ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಚಿನ್ನ ಅಥವಾ ವಜ್ರದ ಉಂಗುರವನ್ನು ಧರಿಸಲು ಇಷ್ಟಪಡುತ್ತಾರೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಎಲ್ಲರೂ ವಜ್ರ ಧರಿಸುವಂತಿಲ್ಲ, ಚಿನ್ನ ಹಾಕುವಂತಿಲ್ಲ. ಯಾಕೆಂದರೆ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಲೋಹಕ್ಕೂ ಅದರದ್ದೇ ಆದ ಮಹತ್ವವಿದೆ. ಲೋಹಗಳ ಮಹತ್ವ, ಮತ್ತು ವಿಶೇಷತೆಯನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ರಾಶಿಗನುಗುಣವಾಗಿ ಯಾರು ಯಾವ ಲೋಹವನ್ನು ಧರಿಸಬೇಕು ಎನ್ನುವುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಅದು ಅವರಿಗೆ ಹೆಚ್ಚು ಅದೃಷ್ಟವನ್ನು ತರುತ್ತದೆ. 


COMMERCIAL BREAK
SCROLL TO CONTINUE READING

ಪ್ರತಿಯೊಂದು ಲೋಹವು ವ್ಯಕ್ತಿಯ ಜೀವನದಲ್ಲಿ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ಧರಿಸುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಧನಲಾಭ ಮತ್ತು ವೃತ್ತಿ ಪ್ರಗತಿಯನ್ನು ಕೂಡಾ ಸಾಧಿಸಬಹುದು ಎಂದು ಹೇಳಲಾಗುತ್ತದೆ.


ಈ ರಾಶಿಯವರ ಅದೃಷ್ಟ ಹೆಚ್ಚಿಸುತ್ತದೆ ಚಿನ್ನದ ಉಂಗುರ :  
ಸಿಂಹ ರಾಶಿ :  ಸಿಂಹ ರಾಶಿಯವರಿಗೆ ಚಿನ್ನದ ಉಂಗುರ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಿಂಹ ರಾಶಿಯು ಬೆಂಕಿಯ ಅಂಶದ ಸಂಕೇತವಾಗಿದೆ. ಈ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ, ಸಿಂಹ ರಾಶಿಯವರು ಚಿನ್ನದ ಉಂಗುರವನ್ನು ಧರಿಸುವುದು ಮಂಗಳಕರ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : ಮುಂದಿನ 21 ದಿನ ಈ ರಾಶಿಯವರಿಗೆ ಹಣದ ಮಳೆ, ಕುಬೇರನ ನಿಧಿ ಕೈಯಲ್ಲಿರುತ್ತದೆ.. ಜೇಬು ತುಂಬ ಕಾಂಚಾಣ!


ಕನ್ಯಾ ರಾಶಿ : ಈ ರಾಶಿಯ ಜನರು ಸುಖ ಸಮೃದ್ದಿಯ ಜೀವನವನ್ನು ಇಷ್ಟ ಪಡುತ್ತಾರೆ. ಕನ್ಯಾ ರಾಶಿಯ ಜನರು ಚಿನ್ನದ ಉಂಗುರ, ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆ ಅದು ಅವರಿಗೆ ಶುಭ ಫಲವನ್ನೇ ನೀಡುತ್ತದೆ.  


ತುಲಾ ರಾಶಿ : ತುಲಾ ರಾಶಿಯ ಜನರಿಗೂ ಚಿನ್ನವನ್ನು ಮಂಗಳಕರವೆಂದು ಹೇಳಲಾಗುತ್ತದೆ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನದ ಉಂಗುರವು ತುಲಾ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ. ಈ ರಾಶಿಯ ಅಧಿಪತಿ ಶುಕ್ರ ದೇವ. ಚಿನ್ನ ಶುಕ್ರನಿಗೆ ಲಾಭದಾಯಕ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : ನವೆಂಬರ್ ನಿಂದ ಈ ರಾಶಿಯವರ ಸುವರ್ಣ ದಿನ ಆರಂಭ! ಶಶ ಮಹಾಪುರುಷ ರಾಜಯೋಗದಿಂದ ಹೆಜ್ಜೆ ಹೆಜ್ಜೆಗೂ ಜಯ!


ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೆ  ಅತ್ಯಂತ ಶುಭ. ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.