Dress Code In Sringeri: ಸನಾತನ ಧರ್ಮವನ್ನ ಪ್ರತಿಪಾದಿಸುತ್ತಾ ಬಂದಿರೋ ನಾಡಿನ ಶಕ್ತಿ ದೇವತೆ ಶೃಂಗೇರಿಯ ಶಾರದಾ ಪೀಠದಲ್ಲಿ (Sringeri Sharadha Peetha) ಸನಾತನ ಸಾಂಪ್ರದಾಯಿಕ ನಾಂದಿ ಹಾಡಿದ್ದಾರೆ. 20 ದಿನಗಳ ಹಿಂದೆಯೇ ಆಡಳಿತ ಮಂಡಳಿ ಡ್ರೆಸ್ ಕೋಡ್  (Dress Code) ಆದೇಶವನ್ನ ಅನೌನ್ಸ್ ಮಾಡಿತ್ತು. ಅದರಂತೆ ನಿನ್ನೆಯಿಂದ (ಆಗಸ್ಟ್ 15)  ಶೃಂಗೇರಿ ಮಠದಲ್ಲೂ(Sringeri Mutt) ಅಧಿಕೃತವಾಗಿ ವಸ್ತ್ರಸಂಹಿತ ಪದ್ಧತಿ ಜಾರಿಗೆ ಬಂದಿದೆ. ಈ ಹೊಸ ಪದ್ಧತಿ ಮೂಲಕ ಕಲಿಯುಗದ ಆಧುನಿಕ ಪ್ರಪಂಚದಲ್ಲಿ ದೇವಾಲಯಗಳಲ್ಲಿ ಸನಾತನ ಸಂಪ್ರದಾಯ ಉಳಿಸಲು ಆಡಳಿತ ಮಂಡಳಿ ಮುಂದಾಗಿದೆ. ಹೊಸ ರೂಲ್ಸ್ ಜಾರಿಗೆ ಬಂದ ಮೊದಲ ದಿನವೇ ಭಕ್ತರ ರೆಸ್ಪಾನ್ಸ್ ಹೇಗಿತ್ತು ಎಂಬ ಕುರಿತು ಇಲ್ಲಿದೆ ವರದಿ... 


COMMERCIAL BREAK
SCROLL TO CONTINUE READING

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾ ಪೀಠ (Sringeri Sharadha Peetha) ಹಾಗೂ ಜಗದ್ಗುರುಗಳ ದರ್ಶನ ಪಡೆಯೋಕೆ ಬರೋ ಭಕ್ತ ಇನ್ಮುಂದೆ ಭಾರತೀಯ ಸಾಂಪ್ರದಾಯಿಕ ಬಟ್ಟೆ (Indian Traditional Dress) ತೊಟ್ಟೇ ಬರಬೇಕು ಎಂದು ಹದಿನೈದು ದಿನಗಳ ಹಿಂದೆಯೇ ಮಠದ ಆಡಳಿತಾಧಿಕಾರಿ ಪಿ.ಎ.ಮುರುಳೀಧರ್ ಭಕ್ತರು ಹಾಗೂ ಸ್ಥಳೀಯರಿಗೆ ಸೂಚನೆ ನೀಡಿದರು. ಅದರಂತೆ ಆಗಸ್ಟ್ 15ರಿಂದ ಅಧಿಕೃತವಾಗಿ ದೇವಾಲಯದ ಆವರಣದಲ್ಲಿ ಟಫ್ ರೂಲ್ಸ್ ಜಾರಿಗೆ ಬಂದಿದೆ. 


ಇದನ್ನೂ ಓದಿ- ಬರೋಬ್ಬರಿ 18ವರ್ಷಗಳ ಬಳಿಕ ಸೂರ್ಯ-ಕೇತು ಮೈತ್ರಿ: ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ


ದೇವಾಲಯ (Temple) ಹಾಗೂ ಮಠಕ್ಕೆ ಬರೋ ಭಕ್ತರಿಗೆ ಮಠದ ಹೊಸ ನಿಯಮದ (New Rules)ಬಗ್ಗೆ ಗೊತ್ತಾಗ್ಬೇಕು ಅನ್ನೋ ದೃಷ್ಟಿಯಿಂದ ದೇವಾಲಯದ ಹೊರಗೆ, ಪ್ರವೇಶ ದ್ವಾರದಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಡ್ರೆಸ್ ಕೋಡ್ ಕುರಿತಾದ ಬ್ಯಾನರ್‍ಗಳನ್ನ ಅಳವಡಿಸಲಾಗಿದೆ. ಗುರುವಾರ ಸ್ವಾತಂತ್ರ ದಿನಾಚರಣೆ ಅಂಗವಾಗಿ ಮಠಕ್ಕೆ ಬರೋ ಭಕ್ತರ ಸಂಖ್ಯೆ ಸಹಜವಾಗಿಯೇ ಕಡಿಮೆಯಿದ್ರು ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಬಂದಂತಹಾ ಭಕ್ತರಲ್ಲಿ ಪುರುಷರು ಪಂಜೆ-ಶಲ್ಯ ಧರಿಸಿದ್ರೆ, ಮಹಿಳೆಯರು ಸೀರೆಯುಟ್ಟೇ ದೇವರ ದರ್ಶನಕ್ಕೆ ಬಂದ್ದಿದ್ದರು. ಹಾಗಾಗಿ, ಮಠದ ಆವರಣದ ಸಂಪ್ರಾದಾಯಿಕತೆಯಿಂದ ಕಂಗೊಳಿಸುತ್ತಿತ್ತು. 


ಸನಾತನ ಸಂಪ್ರದಾಯವನ್ನ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಹಿಂದಿನಿಂದಲೂ ಭಾರತೀಯ ಸಾಂಪ್ರದಾಯಕ ಉಡುಗೆ ತೊಡುಗೆಗಳನ್ನ ಕಡ್ಡಾಯವಾಗಿ ಧರಿಸಿ ದೇವಾಲಯದ ಒಳಗೆ ಪ್ರವೇಶ ಮಾಡುವಂತೆ ನಿಯಮಗಳನ್ನು ಜಾರಿಗೆ ತಂದು ಯಶ್ವಸ್ವಿಯಾಗಿದೆ. ಅದೇ ನಿಟ್ಟಿನಲ್ಲಿ ಇದೀಗ ಶೃಂಗೇರಿಯ ಶಾರದಾ ಪೀಠದಲ್ಲೂ ಇದೇ ರೀತಿಯ ಸಾಂಪ್ರದಾಯಿಕ ಡ್ರೆಸ್ ಕೋಡ್ ಜಾರಿಗೆ ಚಿಂತನೆ ನಡೆಸಿ ಆಗಸ್ಟ್ 15ರಿಂದ ಅಧಿಕೃತವಾಗಿ ಜಾರಿಗೊಳಿಸಿದೆ.  ಪ್ರಮುಖ ವಿಷಯವೆಂದರೆ, ಮಠದ ನಿರ್ಧಾರಕ್ಕೆ ಭಕ್ತಗಣ ಕೂಡ ಸ್ವಾಗತ ಕೋರಿದೆ. ಯಾವ ಸ್ಥಳಕ್ಕೆ ಹೇಗೆ ಹೋಗಬೇಕು ಹಾಗೇ ಹೋಗಬೇಕು. ಚೆಡ್ಡಿ, ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗುತ್ತಾರೆ. ದೇವಸ್ಥಾನಕ್ಕೆ ಆ ಬಟ್ಟೆ ಒಳ್ಳೆದಲ್ಲ. ಮಠದ ಈ ತೀರ್ಮಾನಕ್ಕೆ ನಮ್ಮ ಸ್ವಾಗತವಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ- ತಿರುಪತಿಗೆ ಹೋದಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..! ಗೋವಿಂದನ ಕೃಪೆ ಲಭಿಸಲ್ಲ..


ಒಟ್ಟಾರೆ, ಶಕ್ತಿಪೀಠ ವಿದ್ಯಾಧಿದೇವತೆ ಶಾರದಾಂಬೆ ಸನ್ನಿಧಿಯಲ್ಲಿ ನಿನ್ನೆ (ಆಗಸ್ಟ್ 15) ಸಾಂಪ್ರದಾಯಿಕ ಡ್ರೆಸ್ ಕೋಡ್ ಜಾರಿಗೆ ಬಂದಿದೆ. ಭಕ್ತರು ಕೂಡ ಮಠದ ತೀರ್ಮಾನಕ್ಕೆ ಉಘೇ ಎಂದಿದ್ದಾರೆ. ದಿನದಿಂದ ದಿನಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ದಾಸರಾಗ್ತಿರೋ ಆಧುನಿಕ ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ  ಕೂಡ ಕ್ರಮೇಣ ನಶಿಸುತ್ತಿದೆ. ಇಂತಹಾ ಸಂದರ್ಭದಲ್ಲಿ ಸನಾತನ ಸಂಪ್ರದಾಯ ಉಳಿಸಲು ಮುಂದಾಗಿರೋ ಶ್ರೀಮಠದ ಆಡಳಿತ ಮಂಡಳಿಯ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.