Vastu Tip For Bedroom Plants: ಪತಿ ಮತ್ತು ಹೆಂಡತಿಯ ನಡುವಿನ ಸಂಬಂಧವು ಸೂಕ್ಷ್ಮವಾದ ದಾರದಂತೆ. ಪ್ರತಿಯೊಬ್ಬರೂ ಸಹ ವೈವಾಹಿಕ ಜೀವನದಲ್ಲಿ ಒಬ್ಬರನ್ನೊಬ್ಬರು ಪ್ರೀತಿಯಿಂದ ನೋಡಿಕೊಳ್ಳಬೇಕು. ಆದರೆ ಹಲವು ಬಾರಿ ಅನೇಕರ ಜೀವನ ಸೂತ್ರ ಹರಿದ ಗಾಳಿಪಟದಂತಾಗುತ್ತದೆ. ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದು ಇದಕ್ಕೆ ಒಂದು ಕಾರಣ. ವಾಸ್ತು ಶಾಸ್ತ್ರದ ಪ್ರಕಾರ ಇದರ ಹಿಂದೆ ಹಲವು ಮುಖ್ಯ ಕಾರಣಗಳಿರುತ್ತವೆ. ಮನೆಯ ಬೆಡ್ ರೂಮಿನಲ್ಲಿ ಇಡುವ ಗಿಡವು ಸಹ ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ವಾಸ್ತುಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಮುಳ್ಳಿನ ಗಿಡವನ್ನು ಅಂದರೆ ಕಳ್ಳಿ ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ವೈವಾಹಿಕ ಜೀವನದಲ್ಲಿ ಸಿಹಿಯ ಬದಲು ಕಹಿಯನ್ನು ತರುತ್ತದೆ. ಇದರ ಮುಳ್ಳಿನ ಎಲೆಗಳು ನಿಮ್ಮ ವೈವಾಹಿಕ ಜೀವನಕ್ಕೆ ಕಂಟಕವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ಕಳ್ಳಿ ಗಿಡವನ್ನು ಮಲಗುವ ಕೋಣೆಯಲ್ಲಿ ಇಡುವ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ.


ಇದನ್ನೂ ಓದಿ: ದಿನನಿತ್ಯ ಬಳಕೆಯ ಸಾಸಿವೆಯಿಂದಾಗುವ ಪ್ರಯೋಜನಗಳೇನು ಗೊತ್ತಾ ?!! ತಿಳಿಯಿರಿ


ಕ್ಯಾಕ್ಟಸ್ ಸಸ್ಯದಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ!


ಕ್ಯಾಕ್ಟಸ್ ಸಸ್ಯವು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಆಹ್ವಾನಿಸುತ್ತದೆ. ಇದು ಕುಟುಂಬ ಸದಸ್ಯರ ನಡುವೆ ವಿವಾದಗಳು, ಉದ್ವಿಗ್ನತೆ ಮತ್ತು ಜಗಳಗಳನ್ನು ಸೃಷ್ಟಿಸುತ್ತದೆ. ಇದರಿಂದ ಇಡೀ ಮನೆಯ ನೆಮ್ಮದಿ ಕೆಡುತ್ತದೆ. ಅಷ್ಟೇ ಅಲ್ಲ ಈ ಒಂದು ಸಸ್ಯವು ಮನೆಯ ಇಡೀ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಎಂದು ಹೇಳಲಾಗಿದೆ.


ಮಲಗುವ ಕೋಣೆಯಲ್ಲಿ ಕಳ್ಳಿ ಗಿಡ ನೆಡಬೇಕೋ ಬೇಡವೋ?


ವಾಸ್ತು ಶಾಸ್ತ್ರದ ಪ್ರಕಾರ, ಮಾಸ್ಟರ್ ಬೆಡ್ ರೂಂನ ಸರಿಯಾದ ದಿಕ್ಕು ನೈಋತ್ಯವಾಗಿರಬೇಕು. ಈ ದಿಕ್ಕಿನಲ್ಲಿ ಭೂಮಿಯ ಅಂಶದ ಪ್ರಭಾವವಿದೆ. ಆದ್ದರಿಂದ ಕಳ್ಳಿ ಗಿಡವನ್ನು ನೆಡುವುದರಿಂದ ಗಾಳಿಯ ಅಂಶದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. 


ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮೂಡಿದ್ರೆ ಏನಾಗುತ್ತೆ!! ಶುಭನಾ? ಅಶುಭನಾ?


ಮಲಗುವ ಕೋಣೆಯಲ್ಲಿ ಯಾವುದೇ ರೀತಿಯ ಸಸ್ಯವನ್ನು ಇಡುವುದು ಅಪಾಯವೆಂದು ಹೇಳಲಾಗಿದೆ. ಇದರಲ್ಲೂ ಮುಳ್ಳಿನ ಗಿಡಗಳನ್ನು ಮಲಗುವ ಕೋಣೆಯಲ್ಲಿ ಎಂದಿಗೂ ನೆಡಬಾರದು. ನೀವು ಅವುಗಳನ್ನು ಇಡಲು ಬಯಸಿದರೆ, ಮನೆಯ ತೆರೆದ ಟೆರೇಸ್ನಲ್ಲಿ ಅಥವಾ ಉದ್ಯಾನದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಋಣಾತ್ಮಕ ಶಕ್ತಿ ಎಂದಿಗೂ ಪ್ರಭಾವಿತವಾಗುವುದಿಲ್ಲ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.