Surya Grahan:  ಇಂದು ವೈಶಾಖ ಮಾಸದ ಅಮಾವಾಸ್ಯೆಯ ದಿನ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದೆ. ವೈಜ್ಞಾನಿಕವಾಗಿ ಈ ಗ್ರಹಣ ತುಂಬಾ ವಿಶೇಷವಾಗಿದ್ದು, ವಿಜ್ಞಾನಿಗಳು ಇದನ್ನು ಹೈಬ್ರೀಡ್ ಸೂರ್ಯಗ್ರಹಣ ಎಂದು ಬಣ್ಣಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, ಇಂದು ಮೂರು ಸೂರ್ಯ ಗ್ರಹಣಗಳು ಸಂಭವಿಸುತ್ತಿದೆ. ಶತಮಾನದ ಬಳಿಕ ಇಂತಹ ಕಾಕತಾಳೀಯ ಸಂಭವಿಸುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳನ್ವಯ ಈ ಸೂರ್ಯ ಗ್ರಹಣವು ಕೆಲವು ರಾಶಿಯವರ ಜೀವನದಲ್ಲಿ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಇದನ್ನು ತಪ್ಪಿಸಲು ಗ್ರಹಣ ಮುಗಿದ ತಕ್ಷಣ ತಪ್ಪದೇ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಸೂರ್ಯಗ್ರಹಣದ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಗ್ರಹಣ ಮುಗಿದ ತಕ್ಷಣ ತಪ್ಪದೇ ಈ ಕೆಲಸ ಮಾಡಿ:
ಮೊದಲು ಸ್ನಾನ ಮಾಡಿ:

ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಗ್ರಹಣದ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಮೊದಲು ಸ್ನಾನ ಮಾಡಲು ಸೂಚಿಸಲಾಗುತ್ತದೆ.  ವಾಸ್ತವವಾಗಿ, ಸೂರ್ಯ ಗ್ರಹಣದ ಸಮಯದಲ್ಲಿ ಸೂಕ್ಷ್ಮ ಜೀವಿಗಳು ಬೆಳೆಯಲು ಪ್ರಾರಂಭಿಸುತ್ತವೆ, ಇದರಿಂದ ಸೋಂಕುಗಳ ಅಪಾಯ ಹೆಚ್ಚಿರುವುದರಿಂದ ಸೂರ್ಯಗ್ರಹಣ ಮುಗಿದ ಕೂಡಲೇ ಸ್ನಾನ ಮಾಡಬೇಕು.


ಇದನ್ನೂ ಓದಿ- ಇಂದು ವರ್ಷದ ಮೊದಲ ಸೂರ್ಯ ಗ್ರಹಣದಂದು 5 ಶುಭ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಬಂಪರ್ ಲಾಭ


ಮನೆಯನ್ನು ಸ್ವಚ್ಛಗೊಳಿಸಿ: 
ಗ್ರಹಣದ ಬಳಿಕ ನೀವು ಸ್ನಾನ ಮಾಡಿದ ನಂತರ ಮನೆಯನ್ನು ಸ್ವಚ್ಛಗೊಳಿಸಿ ಗಂಗಾಜಲವನ್ನು ಮನೆಯಲ್ಲಿ ಪ್ರೋಕ್ಷಿಸಿ. ಇದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 


ದೇವರ ಸಾಮಾಗ್ರಿಗಳನ್ನು ಶುಚಿಗೊಳಿಸಿ:
ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿದ ಬಳಿಕ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ದೇವರ ಕೋಣೆಯಲ್ಲಿರುವ ವಿಗ್ರಹಗಳನ್ನು ಗಂಗಾಜಲದಿಂದ ಶುಚಿಗೊಳಿಸಿ. ದೇವರ ಪೂಜೆ ಮಾಡಿ. 


ಇದನ್ನೂ ಓದಿ- ವರ್ಷದ ಪ್ರಥಮ ಸೂರ್ಯ ಗ್ರಹಣಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ, ನಿಮ್ಮ ಮೇಲೆ ಏನು ಪರಿಣಾಮ


ದಾನ:
ಹಿಂದೂ ಧರ್ಮದಲ್ಲಿ ದಾನಕ್ಕೆ ತುಂಬಾ ಮಹತ್ವವಿದೆ. ಸೂರ್ಯಗ್ರಹಣ ಮುಗಿದ ನಂತರ ದೇವರ ಪೂಜೆ ಮಾಡಿ, ನಿಮ್ಮ ಕೈಲಾದಷ್ಟೂ ನಿರ್ಗತಿಕರಿಗೆ ದಾನ ಮಾಡಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.