Horoscope 2023: ಮುಂದಿನ ವರ್ಷ ಈ 5 ರಾಶಿಯವರಿಗೆ ಹೊಸ ಉದ್ಯೋಗ, ಪ್ರಮೋಷನ್ ಭಾಗ್ಯ!

Luckiest Zodiac of 2023: ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷ ಕಳೆದು ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷದಲ್ಲಿ ಕೆಲವು ರಾಶಿಯವರಿಗೆ ವೃತ್ತಿರಂಗದ ದೃಷ್ಟಿಯಿಂದ ಬಹಳ ಅದೃಷ್ಟ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023 ಆರಂಭವಾಗುತ್ತಿದ್ದಂತೆ ಐದು ರಾಶಿಯವರಿಗೆ ಹೊಸ ಉದ್ಯೋಗ ಪಡೆಯುವ ಬಲವಾದ ಅವಕಾಶವಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...

Written by - Yashaswini V | Last Updated : Dec 20, 2022, 07:06 AM IST
  • ಹೊಸ ವರ್ಷ 2023ರಲ್ಲಿ ಕೆಲವು ರಾಶಿಯವರಿಗೆ ವೃತ್ತಿರಂಗದಲ್ಲಿ ಭಾರೀ ಯಶಸ್ಸು ಸಿಗಲಿದೆ ಎಂದು ಹೇಳಲಾಗುತ್ತಿದೆ.
  • ಹೊಸ ವರ್ಷದಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ಗ್ರಹಗಳ ರಾಜಕುಮಾರ ಬುಧರ ಸ್ಥಾನದಿಂದಾಗಿ ಐದು ರಾಶಿಯವರು ಉದ್ಯೋಗ, ವ್ಯವಹಾರದಲ್ಲಿ ಉನ್ನತ ಸ್ಥಾನಕ್ಕೇರುವರು ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Horoscope 2023: ಮುಂದಿನ ವರ್ಷ ಈ 5 ರಾಶಿಯವರಿಗೆ ಹೊಸ ಉದ್ಯೋಗ, ಪ್ರಮೋಷನ್ ಭಾಗ್ಯ! title=
Yearly Career Horoscope-2023

Luckiest Zodiac of 2023: ಹೊಸ ವರ್ಷದಲ್ಲಿ ಹೊಸ ಹೊಸ ಕನಸುಗಳನ್ನು ಕಾಣುವುದು ಸಾಮಾನ್ಯ. ವೈದಿಕ ಜ್ಯೋತಿಷ್ಯದ ಪ್ರಕಾರ, ಹೊಸ ವರ್ಷ 2023ರಲ್ಲಿ ಕೆಲವು ರಾಶಿಯವರಿಗೆ ವೃತ್ತಿರಂಗದಲ್ಲಿ ಭಾರೀ ಯಶಸ್ಸು ಸಿಗಲಿದೆ ಎಂದು ಹೇಳಲಾಗುತ್ತಿದೆ. ಹೊಸ ವರ್ಷದಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ಗ್ರಹಗಳ ರಾಜಕುಮಾರ ಬುಧರ ಸ್ಥಾನದಿಂದಾಗಿ ಐದು ರಾಶಿಯವರು ಉದ್ಯೋಗ, ವ್ಯವಹಾರದಲ್ಲಿ ಉನ್ನತ ಸ್ಥಾನಕ್ಕೇರುವರು ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಹೊಸ ವರ್ಷದಲ್ಲಿ ಈ  5 ರಾಶಿಯವರಿಗೆ ಹೊಸ ಉದ್ಯೋಗ, ಪ್ರಮೋಷನ್ ಭಾಗ್ಯ!
ಮೇಷ ರಾಶಿ: 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ 2023ರಲ್ಲಿ ಮೇಷ ರಾಶಿಯವರಿಗೆ ಸೂರ್ಯ, ಬುಧ ಮತ್ತು ಬೃಹಸ್ಪತಿ ಸಂಚಾರದ ಪರಿಣಾಮವಾಗಿ ವೃತ್ತಿ ರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆ ಇದೆ. ಈ ರಾಶಿಯವರು ಉದ್ಯೋಗ, ವ್ಯವಹಾರಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಬಿಗ್ ಪ್ಯಾಕೇಜ್‌ನೊಂದಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಹೊಸ ವರ್ಷವೂ ಹಲವು ವಿಷಯಗಳಲ್ಲಿ ಶುಭ ಎಂದು ಸಾಬೀತುಪಡಿಸಲಿದೆ. 2023ರಲ್ಲಿ ಈ ರಾಶಿಯ ಜನರು ತಮ್ಮ ವೃತ್ತಿ ರಂಗದಲ್ಲಿ ಭಾರೀ ಲಾಭ ಪಡೆಯಲಿದ್ದಾರೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ನಿಮ್ಮ ಮಕ್ಕಳೂ ಕೂಡ ನಿಮಗೆ ಸಂತೋಷವನ್ನು ತರಲಿದ್ದಾರೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಭಾಗ್ಯೋದಯವಾಗುವ ಸಮಯ.

ಇದನ್ನೂ ಓದಿ- Sun Saturn Transit 2023: ಒಂದೇ ರಾಶಿಯಲ್ಲಿ ಸೂರ್ಯ-ಶನಿ, ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ

ತುಲಾ ರಾಶಿ:
ಮುಂದಿನ ವರ್ಷ ಉದ್ಯೋಗ ಕ್ಷೇತ್ರದ ದೃಷ್ಟಿಯಿಂದ ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಈ ವರ್ಷ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗ್ಲೈದೆ. ಈಗಾಗಲೇ ಉತ್ತಮ ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಜೊತೆಗೆ ಕೈ ತುಂಬಾ ಸಂಬಳ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಧನು ರಾಶಿ: 
ಹೊಸ ವರ್ಷದ ಭವಿಷ್ಯದ ಪ್ರಕಾರ, ಧನು ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್, ಬಿಗ್ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ. ಪಾಲುದಾರಿಕೆಯ ವ್ಯಾಪಾರಸ್ಥರಿಗೆ ಭಾರೀ ಲಾಭವಾಗುವ ಸಾಧ್ಯತೆ ಇದೆ. ಇದಲ್ಲದೆ, ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಈ ಸಮಯದಲ್ಲಿ ನೀವು ಬಯಸಿದ ಉದ್ಯೋಗ ಸಿಗಲಿದೆ. 

ಇದನ್ನೂ ಓದಿ- Guru Gochar 2023: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ಬೃಹಸ್ಪತಿ

ಕುಂಭ ರಾಶಿ:
2023ರಲ್ಲಿ ಕುಂಭ ರಾಶಿಯವರಿಗೆ ಆದಾಯದ ಹೊಸ ಮೂಲಗಳು ಹೆಚ್ಚಾಗಲಿದ್ದು ಭಾರೀ ಹಣಕಾಸಿನ ಪ್ರಯೋಜನವಾಗಲಿದೆ. ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದ್ದು ಇದರಿಂದ ಬಂಪರ್ ಲಾಭವಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದರಿಂದ ನೀವು ಮಾನಸಿಕವಾಗಿ ತುಂಬಾ ಉಲ್ಲಾಸ-ಉತ್ಸಾಹದಿಂದ ಇರುತ್ತೀರಿ. ಇದು ನಿಮ್ಮನ್ನು ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News