Kuber Favourite Zodiac Signs: ಈ ರಾಶಿಗಳ ಜನರ ಮೇಲೆ ಸದಾ ಕುಬೇರನ ಕೃಪೆ ಇರುತ್ತದೆ, ಜೀವನದಲ್ಲಿ ಸಿರಿ-ಸಂಪತ್ತಿನ ಕೊರತೆ ಇರುವುದಿಲ್ಲ!
Favourite Zodias Signs Of Lord Kuber Dev: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳಲ್ಲಿ ಕೆಲ ರಾಶಿಗಳ ಜನರ ಮೇಲೆ ಧನಕುಬೇರ ಸದಾ ತನ್ನ ಕೃಪೆಯನ್ನು ಬೀರುತ್ತಾನೆ ಎನ್ನಲಾಗುತ್ತದೆ.
Favourite Zodiac Signs Of Kuber Dev: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ವರ್ಣನೆ ಇದೆ. ಪ್ರತಿಯೊಂದು ರಾಶಿಯ ಸ್ವಭಾವ ಹಾಗೂ ಗುಣಧರ್ಮ ಭಿನ್ನವಾಗಿರುತ್ತದೆ. ಇದಲ್ಲದೆ ಪ್ರತಿಯೊಂದು ರಾಶಿಗೆ ಯಾವುದಾದರೊಂದು ದೇವ-ದೇವತೆ ಅಧಿಪತಿಯಾಗಿದ್ದಾರೆ. ಕೆಲ ರಾಶಿಗಳ ಜನರ ಮೇಲೆ ಧನ ಕುಬೇರನ ಅಪಾರ ಕೃಪೆ ಇರುತ್ತದೆ ಎನ್ನಲಾಗಿದೆ. ಈ ಜನರ ಜೀವನದಲ್ಲಿ ಅಪಾರ ಅಡೆತಡೆಗಳು ಎದುರಾಗುತ್ತವೆ. ಆದರೆ, ಅವರು ಎಲ್ಲಾ ಅಡೆತಡೆಗಳನ್ನು ಸುಲಭವಾಗಿ ದಾಟುತ್ತಾರೆ. ಇದಲ್ಲದೆ ಅವರ ಜೀವನದಲ್ಲಿ ಧನ-ವೈಭವ, ಸುಖ-ಶಾಂತಿ ಹಾಗೂ ಘನತೆ ಗೌರವ ಯಾವಾಗಲೂ ಇದ್ದೇ ಇರುತ್ತದೆ ಎನ್ನಲಾಗುತ್ತದೆ. ಹಾಗೆ ನೋಡಿದರ ಕುಬೇರನನ್ನು ಕೋಶಾಧ್ಯಕ್ಷ ಹಾಗೂ ಯಕ್ಷಗಳ ರಾಜ ಎಂದು ಕರೆಯಲಾಗುತ್ತದೆ. ಇದೆ ಕಾರಣದಿಂದ ಧನತ್ರಯೋದಶಿಯ ದಿನ ಕುಬೇರ ದೇವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗಾದರೆ ಬನ್ನಿ ಕುಬೇರನ ನೆಚ್ಚಿನ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ವೃಷಭ ರಾಶಿ: ನಿಮ್ಮ ರಾಶಿಗೆ ದೈತ್ಯ ಗುರು ಶುಕ್ರ ಅಧಿಪತಿಯಾಗಿದ್ದಾನೆ. ಶುಕ್ರನನ್ನು ಆಕರ್ಷಣೆ, ಧನ-ವೈಭವದ ಕಾರಕ ಎಂದು ಕರೆಯಲಾಗುತ್ತದೆ. ಹೀಗಿರುವಾಗ ನಿಮ್ಮ ಮೇಲೆ ಧನ ಕುಬೇರನ ವಿಶೇಷ ಕೃಪೆ ಕೂಡ ಇದ್ದೇ ಇರುತ್ತದೆ. ನೀವು ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಸುಲಭವಾಗಿ ದಾಟುವಿರಿ. ಸಮಾಜದಲ್ಲಿ ಸಾಕಷ್ಟು ಹೆಸರು ಗಳಿಸುವಿರಿ. ಸ್ಥಾನಮಾನ ಪ್ರಾಪ್ತಿಯಾಗುತ್ತದೆ.
ಕರ್ಕ ರಾಶಿ: ನಿಮ್ಮ ರಾಶಿಗೆ ಚಂದ್ರ ಅಧಿಪತಿ. ಚಂದ್ರ ಅತ್ಯಂತ ಶಾಂತ ಹಾಗೂ ಸ್ನೇಹ ಜೀವಿ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಈ ರಾಶಿಯ ಜನರು ತನ್ನ ಕಠಿಣ ಪರಿಶ್ರಮದಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ಕುಬೇರ ದೇವನ ಕೃಪೆಯಿಂದ ನೀವು ನಿಮ್ಮ ಜೀವನದಲ್ಲಿ ಅಪಾರ ಹಣ ಗಳಿಕೆ ಮಾಡುವಿರಿ. ಸಣ್ಣಪುಟ್ಟ ಅವಕಾಶಗಳಲ್ಲಿಯೂ ಕೂಡ ಹಣಗಳಿಕೆಯಲ್ಲಿ ನೀವು ನಿಪುಣರಾಗಿರುತ್ತಿರಿ. ಸ್ವಂತ ಜ್ಞಾನ, ಬುದ್ಧಿ ಹಾಗೂ ಕೌಶಲ್ಯದ ಕಾರಣ ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಯಶಸ್ಸನು ಸಂಪಾದಿಸುವಿರಿ. ತಾಯಿ ಲಕ್ಷ್ಮಿಯ ಜೊತೆಗೆ ಕುಬೇರನಿಗೆ ಪೂಜೆ ಸಲ್ಲಿಸುವುದರಿಂದ ನಿಮಗೆ ಸಾಕಷ್ಟು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ-ವೃಷಭ ರಾಶಿಗೆ ದೇವಗುರು ಬೃಹಸ್ಪತಿಯ ಪ್ರವೇಶ, ಕುಬೇರ ಯೋಗ ರಚನೆಯಿಂದ ಈ ಜನರಿಗೆ ಧನ ಕುಬೇರ ನಿಧಿ ಪ್ರಾಪ್ತಿಯ ಯೋಗ!
ಧನು ರಾಶಿ: ನಿಮ್ಮ ಜಾತಕಕ್ಕೆ ದೇವತೆಗಳ ಗುರು ಬೃಹಸ್ಪತಿ ಅಧಿಪತಿಯಾಗಿದ್ದಾನೆ. ಹೀಗಿರುವಾಗ ನಿಮ್ಮ ಮೇಲೆಯೂ ಕೂಡ ಕುಬೇರನ ವಿಶೇಷ ಕೃಪೆ ಇರುತ್ತದೆ. ಇದಲ್ಲದೆ ಆಧ್ಯಾತ್ಮದತ್ತ ನಿಮ್ಮ ಒಲವು ಸಾಕಷ್ಟು ಹೆಚ್ಚಾಗಿರುತ್ತದೆ. ಕುಬೇರ ಕೂಡ ನಿಮ್ಮ ಮೇಲೆ ಅಪಾರ ಪ್ರಸನ್ನನಾಗಿರುತ್ತಾನೆ. ಜೀವನ ಸುಖ ಸಮೃದ್ಧಿಯಿಂದ ತುಂಬಿರುತ್ತದೆ. ಈ ರಾಶಿಯ ಜನರು ಪರಿಶ್ರಮಕ್ಕೆ ಹಿಂಜರಿಯುವುದಿಲ್ಲ. ಇದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸಾಕಷ್ಟು ಹಣ ಗಳಿಸುವಲ್ಲಿಯೂ ಕೂಡ ನೀವು ಯಶಸ್ವಿಯಾಗುವಿರಿ. ಜೀವನದಲ್ಲಿ ಭೌತಿಕ ಸುಖದ ಕೊರತೆ ಎಂದಿಗೂ ನಿಮ್ಮನ್ನು ಕಾಡುವುದಿಲ್ಲ.
ಇದನ್ನೂ ಓದಿ-Hair Care Remedies: ಕಪ್ಪು, ದಟ್ಟ ಹಾಗೂ ನೀಳವಾದ ಕೇಶರಾಶಿ ನಿಮ್ಮದಾಗಬೇಕೆ? ಇಲ್ಲಿವೆ 3 ಪರ್ಫೆಕ್ಟ್ ಉಪಾಯಗಳು!
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.