ACC Men's Premium Cup 2024: ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ಕ್ಯಾಚ್ ನೋಡಲು ಸಿಗುವುದು ಅಪರೂಪ, Watch Video

ACC Mens Premium Cup 2024:ಎಸಿಸಿ ಪುರುಷ ಪ್ರೀಮಿಯಂ ಕಪ್ 2024 ರಲ್ಲಿ ಅರಬ್ ಯುನೈಟೆಡ್ ಎಮಿರೇಟ್ಸ್ ವಿರುದ್ಧ ನೇಪಾಳ ಮಧ್ಯೆ ನಡೆದ ಪಂದ್ಯದಲ್ಲಿ ನೇಪಾಳ ತಂಡದ ಆಟಗಾರನೊಬ್ಬ ಹಿಡಿದ ಕ್ಯಾಚ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಕತ್ ಸದ್ದು ಮಾಡುತ್ತಿದ್ದು, ಈ ಕ್ಯಾಚ್ ನಿಮಗೆ ಜಾಂಟೀ ರೋಡ್ಸ್ ಅವರ ಕ್ಷೇತ್ರ ರಕ್ಷಣೆಯ ನೆನಪನ್ನು ಮರುಕಳಿಸಲಿದೆ.   

Written by - Nitin Tabib | Last Updated : Apr 19, 2024, 09:15 PM IST
  • ಈ ಪಂದ್ಯದಲ್ಲಿ ವಿಷ್ಣು 28 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ಬಿರುಸಿನ ಆಟವಾಡಿದ್ದಾರೆ.
  • ಅವರನ್ನು ಹೊರತುಪಡಿಸಿ, ಅಲಿಶಾನ್ ಶರಾಫು 41 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 55 ಅಜೇಯ ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ.
  • ನೇಪಾಳ ಪರ ಗುಲ್ಶನ್ ಝಾ ಎರಡು ವಿಕೆಟ್ ಪಡೆದರೆ, ಲಲಿತ್ ರಾಜಬನ್ಶಿ ಮತ್ತು ಸೋಂಪಾಲ್ ಕಾಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ACC Men's Premium Cup 2024: ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ಕ್ಯಾಚ್ ನೋಡಲು ಸಿಗುವುದು ಅಪರೂಪ, Watch Video  title=

Kushal Bhurtel Stunning Catch Video: ಎಸಿಸಿ ಪುರುಷರ T20 ಪ್ರೀಮಿಯಂ ಕಪ್ 2024 ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂದು ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮುಖಾಮುಖಿಯಾಗಿದ್ದವು. ಈ ಮಹತ್ವದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನೇಪಾಳ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ನೇಪಾಳದ ಯಾವುದೇ ಬೌಲರ್ ಈ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

ಆದರೆ, ತಂಡದ ಪರವಾಗಿ ಸ್ಟಾರ್ ಬ್ಯಾಟ್ಸ್ ಮನ್ ಕುಶಾಲ್ ಭೂರ್ತೆಲ್ ಅತ್ಯುತ್ತಮ ಫೀಲ್ಡಿಂಗ್ ಮಾಡುತ್ತಾ ಯುಎಇ ತಂಡದ ವಿಷ್ಣು ಸುಕುಮಾರನ್ ಅವರ ಕ್ಯಾಚ್ ಪಡೆದು ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ನೇಪಾಳದ ಈ ಆಟಗಾರ ಪಡೆದ ಕ್ಯಾಚ್ ವಿಡಿಯೋ ಸಾಮಾಜಿಕ ಮಾಧ್ತ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಇಂತಹ ಕ್ಯಾಚ್ ನೋಡಲು ಸಿಗುವುದು ಅಪರೂಪ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ. ಯುಎಇ ವಿರುದ್ಧ ಮೊದಲು ಬ್ಯಾಟ್ ಮಾಡಿದ ನೇಪಾಳ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು.

ನೇಪಾಳ ಪರ ಸಂದೀಪ್ ಜೋರಾ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಮಹತ್ವದ ಇನಿಂಗ್ಸ್ ಕಟ್ಟಿದರು. ಸಂದೀಪ್ ಹೊರತುಪಡಿಸಿ, ಗುಲ್ಶನ್ ಝಾ 20 ರನ್ ಕೊಡುಗೆ ನೀಡಿದರೆ, ಕರಣ್ ಕೆಸಿ 17 ರನ್ ಗಳಿಸಿದರು. ಈ ಮೂವರು ಆಟಗಾರರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು 10 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

ನೇಪಾಳ ತಂಡ ನೀಡಿದ ಈ ಗುರಿ ಬೆನ್ನಟ್ಟಿದ ಯುಎಇ ತಂಡದ, ವಿಷ್ಣು ಬ್ಯಾಟಿಂಗ್ ಮಾಡುತ್ತಿದ್ದಾಗ, ಯುಎಇ ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಗುಲ್ಶನ್ ಝಾ ಎಸೆತದಲ್ಲಿ ಸುಕುಮಾರನ್ ಬಿಗ್ ಶಾಟ್ ಆಡಲು ಯತ್ನಿಸಿದ್ದಾರೆ. ಆದರೆ, ಚೆಂಡು ಸರಿಯಾಗಿ ಅವರ ಬ್ಯಾಟ್‌ಗೆ ತಾಕದೆ ಗಾಳಿಯಲ್ಲಿ ಎತ್ತರಕ್ಕೆ ಹೋಗಿತ್ತು. ಕುಶಾಲ್ ಭುರ್ಟೆಲ್ ತಕ್ಷಣ ಹಿಮ್ಮುಖವಾಗಿ ಕ್ಯಾಚ್ ಹಿಡಿಯಲು ಧಾವಿಸಿದ್ದಾರೆ ಮತ್ತು ಅವರು ಅದ್ಭುತ ಡೈವ್ ಮಾಡುವ ಮೂಲಕ ತಮ್ಮ ಎರಡೂ ಕೈಗಳಿಂದ ಈ ಕ್ಯಾಚ್ ಅನ್ನು ಹಿಡಿದಿದ್ದಾರೆ.

ಇದನ್ನೂ ಓದಿ-IPL 2024: 'ಇದು ಎಲ್ಲಕ್ಕಿಂತ ಮಿಗಿಲಾದದ್ದು...', ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?

ಈ ಪಂದ್ಯದಲ್ಲಿ ವಿಷ್ಣು 28 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ಬಿರುಸಿನ ಆಟವಾಡಿದ್ದಾರೆ. ಅವರನ್ನು ಹೊರತುಪಡಿಸಿ, ಅಲಿಶಾನ್ ಶರಾಫು 41 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 55 ಅಜೇಯ ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ನೇಪಾಳ ಪರ ಗುಲ್ಶನ್ ಝಾ ಎರಡು ವಿಕೆಟ್ ಪಡೆದರೆ, ಲಲಿತ್ ರಾಜಬನ್ಶಿ ಮತ್ತು ಸೋಂಪಾಲ್ ಕಾಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ-ICC T20 World Cup 2024: ಈ 16 ವರ್ಷ ವಯಸ್ಸಿನ ಹುಡುಗನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ! Watch Video

ಈ ಪಂದ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯಾವಳಿಯ ಅಂತಿಮ ಪಂದ್ಯ ಏಪ್ರಿಲ್ 21 ರಂದು ನಡೆಯಲಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News