Cholesterol Lowering Drinks: ಹೈ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಇಲ್ಲಿವೆ 4 ಸೂಪರ್ ಡ್ರಿಂಕ್ಸ್, ಇಂದೇ ಟ್ರೈ ಮಾಡಿ ನೋಡಿ

Drinks To Balance Cholesterol Level: ಋತುಮಾನ ಯಾವುದೆ ಇರಲಿ, ನಾವು ಪ್ರತಿಯೊಂದು ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲೇಬೇಕು. ಇಲ್ಲದೆ ಹೋದರೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. 

Drinks To Balance Cholesterol Level: ಋತುಮಾನ ಯಾವುದೆ ಇರಲಿ, ನಾವು ಪ್ರತಿಯೊಂದು ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲೇಬೇಕು. ಇಲ್ಲದೆ ಹೋದರೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ನಮ್ಮನ್ನು ನಾವು ಹೈಡ್ರೇಟ್ ಆಗಿರಿಸಲು ಆಗಾಗ್ಗ ನಾವು ತಂಪು ಪಾನೀಯಗಳನ್ನು ಸೇವಿಸುತ್ತಲೇ ಇರುತ್ತೇವೆ. ಆದರೆ ಕೆಲ ವಿಶೇಷ ಪಾನೀಯಗಳ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್.ಡಿ.ಎಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-Dragon Fruit: ಡ್ರ್ಯಾಗನ್ ಹಣ್ಣಿನ ಅದ್ಭುತ ಆರೋಗ್ಯಕರ ಪ್ರಯೋಜನಗಳು

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಸಾಮಾನ್ಯವಾಗಿ ಎಣ್ಣೆಯುಕ್ತ ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಸೇವನೆ ಮಾಡಬಾರದು. ಅವುಗಳ ಬದಲಿಗೆ ಫೈಬರ್ ಯುಕ್ತ ಆಹಾರ ಸೇವಿಸಬೇಕು. ಇಂದು ನಾವು ನಿಮಗೆ ಕೆಲ ಸೂಪರ್ ಡ್ರಿಂಕ್ಸ್ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳ ಸೇವನೆಯಿಂದ ನೀವು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

2 /5

ಗ್ರೀನ್ ಟೀ ಕ್ಯಾಟೆಚಿನ್ ಮತ್ತು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಅನ್ನು ಹೊಂದಿರುತ್ತದೆ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ದಿನಕ್ಕೆರಡು ಬಾರಿ ಸೇವಿಸಬೇಕು.ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಯಾಗುತ್ತದೆ.

3 /5

ಬೆಳಗಿನ ಉಪಾಹಾರದಲ್ಲಿ ಓಟ್ಸ್ ಮಿಲ್ಕ್ ಅನ್ನು ಸೇವಿಸಿ, ಇದು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬೀಟಾ-ಗ್ಲುಕನ್ ಅಂಶವು ಪಿತ್ತರಸದ ಉಪ್ಪಿನೊಂದಿಗೆ ಸೇರಿಕೊಂಡು ಕರುಳಿನಲ್ಲಿ ಜೆಲ್ ತರಹದ ಪದರವನ್ನು ರೂಪಿಸುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

4 /5

ಬೇಸಿಗೆಯಲ್ಲಿ ಟೊಮ್ಯಾಟೊ ತಿನ್ನುವುದು ಒಳ್ಳೆಯದು, ಏಕೆಂದರೆ ಅದರಲ್ಲಿ ನೀರಿನ ಅಂಶವು ಹೆಚ್ಚಾಗಿರುತ್ತದೆ. ಇದು ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕದ ಸಮೃದ್ಧ ಮೂಲವಾಗಿದೆ, ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಇದರಲ್ಲಿರುವ ಫೈಬರ್ ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ನಿಯಮಿತವಾಗಿ ಟೊಮೆಟೊ ರಸವನ್ನು ಕುಡಿಯಿರಿ.

5 /5

ಸೋಯಾ ಮಿಲ್ಕ್ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ. ಏಕೆಂದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ದೈನಂದಿನ ಆಹಾರದಲ್ಲಿ ಶಾಮೀಲುಗೊಳಿಸಿದರೆ ಉತ್ತಮ.