Grah Gochar 2023: ಹೊಸ ವರ್ಷದ ಮೊದಲ ಮಾಸದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಶನಿದೇವನ ಜೊತೆಗೆ ಹಲವು ಪ್ರಮುಖ ಗ್ರಹಗಳು ತಮ್ಮ ರಾಶಿ ಚಕ್ರವನ್ನು ಬದಲಾಯಿಸಲಿವೆ. ಮೊದಲಿಗೆ ಜನವರಿ 12 ರಂದು ಮಂಗಳನ ನೇರ ಸಂಚಾರ ಆರಂಭವಾಗಲಿದೆ. ಬಳಿಕ, ಜನವರಿ 14 ರಂದು ಸೂರ್ಯ ಸಂಕ್ರಮಣ ನಡೆಯಲಿದೆ. ಜನವರಿ 17 ರಂದು ಶನಿ ದೇವನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮತ್ತೊಂದೆಡೆ, ಜನವರಿ 18 ರಂದು ಗ್ರಹಗಳ ರಾಜಕುಮಾರನಾದ ಬುಧನ ನೇರ ಸಂಚಾರ ಆರಂಭವಾಗಲಿದೆ. ಬಳಿಕ ಜನವರಿ 22 ರಂದು ಸಂಪತ್ತು, ಐಶಾರಾಮಿ ಜೀವನಕಾರಕನಾದ ಶುಕ್ರನ ಸಂಕ್ರಮಣ ನಡೆಯಲಿದೆ. 


COMMERCIAL BREAK
SCROLL TO CONTINUE READING

ಈ ರೀತಿಯಾಗಿ ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರು ಬಿಕ್ಕಟ್ಟಿನ ಮೋಡಗಳ ಸುಳಿಯಲ್ಲಿ ಸಿಲುಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು, ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಪ್ಪಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ತಿಳಿಯೋಣ...


ಜನವರಿಯಲ್ಲಿ ಶನಿದೇವ ಸೇರಿದಂತೆ 5 ಪ್ರಮುಖ ಗ್ರಹಗಳ ರಾಶಿ ಬದಲಾವಣೆ, ಈ ರಾಶಿಯವರ ಮೇಲೆ ಬಿಕ್ಕಟ್ಟಿನ ಮೋಡಗಳು:-
ಮೇಷ ರಾಶಿ:

ಜನವರಿಯಲ್ಲಿ ಶನಿದೇವ ಸೇರಿದಂತೆ ಐದು ಪ್ರಮುಖ ಗ್ರಹಗಳ ಸಂಚಾರದ ಪರಿಣಾಮವಾಗಿ ಈ ರಾಶಿಯವರು ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಸಂಬಂಧಿಕರೊಂದಿಗೆ ವಿವಾದವನ್ನು ಹೊಂದುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದ್ದು ಆರ್ಥಿಕ ಸಂಕಷ್ಟ ಎದುರಾಗಬಹುದು. ಉದ್ಯೋಗಸ್ಥರು ತಮ್ಮ ಸಹೋದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಘರ್ಷಣೆ ಉಂಟಾಗಬಹುದು. ಕೌಟುಂಬಿಕ ಚಿಂತೆ ನಿಮ್ಮನ್ನು ಅತಿಯಾಗಿ ಕಾಡಲಿದ್ದು ಹಳೆಯ ಕಾಯಿಲೆಗಳು ಉಲ್ಬಣಿಸಬಹುದು. 


ಮೇಷ ರಾಶಿಯವರಿಗೆ ಪರಿಹಾರ: ಜನವರಿಯಲ್ಲಿ ಗ್ರಹ ಗೋಚಾರಗಳ ಅಶುಭ ಪರಿಣಾಮಗಳನ್ನು ತಪ್ಪಿಸಲು ಪ್ರತಿ ಮಂಗಳವಾರ ಸುಂದರಕಾಂಡವನ್ನು ಪಠಿಸಿ.


ಇದನ್ನೂ ಓದಿ- Grah Gochar 2023: ಜನವರಿಯಲ್ಲಿ ಗ್ರಹಗಳ ಸ್ಥಾನ ಬದಲಾವಣೆ, ಹೊಸ ವರ್ಷದ ಮೊದಲ ತಿಂಗಳು 5 ರಾಶಿಯವರಿಗೆ ಸಂಕಷ್ಟ


ಕರ್ಕಾಟಕ ರಾಶಿ:
ಜನವರಿಯಲ್ಲಿ ಗ್ರಹಗಳ ಸಂಚಾರದ ಪರಿಣಾಮವಾಗಿ ಈ ರಾಶಿಯವರು ವೈಯಕ್ತಿಕ ಜೀವನದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗಲಿದ್ದು ಮಾನಸಿಕ ಚಿಂತೆಗೆ ಕಾರಣವಾಗಬಹುದು. ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. ಆದಾಗ್ಯೂ, ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಯೋಚಿಸಿ ಖರ್ಚು ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಬಹುದು. ಎಂತಹದ್ದೇ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳಿತು. 


ಕರ್ಕಾಟಕ ರಾಶಿಯವರಿಗೆ ಪರಿಹಾರ: ಪ್ರತಿ ಶುಕ್ರವಾರ ಬಿಳಿ ವಸ್ತುಗಳನ್ನು ದಾನ ಮಾಡಿ.


ಕನ್ಯಾ ರಾಶಿ:
ಜನವರಿಯಲ್ಲಿ ಗ್ರಹಗಳ ಸಂಚಾರದಿಂದಾಗಿ ಕನ್ಯಾ ರಾಶಿಯವರು ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಇದರಿಂದ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.  ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ವೃತ್ತಿ ಬದುಕಿನಲ್ಲಿಯೂ ನಾನಾ ರೀತಿಯ ತೊಂದರೆಗಳು ಕಾಡಲಿದ್ದು ಅನಗತ್ಯ ಓಡಾಟ ಇರುತ್ತದೆ. 


ಕನ್ಯಾ ರಾಶಿಯವರಿಗೆ ಪರಿಹಾರ: ಸಂಕಷ್ಟಗಳಿಂದ ಹೊರಬರಲು ಪ್ರತಿ ಬುಧವಾರ ಹಸುವಿಗೆ ಹಸಿರು ಮೇವನ್ನು ನೀಡಿ.


ವೃಶ್ಚಿಕ ರಾಶಿ:
ಜನವರಲ್ಲಿ ಗ್ರಹ ಗೋಚಾರದ ಪರಿಣಾಮದಿಂದಾಗಿ ವೃಶ್ಚಿಕ ರಾಶಿಯವರು ಹೂಡಿಕೆಯಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಪೂರ್ವಿಕರ ಆಸ್ತಿ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಉದ್ಯೋಗವನ್ನು ಬದಲಾಯಿಸುವ ತಪ್ಪನ್ನು ಮಾಡಬೇಡಿ. ಇದರಿಂದ ಭಾರೀ  ನಷ್ಟವನ್ನು ಅನುಭವಿಸಬೇಕಾಗಬಹುದು. ಕೌಟುಂಬಿಕ ಕಲಹಗಳನ್ನು ತಪ್ಪಿಸಲು ಸಾಧ್ಯವಾದಷ್ಟು ವಾದವನ್ನು ತಪ್ಪಿಸಿ. 


ವೃಶ್ಚಿಕ ರಾಶಿಯವರಿಗೆ ಪರಿಹಾರ: ಈ ಮಾಸದಲ್ಲಿ ನೀವು ಗ್ರಹಗಳನ್ನು ಶಾಂತಗೊಳಿಸಿ, ಬಿಕ್ಕಟ್ಟಿನ ಕಾರ್ಮೋಡದಿಂದ ಹೊರಬರಲು ಪ್ರತಿದಿನ ತಾಮ್ರದ ಚೊಂಬಿನಲ್ಲಿ ನೀರು ತುಂಬಿ ಅದರಲ್ಲಿ ಬೆಲ್ಲವನ್ನು ಬೆರೆಸಿ. ಇದರ ನಂತರ ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.


ಇದನ್ನೂ ಓದಿ- Horoscope 2023: ಮುಂದಿನ ವರ್ಷ ಈ 5 ರಾಶಿಯವರಿಗೆ ಹೊಸ ಉದ್ಯೋಗ, ಪ್ರಮೋಷನ್ ಭಾಗ್ಯ!


ಕುಂಭ ರಾಶಿ:
ಜನವರಿಯಲ್ಲಿ ಶನಿ ಸಂಚಾರದಿಂದ ಈ ರಾಶಿಯವರಿಗೆ ಶನಿಯ ಸಾಡೇಸಾತಿಯ ಎರಡನೇ ಹಂತವು ಪ್ರಾರಂಭವಾಗಲಿದೆ, ಇದರಿಂದಾಗಿ ಈ ರಾಶಿಯವರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ. ಕೋಪವನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ನಿಮ್ಮ ವೃತ್ತಿಪರ ಜೀವನದಲ್ಲಿ ಕೆಲಸದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. 


ಕುಂಭ ರಾಶಿಯವರಿಗೆ ಪರಿಹಾರ: ಶನಿಯ ಸಾಡೇಸಾತಿಯ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರತಿ ಶನಿವಾರ ಹನುಮನ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾವನ್ನು ಪಠಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.