಯ ಅವಕಾಶಗಳಿವೆ. 

ಇದನ್ನೂ ಓದಿ : Lucky Girl : ಈ ರಾಶಿಯ ಹುಡುಗಿಯರು ಅತ್ತೆಯ ಮನೆಯಲ್ಲಿ ರಾಣಿಯಂತಿರುತ್ತಾರಂತೆ!

ಸಿಂಹ ರಾಶಿ : ಶುಕ್ರನ ಸಂಕ್ರಮವು ಈ ರಾಶಿಯವರಿಗೆ ವಿಶೇಷವಾದ ವಿತ್ತೀಯ ಲಾಭವನ್ನು ಕರುಣಿಸಲಿದ್ದಾನೆ. ಶುಕ್ರ ಸಂಕ್ರಮವು ನಿಮ್ಮನ್ನು ವಿದೇಶ ಪ್ರಯಾಣ ಮಾಡುವಂತೆ ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಉದ್ಯೋಗಸ್ಥರಿಗೆ ಹೆಚ್ಚಿನ ಉದ್ಯೋಗಾವಕಾಶಗಳೂ ದೊರೆಯಲಿವೆ. ಸಮಯದ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ.

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News