Shani Mahadasha ನೀಡಲಿದೆ ಬಂಪರ್ ಲಾಭ: ಮುಂದಿನ 19 ವರ್ಷಗಳವರೆಗೆ ಇವರಿಗೆ ರಾಜ ಯೋಗ!

Shani Mahadasha: ಕರ್ಮಫಲದಾತ ಶನಿ ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ. ಶನಿ ಎಂದೊಡನೆ ಅವನು ಶಿಕ್ಷೆಯನ್ನೇ ನೀಡುತ್ತಾನೆ ಎಂಬುದು ಹಲವರ ಭಾವನೆ, ಆದರೂ, ಶನಿ ಮನುಷ್ಯರ ಒಳ್ಳೆಯ ಕೆಲಸಗಳಿಗೆ ಒಳ್ಳೆ ಫಲಗಳನ್ನು ಸಹ ನೀಡುತ್ತಾನೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಮಹಾದಶ ಶುಭವಾಗಿದ್ದರೆ ಅವರ ಬಾಳೇ ಬಂಗಾರ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : May 17, 2023, 12:31 PM IST
  • ವೈದ್ಯಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಉತ್ತಮ ಯೋಗ ಇದ್ದಾಗ್ಯೂ ಕೂಡ ಶನಿಯು ಶುಭ ಸ್ಥಾನದಲ್ಲಿ ಇಲ್ಲದ್ದಾಗ ಅವನ ಪ್ರತಿ ಕೆಲಸದಲ್ಲೂ ತೊಡಕನ್ನು ಉಂಟು ಮಾಡುತ್ತಾನೆ.
  • ಇದರಿಂದ ವ್ಯಕ್ತಿಯು ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಜೀವನದಲ್ಲಿ ನೋವು, ದುಃಖವನ್ನೇ ಅನುಭವಿಸುತ್ತಾರೆ.
  • ಅದೇ ರೀತಿ ಶನಿಯು ಶುಭ ಸ್ಥಾನದಲ್ಲಿದ್ದರೆ ಉತ್ತಮ ಫಲಗಳನ್ನೇ ನೀಡುತ್ತಾನೆ ಎಂದು ಹೇಳಲಾಗುತ್ತದೆ.
Shani Mahadasha ನೀಡಲಿದೆ ಬಂಪರ್ ಲಾಭ: ಮುಂದಿನ 19 ವರ್ಷಗಳವರೆಗೆ ಇವರಿಗೆ ರಾಜ ಯೋಗ!  title=
Shani mahadasha impact

Shani Mahadasha Impact: ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿ ದೇವನ ಹೆಸರು ಕೇಳಿದರೆ ಸಾಕು ಕೆಲವರು ಕನಸಿನಲ್ಲಿಯೂ ಬೆಚ್ಚಿ ಬೀಳುತ್ತಾರೆ. ಆದರೆ, ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ನಾನಾ ರೀತಿಯ ನೋವು, ಸಮಸ್ಯೆಗಳನ್ನು ಹೆಚ್ಚಿಸುತ್ತಾರೆ. 

ವೈದ್ಯಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಉತ್ತಮ ಯೋಗ ಇದ್ದಾಗ್ಯೂ ಕೂಡ ಶನಿಯು ಶುಭ ಸ್ಥಾನದಲ್ಲಿ ಇಲ್ಲದ್ದಾಗ ಅವನ ಪ್ರತಿ ಕೆಲಸದಲ್ಲೂ ತೊಡಕನ್ನು ಉಂಟು ಮಾಡುತ್ತಾನೆ. ಇದರಿಂದ ವ್ಯಕ್ತಿಯು ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಜೀವನದಲ್ಲಿ ನೋವು, ದುಃಖವನ್ನೇ ಅನುಭವಿಸುತ್ತಾರೆ. ಅದೇ ರೀತಿ ಶನಿಯು ಶುಭ ಸ್ಥಾನದಲ್ಲಿದ್ದರೆ ಉತ್ತಮ ಫಲಗಳನ್ನೇ ನೀಡುತ್ತಾನೆ ಎಂದು ಹೇಳಲಾಗುತ್ತದೆ. 

ವ್ಯಕ್ತಿಯ ಜಾತಕದಲ್ಲಿ ಶನಿ ಮಹಾದಶಾ ಇದ್ದಾಗ ಅಂತಹ ವ್ಯಕ್ತಿ ಜೀವನದಲ್ಲಿ 19 ವರ್ಷಗಳ ಕಾಲ ಎಂದರೆ ಸುಮಾರು ಎರಡು ದಶಕಗಳ ಕಾಲ ರಾಜಯೋಗವನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ.  ಅವರ ಬಾಳೇ ಬಂಗಾರದಂತೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಶನಿ ಜಯಂತಿಯಂದು ಅಪರೂಪದ 3 ರಾಜಯೋಗಗಳು, ಈ 3 ರಾಶಿಯವರಿಗೆ ಸಿರಿವಂತರಾಗುವ ಯೋಗ

ಶನಿ ಮಹಾದಶದಿಂದ ಆಗುವ ಪ್ರಯೋಜನಗಳೆಂದರೆ: - 
* ಕರ್ಮಗಳಿಗೆ ತಕ್ಕ ಪ್ರತಿಫಲವನ್ನು ನೀಡುವ ಶನಿಯು ಜಾತಕದಲ್ಲಿ ಮಹಾದಶ ಯೋಗದಲ್ಲಿದ್ದರೆ, ಆ ವ್ಯಕ್ತಿ ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಆತ ಜೀವನದಲ್ಲಿ ರಾಜನಂತೆ ಬದುಕುತ್ತಾನೆ. ಅವರ ಜೀವನದಲ್ಲಿ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. 

* ಶನಿ ಮಹಾದಶವು ವ್ಯಕ್ತಿಯನ್ನು ಶ್ರೀಮಂತನನ್ನಾಗಿಸುತ್ತದೆ. ಮಾತ್ರವಲ್ಲ, ಆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಖ್ಯಾತಿ, ಉನ್ನತ ಪದವಿ, ಹಣ ಎಲ್ಲವನ್ನೂ ಪಡೆಯುತ್ತಾನೆ. 

* ಅದೇ ರೀತಿ ವ್ಯಕ್ತಿ ಪಾಪ ಕಾರ್ಯಗಳನ್ನು ಮಾಡಿದ್ದರೆ ಅವರ ಜಾತಕದಲ್ಲಿ ಶನಿಯ ಮಹಾದಶಾದಲ್ಲಿ  ನಾನಾ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. 

* ಶನಿಯು ದುರ್ಬಲನಾಗಿದ್ದಾಗ ವ್ಯಕ್ತಿಯ ಜಾತಕದಲ್ಲಿ ಶನಿ ಮಹಾದಶ ಪ್ರಭಾವವಿದ್ದಾಗ ಈ ಸಂದರ್ಭದಲ್ಲಿ ನಾನಾ ರೀತಿಯ ಸವಾಲುಗಳು, ತೊಂದರೆಗಳನ್ನು ಸಹ ಅನುಭವಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರ ವೃತ್ತಿ ಬದುಕಿನಲ್ಲಿ ಸಮಸ್ಯೆಗಳ ಜೊತೆಗೆ ವ್ಯವಹಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಮಾತ್ರವಲ್ಲ, ಆರೋಗ್ಯದ ವಿಚಾರದಲ್ಲಿಯೂ ಕೂಡ ಹಲವು ಸಮಸ್ಯೆಗಳು ಕಾಡಬಹುದು. 

ಇದನ್ನೂ ಓದಿ- ದ್ವಾದಶ ರಾಶಿಗಳಲ್ಲಿ ತುಂಬಾ ಭಾಗ್ಯವಂತರು ಈ ನಾಲ್ಕು ರಾಶಿಯ ಜನ

ಶನಿ ಮಹಾದಶದಲ್ಲಿ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾದಶದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಅದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಅವುಗಳೆಂದರೆ... 
>> ನಿಮ್ಮ ಜಾತಕದಲ್ಲಿ ಶನಿ ದುರ್ಬಲನಾಗಿದ್ದಾಗ ಯಾವುದೇ ಕಾರಣಕ್ಕೂ ಯಾರೊಂದಿಗೂ ಕೂಡ ಅನುಚಿತವಾಗಿ ವರ್ತಿಸಬೇಡಿ. 
>> ವೃದ್ಧರೂ, ಅಸಹಾಯಕರು, ಶ್ರಮ ಜೀವಿಗಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಬೇಡಿ. ನಿಮ್ಮ ಇಂತಹ ತಪ್ಪುಗಳು ನಿಮ್ಮನ್ನು ಕಠಿಣ ಶಿಕ್ಷೆಗೆ ಗುರಿ ಆಗುವಂತೆ ಮಾಡಬಹುದು. 
>> ಶನಿವಾರದಂದು ಅರಳಿ ಅರದ ಕೆಳಗೆ ನಾಲ್ಕು ಮುಖದ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಬಳಿಕ ಮರಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ. ಈ ಸಮಯದಲ್ಲಿ ಶನಿ ದೇವರ ಮಂತ್ರವನ್ನು ಜಪಿಸಿ. 
>> ನಿಮಗೆ ಸಾಧ್ಯವಾದಷ್ಟು ಅಸಹಾಯಕರಿಗೆ, ನಿರ್ಗತಿಕರಿಗೆ ಸಹಾಯ ಮಾಡಿ. 
>> ವ್ಯಾಪಾರ ವ್ಯವಹಾರದಲ್ಲಿ ಏಳ್ಗೆಗಾಗಿ ಸೂರ್ಯೋದಯಕ್ಕೂ ಮೊದಲೇ ಅರಳಿ ಮರಕ್ಕೆ ನೀರೆರೆಯಿರಿ. 
>> ಇದರೊಂದಿಗೆ ಶನಿ ಚಾಲೀಶವನ್ನು ಪಠಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News