ಇಂದು ಜ್ಯೇಷ್ಠ ಅಮಾವಾಸ್ಯೆ: ಈ ದಿನ ರಾತ್ರಿ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಲೇಬಾರದು
Jyeshta Amavasya 2023: ಹಿಂದೂ ಧರ್ಮದಲ್ಲಿ ಅಮಾವಾಸ್ಯೆ, ಹುಣ್ಣಿಮೆಗಳಿಗೂ ತುಂಬಾ ಮಹತ್ವವಿದೆ. ಇಂದು 19 ಮೇ 2023ರ ಶುಕ್ರವಾರದ ದಿನ ಜ್ಯೇಷ್ಠ ಮಾಸದ ಅಮವಾಸ್ಯೆ. ಧರ್ಮಗ್ರಂಥಗಳ ಪ್ರಕಾರ ಇದೇ, ದಿನ ಶನಿ ಮಹಾತ್ಮ ಜನ್ಮತಾಳಿದನೆಂಬ ನಂಬಿಕೆ ಇದ್ದು ಈ ದಿನ ಶನಿ ಜಯಂತಿಯನ್ನೂ ಕೂಡ ಆಚರಿಸಲಾಗುತ್ತದೆ. ಆದರೆ, ಈ ದಿನ ರಾತ್ರಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದ್ದು, ನಿಮಗೆ ತಿಳಿದೋ ಅಥವಾ ತಿಳಿಯದೆಯೋ ಇಂದು ಮಾಡುವ ಈ ತಪ್ಪುಗಳು ಜೀವನವನ್ನೇ ಸರ್ವನಾಶದತ್ತ ಕೊಂಡೊಯ್ಯಬಹುದು ಎಂದು ಹೇಳಲಾಗುತ್ತದೆ.
Jyeshta Amavasya 2023 Remedies: ಹಿಂದೂ ಧರ್ಮದಲ್ಲಿ ಏಕಾದಶಿ, ದ್ವಾದಶಿಗಳಂತೆಯೇ ಪ್ರತಿ ಮಾಸವೂ ಬರುವ ಅಮಾವಾಸ್ಯೆ, ಹುಣ್ಣಿಮೆಗಳಿಗೂ ವಿಶೇಷವಾದ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯ ದಿನವನ್ನು ಪೂರ್ವಜರಿಗೆ ಮೀಸಲಿಡಲಾಗಿದೆ. ಅಲ್ಲದೆ, ಅಮಾವಾಸ್ಯೆಯ ದಿನ ಮಾಡುವ ತಂತ್ರ-ಮಂತ್ರಗಳನ್ನೂ ಬಹಳ ಪರಿಣಾಮಕಾರಿ ಎಂದು ನಂಬಲಾಗಿದೆ. ಇವೆಲ್ಲದರ ಹೊರತಾಗಿ, ಅಮಾವಾಸ್ಯೆ ಎಂದರೆ ಕೆಲವರಲ್ಲಿ ಭಯವೂ ಇದೆ. ಅಮಾವಾಸ್ಯೆಯ ದಿನ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.
ವಾಸ್ತವವಾಗಿ, ಅಮಾವಾಸ್ಯೆಯ ರಾತ್ರಿಯಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದ್ದು, ನಿಮಗೆ ತಿಳಿದೋ ಅಥವಾ ತಿಳಿಯದೆಯೋ ಅಮಾವಾಸ್ಯೆಯ ಕರಾಳ ರಾತ್ರಿಯಲ್ಲಿ ಮಾಡುವ ಕೆಲವು ಕೆಲಸಗಳು ನಿಮ್ಮ ಜೀವನವನ್ನೇ ನಾಶ ಪಡಿಸಬಹುದು ಎಂತಲೂ ಹೇಳಲಾಗುತ್ತದೆ. ಇದನ್ನು ತಪ್ಪಿಸಲು ಅಮವಾಸ್ಯೆಯ ಕರಾಳ ರಾತ್ರಿಯಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
ಇಂದು ಮೇ 19, ಶುಕ್ರವಾರ, ಜ್ಯೇಷ್ಠ ಅಮವಾಸ್ಯೆಯ ದಿನ ಭಾರತದ ಕೆಲವು ಭಾಗಗಳಲ್ಲಿ ವಟ್ ಸಾವಿತ್ರಿ ವ್ರತವನ್ನು ಸಹ ಆಚರಿಸಲಾಗುತ್ತದೆ. ಶನಿ ಜಯಂತಿಯ ದಿನ ಆಚರಿಸಲಾಗುವ ಈ ವ್ರತಕ್ಕೆ ವಿಶೇಷ ಮಹತ್ವವಿದೆ. ಈ ದಿನ ರಾತ್ರಿ ಅಪ್ಪಿತಪ್ಪಿಯೂ ಕೂಡ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಶನಿ ಜಯಂತಿಯಂದು ಅದ್ಭುತ ರಾಜಯೋಗಗಳ ನಿರ್ಮಾಣ: ಇಂದಿನಿಂದ ಇವರ ಬಾಳೇ ಬಂಗಾರ
ಜ್ಯೇಷ್ಠ ಅಮಾವಾಸ್ಯೆಯ ಕರಾಳ ರಾತ್ರಿಯಲ್ಲಿ ಮಾಡುವ ಈ ತಪ್ಪುಗಳು ನಿಮ್ಮ ಜೀವನವನ್ನೇ ನಾಶ ಮಾಡಬಹುದು, ಎಚ್ಚರ!
* ಉಗುರು, ಕೂದಲನ್ನು ಕತ್ತರಿಸಬೇಡಿ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮವಾಸ್ಯೆಯಂದು ಉಗುರುಗಳು ಮತ್ತು ಕೂದಲನ್ನು ಕತ್ತರಿಸುವುದನ್ನು ತಪ್ಪಿಸಬೇಕು.
* ಇಂತಹ ಸ್ಥಳಗಳಿವೆ ಹೋಗುವುದನ್ನು ತಪ್ಪಿಸಿ:
ತಂತ್ರ-ಮಂತ್ರಗಳಿಗೆ ಅಮವಾಸ್ಯೆಯ ರಾತ್ರಿಯನ್ನು ಬಹಳ ವಿಶೇಷ ಎಂದು ಬಣ್ಣಿಸಲಾಗುತ್ತದೆ. ಈ ದಿನ ರಾತ್ರಿಯ ವೇಳೆ ಅಘೋರಿಗಳು ಮತ್ತು ತಾಂತ್ರಿಕರು ಸ್ಮಶಾನದಲ್ಲಿ ಆಧ್ಯಾತ್ಮಿಕ ಅಭ್ಯಾಸವನ್ನು ಮಾಡುತ್ತಾ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ, ಯಾವುದೇ ಕಾರಣಕ್ಕೂ ಅಮಾವಾಸ್ಯೆಯ ರಾತ್ರಿಯಲ್ಲಿ ಯಾವುದೇ ವ್ಯಕ್ತಿ ಸ್ಮಶಾನ ಅಥವಾ ನಿರ್ಜನ ಸ್ಥಳಗಳ ಸುತ್ತ ಸುತ್ತಾಡುವುದನ್ನು ಅಷ್ಟು ಒಳ್ಳೆಯದು ಎಂದು ಹೇಳಲಾಗುವುದಿಲ್ಲ.
* ಮಾನಸಿಕವಾಗಿ ದುರ್ಬಲರಾದವರು ಈ ಸಲಹೆ ಅನುಸರಿಸಿ:
ವಾಸ್ತವವಾಗಿ, ಅಮಾವಾಸ್ಯೆ- ಹುಣ್ಣಿಮೆಗಳಲ್ಲಿ ಚಂದ್ರನ ಸ್ಥಾನದಲ್ಲಿ ಬದಲಾಗುತ್ತದೆ. ಇದು ಜನರ ಭಾವನೆಗಳ ಮೇಲೆ ಪ್ರಭಾವ ಬಿರುತ್ತದೆ. ಮಾತ್ರವಲ್ಲ, ಜನರನ್ನು ಬೇಗ ಭಾವೋದ್ರಿಕ್ತರಾಗಲು ಪ್ರೇರೇಪಿಸಿತ್ತದೆ. ಅದರಲ್ಲೂ ದುರ್ಬಲ ಮನಸ್ಸಿನವರಲ್ಲಿ ಅಮಾವಾಸ್ಯೆಯ ರಾತ್ರಿಯಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳೇ ಹೆಚ್ಚಾಗಿ ಕಾಡುತ್ತದೆ. ಇದನ್ನು ತಪ್ಪಿಸಲು ಅಮಾವಾಸ್ಯೆಯ ರಾತ್ರಿ ಹನುಮಾನ್ ಚಾಲೀಸಾವನ್ನು ಪಠಿಸಿ. ಇದರಿಂದ ನಿಮ್ಮ ಮನಸ್ಸು ಸದೃಢವಾಗುತ್ತದೆ.
ಇದನ್ನೂ ಓದಿ- Vastu Tips: ಈ ಪ್ರಾಣಿ ವಿಗ್ರಹಗಳನ್ನು ಮನೆಯ ಸರಿಯಾದ ದಿಕ್ಕಿನಲ್ಲಿಲ್ಲಿಟ್ಟರೆ ಸಂಪತ್ತು ಪ್ರಾಪ್ತಿ
* ಮಾಂಸಾಹಾರ ಮದ್ಯ ಸೇವಿಸಬೇಡಿ:
ಮೊದಲೇ ತಿಳಿಸಿದಂತೆ ಅಮಾವಾಸ್ಯೆ ತಿಥಿ ಪೂರ್ವಜರಿಗೆ ಸಮರ್ಪಿತವಾಗಿದೆ. ಈ ದಿನ ಮದ್ಯ ಮಾಂಸಾಹಾರಗಳ ಸೇವನೆಯನ್ನು ನಿಷೇಧಿಸಲಾಗಿದೆ. ಯಾರೇ ಆದರೂ ಅಮಾವಾಸ್ಯೆಯಲ್ಲಿ ಮದ್ಯ ಮಾಂಸವನ್ನು ಬಳಸುವುದರಿಂದ ಪಿತೃ ದೋಷ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಏಳ್ಗೆ ಕುಂಠಿತಗೊಳ್ಳುತ್ತದೆ.
* ದಂಪತಿಗಳ ಸಂಬಂಧ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯ ರಾತ್ರಿಯಲ್ಲಿ ಪತಿ-ಪತ್ನಿ ಒಂದಾಗುವುದನ್ನು ಅಷ್ಟು ಶುಭಕರ ಎಂದು ಭಾವಿಸಲಾಗುವುದಿಲ್ಲ. ಇದು ಹುಟ್ಟುವ ಮಗುವಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು ಎಂದು ಹೇಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ