ಶ್ರಾವಣ ಮಾಸದಲ್ಲಿ ಶನಿ ಕೃಪೆಯಿಂದಾಗಿ ಈ 5 ರಾಶಿಯವರ ಬಾಳೇ ಬಂಗಾರ

Shani Deva: ಮೊನ್ನೆ ಮೊನ್ನೆಯಷ್ಟೇ ಅಮಾವಾಸ್ಯೆ ಕಳೆದಿದೆ. ಅಮಾವಾಸ್ಯೆ ಕಳೆದ ಬಳಿಕ ನಿನ್ನೆಯಿಂದ (ಆಗಸ್ಟ್ 17) ಕೆಲವು ರಾಶಿಯವರ ಜೀವನದಲ್ಲಿ ಬೆಳಕು ಚೆಲ್ಲಿದ್ದಾನೆ ಶನಿ ಮಹಾತ್ಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ಐದು ರಾಶಿಯವರ ಮೇಲೆ ಶನಿ ದೇವನ ಕೃಪಾಕಟಾಕ್ಷ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ನ್ಯಾಯದ ದೇವರು ಶನಿ ದೇವನು ಕೆಲವು ರಾಶಿಯವರ ಜೀವನದಲ್ಲಿ ಬೆಳಕು ಚೆಲ್ಲಲಿದ್ದಾನೆ. ಶನಿ ಕೃಪೆಯಿಂದಾಗಿ ಅವರು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಜಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ಐದು ರಾಶಿಗಳು ಯಾವುವು ಎಂದು ತಿಳಿಯೋಣ... 

2 /6

ಪ್ರಸ್ತುತ ಮೇಷ ರಾಶಿಯವರಿಗೆ ಶನಿ ಶುಭ ಸ್ಥಾನದಲ್ಲಿ. ಆದರೂ, ಯಾವುದೇ ಕೆಲಸದಲ್ಲಿ ಜಯ ಸಾಧಿಸಲು ಪ್ರಯತ್ನ ಎಂಬುದು ಬಹಳ ಮುಖ್ಯ. ನೀವು ನಿಮ್ಮ ದಿನಚರಿಯನ್ನು ಯೋಜಿಸಿ ಅದರಂತೆ ಕಾರ್ಯಗತಗೊಳಿಸುವುದರಿಂದ ಖಂಡಿತ ಕೆಲಸಗಳಲ್ಲಿ ಯಶಸ್ಸನ್ನು ಕಾಣಬಹುದು. ಭೂಮಿ ಖರೀದಿ, ಮಾರಾಟಕ್ಕೆ ಯೋಚಿಸುತ್ತಿದ್ದರೆ ಇದು ಉತ್ತಮ ಸಮಯವಾಗಿದೆ. 

3 /6

ಸಿಂಹ ರಾಶಿಯವರಿಗೆ ಮನೆಯಲ್ಲಿ ಹಿರಿಯರ ಕಿರಿಕಿರಿ ಅಪಶ್ರುತಿಯಿಂದಾಗಿ ನಿಮ್ಮ ಕೆಲಸಗಳಲ್ಲಿ ಏಕಾಗ್ರತೆ ವಹಿಸಲು ತೊಂದರೆ ಉಂಟಾಗಬಹುದು. ಇನ್ನೂ ಕೆಲವು ಬಾರಿ ನಿಮ್ಮ ಅಹಂ ಭಾವದಿಂದಾಗಿ ನೀವು ಮನೆಯವರಿಂದ ವಿಷಯಗಳನ್ನು ಮುಚ್ಚಿಡುತ್ತೀರಿ. ಇದು ನಿಮ್ಮ ಮನಃಶಾಂತಿಗೆ ಭಂಗ ತರಬಹುದು. ಇದನ್ನು ತಪ್ಪಿಸಲು ಸೂಕ್ತ ಸಮಯ ನೋಡಿ ನಿಮ್ಮ ಮನಸ್ಸಿನ ಮಾತುಗಳನ್ನು ಮನೆಯ ಹಿರಿಯರ ಬಳಿ ಹಂಚಿಕೊಳ್ಳಿ. ನಿಮ್ಮ ಸಮಯವನ್ನು ವಿಶೇಷವಾಗಿಸಲು ದಯೆ, ಪ್ರೀತಿಯಿಂದ ವರ್ತಿಸಿ. ಕೆಲಸದಲ್ಲಿ ಶ್ರದ್ದೆ, ಉತ್ಸಾಹವು ನಿಮ್ಮನ್ನು ಅನುಕೂಲಕರ ದಿನದತ್ತ ಕೊಂಡೊಯ್ಯುತ್ತದೆ. 

4 /6

ಇಷ್ಟು ದಿನಗಳ ಕಾಲ ನಾನಾ ರೀತಿಯ ಕಷ್ಟಗಳಿಂದ ಬೆಂದು ಬಸವಳಿದಿರುವ ನಿಮಗೆ ಶನಿ ಕೃಪೆಯಿಂದಾಗಿ ನಿಮ್ಮ ಬಹುದಿನಗಳ ಕನಸು ನನಸಾಗುವ ಸಮಯ. ಆರ್ಥಿಕ ಹರಿವು ಹೆಚ್ಚಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ಕಾಣಬಹುದು. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ನಿಮಗೆ ಅನುವು ಮಾಡಿಕೊಡುತ್ತದೆ. 

5 /6

ಶನಿ ದೇವನ ಕೃಪೆಯಿಂದಾಗಿ ನೀವು ಸ್ವಲ್ಪ ಪ್ರಯತ್ನ ಪಟ್ಟರೂ ಕೂಡ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಗಳಿಸುವಿರಿ. ನೀವು ಹಿಂದೆ ಮಾಡಿರುವ ಹೂಡಿಕೆಗಳಿಂದ ಈಗ ಲಾಭವನ್ನು ನಿರೀಸ್ಖಿಸಬಹುದು. ಆದಾಗ್ಯೂ, ನಿಮ್ಮ ಗೌಪ್ಯ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ನೂರು ಬಾರಿ ಯೋಚಿಸಿ. 

6 /6

ಶನಿ ಮಹಾತ್ಮನ ಕೃಪೆಯಿಂದ ಮೀನ ರಾಶಿಯವರಿಗೆ ಹೊಸ ಹಣಕಾಸಿನ ಮೂಲಗಳು ಸೃಷ್ಟಿಯಾಗಲಿದ್ದು ಭರ್ಜರಿ ಆರ್ಥಿಕ ಲಾಭವನ್ನು ಕಾಣಬಹುದು. ಆದಾಗ್ಯೂ, ಪ್ರೀತಿಯಲ್ಲಿ ನಿಮ್ಮ ನಿಷ್ಟೂರವಾದ ವರ್ತನೆಯು ನಿಮ್ಮನ್ನು ನಿಮ್ಮ ಪ್ರೀತಿಪಾತ್ರರಿಂದ ದೂರ ಮಾಡುವ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಇರಿ. ಕೆಲಸದ ವಿಚಾರದಲ್ಲಿ ಸಮಯ ಚೆನ್ನಾಗಿದ್ದು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಕೆಲಸಗಳು ಪೂರ್ಣಗೊಳ್ಳುವುದರಿಂದ ಮೇಲಾಧಿಕಾರಿಗಳಿಂದ ಮನ್ನಣೆ ಪಡೆಯುವಿರಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.