ಬೆಂಗಳೂರು : ಸುಮಾರು 30 ವರ್ಷಗಳ ನಂತರ ಶನಿಯು ಕುಂಭ ರಾಶಿಗೆ ಮರಳಿದ್ದಾನೆ. ಈ ಅವಧಿಯಲ್ಲಿ, ಶನಿಯು ಕುಂಭ, ಮಕರ, ಮೀನ ಮತ್ತು ಕರ್ಕ ಮತ್ತು ವೃಶ್ಚಿಕ ರಾಶಿಯವರ ಮೇಲೆ ಏಳೂವರೆ ಮತ್ತು ಎರಡೂವರೆ ವರ್ಷಗಳ ದೆಸೆ ಬೀರುತ್ತಾನೆ. ಈ ಮಧ್ಯೆ, ಶನಿಯು ಕಳೆದ ಜೂನ್ 17 ರಿಂದ ವಕ್ರವಾಗಿ ಅಂದರೆ ಹಿಮ್ಮುಖವಾಗಿ ಚಲಿಸಲು ಆರಂಭಿಸಿದ್ದಾನೆ.  ಹೀಗೆ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ ನವೆಂಬರ್ 4, 2023 ರಂದು ಮತ್ತೆ ನೇರ ಚಲನೆಗೆ ಮರಳುತ್ತಾನೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶನಿಯ ಈ ಹಿಮ್ಮುಖ ಚಲನೆಯು ಕುಂಭ ರಾಶಿಯಲ್ಲಿ ಸುಮಾರು 139 ದಿನಗಳವರೆಗೆ ಇರುತ್ತದೆ. ಶನಿಯ ವಕ್ರ ನಡೆ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಕೆಲವು ರಾಶಿಯವರಿಗೆ ವರದಾನವಾಗಿರಲಿದೆ. 


COMMERCIAL BREAK
SCROLL TO CONTINUE READING

ಸದ್ಯ ಕುಂಭ ರಾಶಿಯಲ್ಲಿರುವ ಶನಿ ಮಹಾತ್ಮನ ವಕ್ರ ನಡೆಯಿಂದ ಯಾರಿಗೆ ಲಾಭ ? : 
ವೃಷಭ ರಾಶಿ : ಶನಿಯ ಪ್ರಸ್ತುತ ಸಂಚಾರ ವೃಷಭ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ಅವಧಿಯಲ್ಲಿ, ನಿಮ್ಮ ಆಸೆಗಳು ಈಡೇರುತ್ತವೆ. ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಪ್ರಗತಿಯಾಗುವುದು.  ವ್ಯಾಪಾರ ವ್ಯವಹಾರ ವಿಸ್ತರಣೆಯಾಗುವುದು. ಆರೋಗ್ಯ ಸ್ಥಿತಿ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಸಿಗುತ್ತದೆ. 


ಇದನ್ನೂ ಓದಿ : ಅಕ್ಟೋಬರ್ 17ರವರೆಗೆ ಈ 3 ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾರೆ ರಾಹು-ಶನಿ


ಸಿಂಹ ರಾಶಿ : ಸಿಂಹ ರಾಶಿಯವರಿಗೆ ಶನಿಯ ಸಂಚಾರದಿಂದ ಲಾಭವಾಗಲಿದೆ. ಭೌತಿಕ ಸೌಕರ್ಯಗಳು ಮತ್ತು ಸಂಪನ್ಮೂಲಗಳು ಹೆಚ್ಚಾಗುತ್ತವೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ನಿವಾರಣೆಯಾಗುವುದು. ಶನಿಯ ಪ್ರಭಾವವು ಕಾನೂನು ವಿಷಯಗಳಲ್ಲಿ ಲಾಭವನ್ನು ತರುತ್ತದೆ. ಹಣವನ್ನು ಗಳಿಸಲು  ಅನೇಕ ಉತ್ತಮ ಅವಕಾಶಗಳು ಒದಗಿ ಬರುವುದು. ಹೊಸ ಉತ್ತಮ ವ್ಯವಹಾರಗಳನ್ನು  ಆರಂಭಿಸಬಹುದು. ಅದರಲ್ಲಿ ಯಶಸ್ಸು ಕೂಡಾ ಪಡೆಯಬಹುದು. 


ಕುಂಭ ರಾಶಿ :  ಕುಂಭ ರಾಶಿಯಲ್ಲಿ ಶನಿಯ ಸಂಚಾರದಿಂದ ಕುಂಭ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ಶನಿಯು ಈ ರಾಶಿಯಲ್ಲಿ  ಶಶರಾಜ ಯೋಗವನ್ನು ಸೃಷ್ಟಿಸುತ್ತಾನೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ವ್ಯಾಪಾರ ಮತ್ತು ಜಂಟಿ ಉದ್ಯಮಗಳಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುತ್ತವೆ. ಈ ಅವಧಿಯಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಆಹ್ಲಾದಕರ ಫಲಿತಾಂಶ ಸಿಗುವುದು. ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ವಾತಾವರಣ ನಿರ್ಮಾಣವಾಗುವುದು. ಕೆಲಸದಲ್ಲಿ ಮತ್ತು ಕುಟುಂಬದಲ್ಲಿ ಮನಸ್ಸಿಗೆ ಸಂತೋಷವನ್ನು ತರುವ ಘಟನೆಗಳು ಸಂಭವಿಸುತ್ತವೆ.


ಇದನ್ನೂ ಓದಿ : ಶ್ರಾವಣ ಮಾಸದಲ್ಲಿ ಶನಿ ಕೃಪೆಯಿಂದಾಗಿ ಈ 5 ರಾಶಿಯವರ ಬಾಳೇ ಬಂಗಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ