ಇಂದು ವರ್ಷದ ಮೊದಲ ಸೂರ್ಯ ಗ್ರಹಣದಂದು 5 ಶುಭ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಬಂಪರ್ ಲಾಭ

Solar Eclipse Effect: ವೈಶಾಖ ಅಮಾವಾಸ್ಯೆಯ ಈ ದಿನ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಸಮಯದಲ್ಲಿ ಐದು ಮಂಗಳಕರ ಯೋಗಗಳು ಕೂಡ ನಿರ್ಮಾಣಗೊಳ್ಳುಟ್ಟಿವೆ. ಇದನ್ನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎಂತಲೂ ಬಣ್ಣಿಸಲಾಗುತ್ತಿದೆ.   

Written by - Yashaswini V | Last Updated : Apr 20, 2023, 07:15 AM IST
  • ಇಂದು ವರ್ಷದ ಮೊದಲ ಸೂರ್ಯಗ್ರಹಣ
  • ಇಂದು ನಿರ್ಮಾಣಗೊಳ್ಳಲಿವೆ ಕೆಲವು ಶುಭ ಯೋಗಗಳು
  • ಈ ಶುಭ ಯೋಗಗಳು ಕೆಲವು ರಾಶಿಯವರಿಗೆ ಮಂಗಳಕರ ಎಂದು ಸಾಬೀತುಪಡಿಸಲಿದೆ
ಇಂದು ವರ್ಷದ ಮೊದಲ ಸೂರ್ಯ ಗ್ರಹಣದಂದು 5 ಶುಭ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಬಂಪರ್ ಲಾಭ title=

Surya Grahana Effect: ಇಂದು 2023ರ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ವೈಶಾಖ ಅಮಾವಾಸ್ಯೆಯ ಈ ದಿನ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಲಿರುವ ಈ ಗ್ರಹಣ ಮಧ್ಯಾಹ್ನ 12:29ಕ್ಕೆ ಕೊನೆಗೊಳ್ಳಲಿದೆ. ಗ್ರಹನಗಳಂತಹ ಖಗೋಳ ವಿದ್ಯಮಾನವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಇಂದು ಸಂಭವಿಸುತ್ತಿರುವ ಸೂರ್ಯ ಗ್ರಹಣದಿಂದಾಗಿ ಐದು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳು ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿವೆ ಎಂದು ಹೇಳಲಾಗುತ್ತಿದೆ. 

ವರ್ಷದ ಮೊದಲ ಸೂರ್ಯಗ್ರಹಣವಾದ ಇಂದು ರೂಪುಗೊಳ್ಳುತ್ತಿರುವ ಸರ್ವಾರ್ಥ ಸಿದ್ಧಿ, ಪ್ರೀತಿಯಂತಹ ಯೋಗಗಳು ಯಾವ ರಾಶಿಯವರಿಗೆ ಮಂಗಳಕರ ಎಂದು ತಿಳಿಯೋಣ... 

ವೈಶಾಖ ಅಮಾವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ, ಈ ರಾಶಿಯವರಿಗೆ ಭಾರೀ ಅದೃಷ್ಟ : 
ಮಿಥುನ ರಾಶಿ: 

ಈ ವರ್ಷದ ಮೊದಲ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಯಾವುದೇ ವರದಾನಕ್ಕಿಂತ ಕಡಿಮೆಯಿಲ್ಲ. ಈ ಸಮಯದಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಮಾತ್ರವಲ್ಲ, ಬಹುದಿನಗಳಿಂದ ನಿಮ್ಮ ಕೈಸೇರದ ಹಣ ಈ ಸಮಯದಲ್ಲಿ ನಿಮ್ಮದಾಗಲಿದೆ. ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. 

ಇದನ್ನೂ ಓದಿ- Guru Gochar Effect: ಮೇಷ ರಾಶಿಯಲ್ಲಿ ಗುರು ಚಂಡಾಲ ಯೋಗದಿಂದ ನಾಲ್ಕು ರಾಶಿಯವರಿಗೆ ಸಂಕಷ್ಟ

ಕರ್ಕಾಟಕ ರಾಶಿ: 
ಸೂರ್ಯ ಗ್ರಹಣದಲ್ಲಿ ರೂಪುಗೊಳ್ಳುತ್ತಿರುವ ಮಂಗಳಕರ ಯೋಗಗಳ ಫಲವಾಗಿ ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವರು. ಮಾತ್ರವಲ್ಲ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಸಮಯದಲ್ಲಿ ನಿಮ್ಮ ಆಸೆ ನೇರವೇರಲಿದೆ. 

ಸಿಂಹ ರಾಶಿ: 
ಸಿಂಹ ರಾಶಿಯವರಿಗೂ ಸಹ ಸೂರ್ಯ ಗ್ರಹಣವು ವರದಾನ ಎಂತಲೇ ಹೇಳಬಹುದು. ಈ ಸಮಯದ್ಲಲಿ ನೀವು ಏಕಾಗ್ರತೆಯಿಂದ ಮಾಡಿದ ಕೆಲಸಗಳಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ವೃತ್ತಿ ರಂಗದಲ್ಲಿ ನಿಮ್ಮ ಕೌಶಲ್ಯಗಳಿಗೆ ಸರಿಯಾದ ಮನ್ನಣೆ ದೊರೆಯಲಿದ್ದು ಕೀರ್ತಿಯೂ ಹೆಚ್ಚಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. 

ಇದನ್ನೂ ಓದಿ- Surya Grahan 2023: ಈ 2 ರಾಶಿಯವರ ಜೀವನದಲ್ಲಿ ಶುರುವಾಗಲಿದೆ ಸಂಕಷ್ಟ !

ಧನು ರಾಶಿ: 
ಇಂದು ಸಂಭವಿಸಲಿರುವ ಸೂರ್ಯ ಗ್ರಹಣವು ಧನು ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಬಂಪರ್ ಲಾಭವನ್ನು ನೀಡಲಿದ್ದು, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ನೀವು ಹೊಸ ಕೆಲಸಗಳನ್ನು ಮಾಡಲು ಚಿಂತಿಸುತ್ತಿದ್ದರೆ ಉತ್ತಮ ಸಮಯ ಇದಾಗಿದೆ. 

ಕುಂಭ ರಾಶಿ: 
ಕುಂಭ ರಾಶಿಯವರಿಗೂ ಸಹ ವರ್ಷದ ಮೊದಲ ಸೂರ್ಯಗ್ರಹಣ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಕೌಟುಂಬಿಕ ಸುಖ-ಸಂತೋಷ ವೃದ್ಧಿಯಾಗಲಿದ್ದು, ಆರೋಗ್ಯ ಸಮಸ್ಯೆಗಳಿಂದಲೂ ಪರಿಹಾರ ಸಿಗಲಿದೆ. ನಿಮ್ಮ ಶ್ರಮಕ್ಕೆ ತಕ್ಕಪ್ರತಿಫಲ ದೊರೆತು ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ.  

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News