Shukra Mahadasha Effect: ನವ ಗ್ರಹಗಳಲ್ಲಿ ಒಂದು ಸಣ್ಣ ಬದಲಾವನೆಯೂ ಸಹ ಪ್ರತಿ ವ್ಯಕ್ತಿಯ ಜೀವನದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಅದರಂತೆ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಯಾವುದೇ ಗ್ರಹದ ದಶಾ ಸ್ಥಿತಿಯೂ ಬಹಳ ನಿರ್ಣಾಯಕವಾಗಿರುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಸುಖ-ಸಂಪತ್ತು, ಐಶ್ವರ್ಯ, ಪ್ರೀತಿ-ಪ್ರೇಮದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರನು ಜಾತಕದಲ್ಲಿ ಉತ್ಕೃಷ್ಟ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಗೆ ಜೀವನದಲ್ಲಿ ಯಾವುದೇ ರೀತಿಯಲ್ಲಿ ಸಂಪತ್ತಿಗೆ ಕೊರೆತೆಯೇ ಇರುವಿದಿಲ್ಲ ಎಂದು ಹೇಳಲಾಗುತ್ತದೆ. ಅದರಂತೆ, ಶುಕ್ರ ಮಹಾದಶಾ ಇರುವವರಿಗೆ ಅಪಾರ ಸಂಪತ್ತು, ಸಮಾಜದಲ್ಲಿ ಕೀರ್ತಿ, ಗೌರವ ಎಲ್ಲವೂ ಪ್ರಾಪ್ತಿಯಾಗಲಿದೆ. ಅವರ ಪ್ರೇಮ ಜೀವನ, ಕೌಟುಂಬಿಕ ಜೀವನವೂ ಸುಖಮಯವಾಗಿರಲಿದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರ ಮಹಾದಶಾ ಎಂದರೇನು? ಅದರ ಪರಿಣಾಮ ಮತ್ತು ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಯೋಣ...
ಏನಿದು ಶುಕ್ರ ಮಹಾದಶಾ?
ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರ ಮಹಾದಶಾವು ದಶಾ ಚಕ್ರದಲ್ಲಿ ಇತರ ಗ್ರಹಗಳಿಗೆ ಹೋಲಿಸಿದರೆ ಬಹಳ ದೀರ್ಘ ಸಮಯದವರೆಗೆ ಇರುವ ದಶಾ ಆಗಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಮಹಾದಶಾವು ಸುಮಾರು ಎರಡು ದಶಕಗಳ ಕಾಲ ಎಂದರೆ 20 ವರ್ಷಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ವರ್ಷದ ಬಳಿಕ ವೃಷಭ ರಾಶಿಗೆ ಸೂರ್ಯನ ಪ್ರವೇಶ: ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ
ಶುಕ್ರ ಮಹಾದಶಾ ಪರಿಣಾಮ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಮಹಾದಶಾ ಪ್ರಭಾವವಿದ್ದಾಗ ಆತ ರಾಜನಂತೆ ಜೀವನ ನಡೆಸುತ್ತಾನೆ ಎಂದು ಹೇಳಲಾಗುತ್ತದೆ. ಅಂತಹವರಿಗೆ ಜೀವನದಲ್ಲಿ ಹಣಕ್ಕೆ ಕೊರತೆಯೇ ಇರುವುದಿಲ್ಲ. ಅವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ. ಮಾತ್ರವಲ್ಲ, ಸುಖ-ಸಂತೋಷದ ಐಷಾರಾಮಿ ಜೀವನವನ್ನು ಅವರು ಆನಂದಿಸುತ್ತಾರೆ ಎಂದು ನಂಬಲಾಗಿದೆ.
ಇದಕ್ಕೆ ವಿರುದ್ಧವಾಗಿ ಜಾತಕದಲ್ಲಿ ಶುಕ್ರನ ಅಶುಭ ಸ್ಥಾನವು, ವ್ಯಕ್ತಿಯನ್ನು ನಾನಾ ರೀತಿಯ ಕಷ್ಟ ಕಾರ್ಪಣ್ಯಗಳಲ್ಲಿ ಮುಳುಗುವಂತೆ ಮಾಡುತ್ತದೆ. ಶುಕ್ರ ಮಹಾದಶಾ ಅಶುಭ ಸ್ಥಾನದಲ್ಲಿದ್ದಾಗ ಅಂತಹವರು ಸುದೀರ್ಘ 20 ವರ್ಷಗಳವರೆಗೆ ಬಡತನದ ಬೇಗೆಯಲ್ಲಿ ಬಳಲುವಂತೆ ಆಗುತ್ತದೆ. ಜೀವನದ ಪ್ರತಿ ಹಂತದಲ್ಲೂ ಸಹ ಕಷ್ಟ, ನೋವು ಎಂಬುದು ಅವರನ್ನು ಬೆಂಬಿಡದೆ ಕಾಡುತ್ತದೆ ಎಂದು ಹೇಳಲಾಗುತ್ತದೆ.
ಶುಕ್ರ ಮಹಾದಶಾ ಅಶುಭ ಪರಿಣಾಮಗಳನ್ನು ತಪ್ಪಿಸಲು ಪರಿಹಾರಗಳು:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಸಮಸ್ಯೆಗೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಜಾತಕದಲ್ಲಿ ಶುಕ್ರನು ನೀಚ ಸ್ಥಾನದಲ್ಲಿದ್ದರೆ ಆಗ ವ್ಯಕ್ತಿಯು ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇದನ್ನು ಶುಕ್ರ ದೋಷ ಎಂತಲೂ ಬಣ್ಣಿಸಲಾಗುತ್ತದೆ. ಅದೇ ರೀತಿ ಶುಕ್ರ ಮಹಾದಶಾ ಅಶುಭ ಪರಿಣಾಮಗಳನ್ನು ತಪ್ಪಿಸಲು ಸಹ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ. ನಿಮ್ಮ ಜಾತಕ ಅಥವಾ ಕುಂಡಲಿಯಲ್ಲಿ ಶುಕ್ರ ಮಹಾದಶಾ ಅಶುಭ ಪರಿಣಾಮಗಳನ್ನು ತಪ್ಪಿಸಲು ಕೆಳಗೆ ಸೂಚಿಸಲಾದ ಕ್ರಮಗಳನ್ನು ಕೈಗೊಳ್ಳಿ...
* ಶುಕ್ರ ದೋಷಕ್ಕೆ ಪರಿಹಾರ:
ಜಾತಕದಲ್ಲಿ ಶುಕ್ರ ದೋಷದಿಂದ ಪರಿಹಾರ ಪಡೆಯಲು ಪ್ರತಿ ಶುಕ್ರವಾರ 108 ಬಾರಿ ಶುಕ್ರ ಮಂತ್ರವನ್ನು ಪಠಿಸುವುದು ಅತ್ಯುತ್ತಮ ಮಾರ್ಗವಾಗಿದೆ.
* ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು:
ಒಂದೊಮ್ಮೆ ನೀವು ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಪ್ರತಿ ಶುಕ್ರವಾರ ಹಿಟ್ಟಿನ ಜೊತೆಗೆ ಸಕ್ಕರೆಯನ್ನು ಬೇರೆ3ಸಿ ಅದನ್ನು ಇರುವೆ ಗೂಡಿಗೆ ಹಾಕಿರಿ. ಇದರಿಂದ ಆರ್ಥಿಕ ಸಮಸ್ಯೆಗಳಿಂದ ನಿಧಾನವಾಗಿ ಹೊರಬರಬಹುದು.
ಇದನ್ನೂ ಓದಿ- ಈ ರಾಶಿಯವರ ಮೇಲೆ ಶನಿ ಕೃಪೆ! ಇನ್ನು 30 ತಿಂಗಳು ಇವರ ಬದುಕು ಬಂಗಾರ
* ಜೀವನದಲ್ಲಿ ಸುಖ-ಸಂತೋಷ ಪ್ರಾಪ್ತಿಗಾಗಿ ಪರಿಹಾರ:
ನಿಮ್ಮ ಜೀವನದಲ್ಲಿ ಕೌಟುಂಬಿಕ ಸುಖ-ಸಂತೋಷದಲ್ಲಿ ಕೊರತೆ ಇದ್ದರೆ ಪ್ರತಿ ಶುಕ್ರವಾರದಂದು ತಾಯಿ ಮಹಾಲಕ್ಷ್ಮಿಯ ಹೆಸರಿನಲ್ಲಿ ಉಪವಾಸ ವ್ರತವನ್ನು ಆಚರಿಸಿ. ಲಕ್ಷ್ಮಿ ದೇವಿಗೆ ಪೂಜೆ ಬಳಿಕ ಹಾಲಿನ ಖೀರ್ ನೆವೇದ್ಯ ಮಾಡಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆ ಆಗಿ. ಸಕಾರಾತ್ಮಕತೆ ತುಂಬುತ್ತದೆ. ಅಂತಹ ಮನೆಯಲ್ಲಿ ಎಂದೂ ಸಹ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.