ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ತನ್ನದೇ ಆದ ನಿಗದಿತ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ. ಇದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದಲ್ಲಿ ಕಾಣಿಸಿಕೊಳ್ಳುತ್ತದೆ. ಗ್ರಹಗಳ ಸಂಚಾರದಿಂದಾಗಿ  ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಪರಿಣಾಮಗಳು ಗೋಚರಿಸುತ್ತವೆ. ಇದೀಗ ಮೇ ತಿಂಗಳು ಆರಂಭವಾಗಿದೆ. ಮೇ 2 ರಂದು, ಶುಕ್ರನು ಮಿಥುನದಲ್ಲಿ ಸಂಕ್ರಮಿಸುತ್ತಾನೆ. ಈ ಮೂಲಕ ಮಿಥುನ ರಾಶಿಯಲ್ಲಿ ಬುಧ ಮತ್ತು ಶುಕ್ರರ ಮೈತ್ರಿ ನಡೆಯಲಿದೆ. 


COMMERCIAL BREAK
SCROLL TO CONTINUE READING

ಮಿಥುನ ರಾಶಿಯಲ್ಲಿ ಬುಧ ಮತ್ತು ಶುಕ್ರ ಇರುವುದರಿಂದ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದಲ್ಲಿ, ಈ ಯೋಗವನ್ನು ಬಹಳ ಮಂಗಳಕರವೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಕೆಲವು ರಾಶಿಯವರು ವಿಶೇಷ ಪ್ರಯೋಜನಗಳನ್ನು  ಪಡೆಯುತ್ತಾರೆ. ಹಾಗಿದ್ದರೆ ಬುಧ ಶುಕ್ರರ ಸಂಯೋಗದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ನೋಡೋಣ.  


ಇದನ್ನೂ ಓದಿ : Shukra Gochar 2023: ಶುಕ್ರದೆಸೆಯಿಂದ ಈ ಜನರಿಗೆ ಹೆಜ್ಜೆ ಹೆಜ್ಜೆಗೂ ಜಯ.. ಒಲಿದು ಬರುವುದು ಅಪಾರ ಧನ ಸಂಪತ್ತು!


ಈ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗದಿಂದ ಲಾಭ :
ವೃಷಭ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಮತ್ತು ಬುಧ ಸಂಯೋಗವು ವೃಷಭ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ರಾಶಿಯವರ ಜಾತಕದ ಮೇಲೆ ಲಕ್ಷ್ಮೀನಾರಾಯಣ ಯೋಗವು ಬಹಳ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ. ಈ ಅವಧಿಯಲ್ಲಿ  ವೃತ್ತಿಜೀವನದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಸಿಗುವುದು.  ಪಾಲುದಾರಿಕೆಯಲ್ಲಿ ಕೆಲಸ ಮಾಡುವುದರಿಂದ ಯಶಸ್ಸು ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು. ಮಾಡುವ ಕೆಲಸದಲ್ಲಿ ಮೇಲಾಧಿಕಾರಿಯ ನೆರವು ಸಿಗುವುದು. 


ಮಿಥುನ ರಾಶಿ :
ಲಕ್ಷ್ಮೀನಾರಾಯಣ ಯೋಗವು ಮಿಥುನ ರಾಶಿಯವರ ವೃತ್ತಿಜೀವನದಲ್ಲಿ ಭಾಗ್ಯದ ಬಾಗಿಲು ತೆರೆಯಲಿದೆ.  ಆದಾಯದ ಹೊಸ ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಈ ಸಮಯದಲ್ಲಿ, ಪ್ರೇಮ ಸಂಬಂಧದಲ್ಲಿ ಸುಧಾರಣೆ ಕಂಡು ಬರುವುದು. ವೈಯಕ್ತಿಕ ಜೀವನದಲ್ಲಿ ಸಂತೋಷ ಉಳಿಯುತ್ತದೆ. ಪ್ರೇಮ-ಜೀವನದಲ್ಲಿ ಉತ್ಸಾಹ ಇರುತ್ತದೆ. ಇದರೊಂದಿಗೆ ಈ ಸಮಯವು ವಿದ್ಯಾರ್ಥಿಗಳಿಗೂ ಉತ್ತಮವಾಗಿರುತ್ತದೆ. 


ಇದನ್ನೂ ಓದಿ :Lunar Eclipse 2023: ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ


ಕನ್ಯಾರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮೀನಾರಾಯಣ ಯೋಗವು ಕನ್ಯಾ ರಾಶಿಯವರ ಜೀವನದಲ್ಲಿ ಸಂತೋಷದ ಹೊನಲನ್ನು ಹೆಚ್ಚಿಸಲಿದೆ.  ಈ ಅವಧಿಯಲ್ಲಿ ವಾಹನ ಅಥವಾ ಯಾವುದೇ ಆಸ್ತಿ ಖರೀದಿಸುವ ಸಾಧ್ಯತೆ ಹೆಚ್ಚು ಇರಲಿದೆ. ನಿಮ್ಮ ಮನದ ಎಲ್ಲಾ ರೀತಿಯ ಆಸೆ ಆಕಾಂಕ್ಷೆಗಳು ಈಡೇರುವುದು. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಾಗುವುದು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.