ನಿಮ್ಮ ಸುತ್ತ ನಡೆಯುವ ಈ ಶಕುನಗಳು ನೀಡುತ್ತವೆ ಶುಭ-ಅಶುಭ ದಿನಗಳ ಸೂಚನೆ
ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಶಕುನಗಳಿಗೆ ವಿಶೇಷವಾದ ಪರಿಗಣನೆಯನ್ನು ನೀಡಲಾಗುತ್ತದೆ. ಪ್ರಶ್ನೆ ಜಾತಕದ ವ್ಯಾಖ್ಯಾನದಲ್ಲಿ ಶಕುನಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರಾಚೀನ ಕಾಲದಿಂದಲೂ, ಶಕುನಗಳ ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ವರ್ಗಾಯಿಸಲಾಗುತ್ತಿದೆ.
ಭಾರತೀಯ ಸಂಸ್ಕೃತಿಯಲ್ಲಿ, ಶಕುನ ಸೂಚನೆಯು ವೇದಗಳು, ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳಲ್ಲಿಯೂ ಕಂಡುಬರುತ್ತದೆ. ಮಹಾಭಾರತ, ರಾಮಾಯಣದಂತಹ ಮಹಾಕಾವ್ಯಗಳಲ್ಲಿಯೂ ಹಲವೆಡೆ ಶುಭಶಕುನಗಳ ಬಗ್ಗೆ ಹೇಳಲಾಗಿದೆ. ಶಕುನಗಳು ಪ್ರಕೃತಿಗೆ, ಆಕಾಶಕ್ಕೆ, ಕನಸುಗಳಿಗೆ ಮತ್ತು ದೇಹದ ಭಾಗಗಳಿಗೆ ಸಂಬಂಧಿಸಿವೆ. ಯಾವುದೇ ಕೆಲಸದ ಸಮಯದಲ್ಲಿ ಸಂಭವಿಸುವ ನೈಸರ್ಗಿಕ ಮತ್ತು ಅಸ್ವಾಭಾವಿಕ ಘಟನೆಗಳು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಹೇಳಲು ಸಮರ್ಥವಾಗಿವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಶಕುನಗಳಿಗೆ ವಿಶೇಷವಾದ ಪರಿಗಣನೆಯನ್ನು ನೀಡಲಾಗುತ್ತದೆ. ಪ್ರಶ್ನೆ ಜಾತಕದ ವ್ಯಾಖ್ಯಾನದಲ್ಲಿ ಶಕುನಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರಾಚೀನ ಕಾಲದಿಂದಲೂ, ಶಕುನಗಳ ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ವರ್ಗಾಯಿಸಲಾಗುತ್ತಿದೆ.
ಇದನ್ನೂ ಓದಿ: Astro Tips: ತುಳಸಿಗೆ ಈ ಸಮಯದಲ್ಲಿ ಹಸಿ ಹಾಲನ್ನು ಅರ್ಪಿಸುವುದರಿಂದ ಒಲಿಯುತ್ತದೆ ಅದೃಷ್ಟ
ಈ ಶಕುನಗಳಿದ್ದರೆ ಒಳ್ಳೆಯ ಫಲ ಸಿಗುತ್ತದೆ:
ರಾಮಚರಿತ ಮಾನಸದಲ್ಲಿ, ಭಗವಾನ್ ಶ್ರೀರಾಮನ ಮೆರವಣಿಗೆ ಹೊರಡುವಾಗ, ನೀಲಕಂಠ ಪಕ್ಷಿಯು ಎಡಭಾಗದಲ್ಲಿರುವ ಧಾನ್ಯವನ್ನು ತಿನ್ನುವ ಸುಂದರವಾದ ಶುಭ ಶಕುನಗಳು ಸಂಭವಿಸುತ್ತವೆ ಎಂದು ಬರೆಯಲಾಗಿದೆ. ಈ ಶಕುನವು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ, ನೀಲಕಂಠ ಪಕ್ಷಿಯ ದರ್ಶನವು ನಮ್ಮ ಕಾರ್ಯಗಳು ಪೂರ್ಣಗೊಂಡ ಸಂಕೇತವಾಗಿದೆ.
ಮತ್ತೊಂದೆಡೆ, ಬಲಭಾಗದಲ್ಲಿ ಕಾಗೆ ಕುಳಿತುಕೊಳ್ಳುವುದು, ಮುಂಗುಸಿಯ ದೃಷ್ಟಿ, ಅನುಕೂಲಕರವಾದ ಗಾಳಿ ಬೀಸುವುದು ಇತ್ಯಾದಿಗಳೆಲ್ಲವೂ ಮಂಗಳಕರವೆಂದು ಹೇಳಲಾಗಿದೆ.
ಹಸು ಕರುಗಳಿಗೆ ಹಾಲು ಉಣಿಸುವುದನ್ನು ನೋಡುವುದು ತುಂಬಾ ಶ್ರೇಯಸ್ಕರ. ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಇಬ್ಬರು ಬ್ರಾಹ್ಮಣರು ಎದುರಿಗೆ ಬರುವುದು ಕಂಡರೆ ಕೆಲಸ ನಡೆಯುವುದು ಖಚಿತ ಎಂದು ಹೇಳಲಾಗುತ್ತದೆ.
ಇನ್ನು ಪ್ರಯಾಣಕ್ಕೆ ಹೋಗುವಾಗ, ಕಾಗೆಯು ಹಸುವಿನ ಮೇಲೆ ಕುಳಿತಿದ್ದರೆ, ದನದ ಸಗಣಿಯ ಮೇಲೆ ಅಥವಾ ಮರಗಳ ಮೇಲೆ ಕುಳಿತಿದ್ದರೆ, ಪ್ರಯಾಣಿಕನಿಗೆ ಉತ್ತಮ ದಿನವಾಗಿರುತ್ತದೆ ಎಂದು ಹೇಳಲಾಗುತ್ತದೆ. ಎಲ್ಲಿಗಾದರೂ ಹೋಗುತ್ತಿರುವಾಗ ಕಾಗೆಯು ತನ್ನ ಕೊಕ್ಕಿನಲ್ಲಿ ಒಣಹುಲ್ಲನ್ನು ಹೊತ್ತುಕೊಂಡು ಹೋಗುವುದನ್ನು ಕಂಡರೆ, ಈ ಶಕುನವು ವ್ಯಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಂಬಲಾಗಿದೆ.
ಕೆಲಸಕ್ಕೆ ಹೊರಡುವಾಗ, ಮರದ ಎಲೆಯು ವ್ಯಕ್ತಿಯ ತಲೆಯ ಮೇಲೆ ಬಿದ್ದರೆ, ಆತನ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ನೀವು ಕೆಲಸ ಮಾಡುವ ಸಂದರ್ಭದಲ್ಲಿ ಪೂಜೆಯ ದನಿ ಎಲ್ಲಿಂದಲೋ ಕೇಳಿಸಿಕೊಂಡರೆ, ಆ ಕೆಲಸ ಸಂಪೂರ್ಣವಾಗಿ ನಡೆಯುತ್ತದೆ. ಯಶಸ್ಸು ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಹಸುಗಳು ಒಬ್ಬ ವ್ಯಕ್ತಿಯ ಬಾಗಿಲಿಗೆ ಬಂದು ಕುಳಿತುಕೊಂಡರೆ, ಈ ಶಕುನವು ಪ್ರಗತಿಯ ಸಂಕೇತವಾಗಿರುತ್ತದೆ.
ಬಟ್ಟೆ ಧರಿಸಿ ಹೊರಗೆ ಹೋಗುವಾಗ ಜೇಬಿನಿಂದ ಹಣ ಕೆಳಗೆ ಬಿದ್ದರೆ, ಆ ವ್ಯಕ್ತಿ ಹಣ ಗಳಿಸುತ್ತಾನೆ ಎಂದು ಸೂಚಿಸುತ್ತದೆ.
ದಾರಿಯಲ್ಲಿ ಶವಯಾತ್ರೆ ಕಂಡರೆ ಮೊದಲು ಮೃತ ದೇಹಕ್ಕೆ ನಮಸ್ಕರಿಸಿ ಅಗಲಿದ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ. ಆಮೇಲೆ ನಿಮ್ಮ ಕೆಲಸಕ್ಕೆ ಹೋಗಿ ಆ ದಿನ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ.
ಒಬ್ಬ ವ್ಯಕ್ತಿಯು ಬೆಳಿಗ್ಗೆ ಎಲ್ಲೋ ಹೋಗುತ್ತಿದ್ದರೆ ಮತ್ತು ಹಾರುವ ಕಾಗೆಯು ಪಾದಗಳನ್ನು ಮುಟ್ಟಿದರೆ, ಈ ಶಕುನವು ವ್ಯಕ್ತಿಯ ಜೀವನದಲ್ಲಿ ಎಲ್ಲಾ ಸಂತೋಷವನ್ನು ತುಂಬುತ್ತದೆ. ಅವನು ಜೀವನದಲ್ಲಿ ಪ್ರಗತಿ ಹೊಂದುತ್ತಾನೆ ಮತ್ತು ಶತ್ರುಗಳು ಅವನ ಮುಂದೆ ತಲೆಬಾಗುತ್ತಾರೆ ಎಂಬುದನ್ನು ಸೂಚಿಸುತ್ತದೆ.
ಮನೆಯಿಂದ ಹೊರಡುವಾಗ ಕಾಗೆ ತೀವ್ರವಾಗಿ ಅರಚಿದರೆ ಅದು ಪ್ರಯಾಣಕ್ಕೆ ತೊಂದರೆಯಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಎಲ್ಲೋ ಹೋಗುವಾಗ ಕಪ್ಪು ಬೆಕ್ಕು ಅಡ್ಡ ಬಂದರೆ ಕೆಲಸದ ಯಶಸ್ಸಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆಯಿಂದ ವ್ಯಕ್ತಿಗಳು ಹೊರಡುವಾಗ ಕಾಗೆ ಭುಜಕ್ಕೆ ಹೊಡೆದರೆ ಬಹಳ ಎಚ್ಚರಿಕೆ ವಹಿಸಬೇಕು.
ಆಹಾರ ಸೇವನೆ ಮಾಡುವಾಗ ಕಾಗೆ ಪಕ್ಕದಲ್ಲಿಯೇ ಹಾರಿ ಹೋದರೆ, ಆ ವ್ಯಕ್ತಿಗೆ ಸೋಲು ಕಟ್ಟಿಟ್ಟಬುತ್ತಿ ಎಂದು ಹೇಳಲಾಗುತ್ತದೆ.
ಯಾವುದೇ ವ್ಯಕ್ತಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ನೀವು ಎಲ್ಲಿಗೆ ಹೋಗುತ್ತೀರಿ ಎಂದು ಕೇಳಬೇಡಿ. ಅದು ತುಂಬಾ ಕೆಟ್ಟ ಶಕುನವಾಗಿದೆ.
ಇದನ್ನೂ ಓದಿ: ಬಾಲಕಿಯನ್ನು ಮದುವೆಯಾಗಲು ಆಧಾರ್ ಕಾರ್ಡ್ ತಿದ್ದಿದ ಮದುಮಗ.. ಈಗ ಪೊಲೀಸರ ಅತಿಥಿ
ಕಾಗೆಯು ತಲೆಯ ಮೇಲೆ ಕುಳಿತರೆ ಅದು ತುಂಬಾ ಕೆಟ್ಟದು. ಕಾಗೆಯು ತಲೆಯ ಮೇಲೆ ಕುಳಿತರೆ, ಅದರ ದುಷ್ಪರಿಣಾಮಗಳನ್ನು ಕೊನೆಗೊಳಿಸಲು ಯಾರಾದರೂ ಅಳಬೇಕು ಎಂಬುದು ನಂಬಿಕೆ. ಹೀಗೆ ಮಾಡುವುದರಿಂದ ಕೆಟ್ಟ ಶಕುನದ ಪರಿಣಾಮ ಕೊನೆಗೊಳ್ಳುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.