Trigrahi Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ದ್ವಾದಶ ರಾಶಿಗಳ ಮೇಲೆ ಶುಭ ಅಶುಭ ಪರಿಣಾಮವನ್ನು ಉಂಟು ಮಾಡುತ್ತದೆ. ಯಾವುದೇ ಒಂದು ರಾಶಿಚಕ್ರದಲ್ಲಿ ಮೂರು ಗ್ರಹಗಳು ಒಟ್ಟಿಗೆ ಸೇರಿದಾಗ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. 


COMMERCIAL BREAK
SCROLL TO CONTINUE READING

ನಿನ್ನೆಯಷ್ಟೇ (ಡಿಸೆಂಬರ್ 27, 2023) ಗ್ರಹಗಳ ಕಮಾಂಡರ್ ಮಂಗಳ ಗ್ರಹವು ಧನು ರಾಶಿಯನ್ನು ಪ್ರವೇಶಿಸಿದೆ. ಇದಕ್ಕೂ ಮೊದಲೇ ಈ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯದೇವ ಹಾಗೂ ಗ್ರಹಗಳ ರಾಜಕುಮಾರ ಬುಧ ಉಪಸ್ಥಿತರಿದ್ದರು. ಹೀಗಾಗಿ  ಧನು ರಾಶಿಯಲ್ಲಿ ಮಂಗಳ, ಸೂರ್ಯ ಮತ್ತು ಬುಧ ಸಂಯೋಜನೆಯಿಂದ ಶುಭಕರ ತ್ರಿಗ್ರಾಹಿ ಯೋಗ ನಿರ್ಮಾಣವಾಗಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಮೂರು ರಾಶಿಯವರ ದೃಷ್ಟಿಯಿಂದ ಇದನ್ನು ತುಂಬಾ ಶುಭಕರ ಎಂದು ಹೇಳಲಾಗುತ್ತಿದೆ. 


ಧನು ರಾಶಿಯಲ್ಲಿ ಮಂಗಳ, ಸೂರ್ಯ ಮತ್ತು ಬುಧ ಯುತಿಯಿಂದ ನಿರ್ಮಾಣವಾಗಿರುವ ಅತ್ಯಂತ ಮಂಗಳಕರ ತ್ರಿಗ್ರಾಹಿ ಯೋಗದ ಶುಭ ಪರಿಣಾಮದಿಂದಾಗಿ ಈ ರಾಶಿಯವರ ಜೀವನದಲ್ಲಿ ಹೊಸ ವರ್ಷದಲ್ಲಿ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿವೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- ಶನಿ ಹಿಮ್ಮುಖ ಚಲನೆ: 2024ರಲ್ಲಿ ಹೆಚ್ಚಾಗಲಿದೆ ಈ ರಾಶಿಯವರ ತೊಂದರೆ


ತ್ರಿಗ್ರಾಹಿ ಯೋಗ: ಹೊಸ ವರ್ಷದಲ್ಲಿ ಈ ಮೂರು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ:-
ಮಿಥುನ ರಾಶಿ: 

ತ್ರಿಗ್ರಾಹಿ ಯೋಗವು ಮಿಥುನ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಉದ್ಯೋಗಸ್ತರಿಗೆ ಪ್ರಮೋಷನ್ ಸಾಧ್ಯತೆ ಇದ್ದರೆ, ವ್ಯಾಪಾರಸ್ಥರೂ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ಪೂರ್ವಿಕರ ಆಸ್ತಿಯಿಂದಲೂ ಲಾಭವಾಗಲಿದೆ. 


ತುಲಾ ರಾಶಿ: 
ಧನು ರಾಶಿಯಲ್ಲಿ ನಿರ್ಮಾಣವಾಗಿರುವ ಶುಭ ತ್ರಿಗ್ರಾಹಿ ಯೋಗದ ಪರಿಣಾಮವಾಗಿ ತುಲಾ ರಾಶಿಯವರು ಉದ್ಯೋಗ ರಂಗದಲ್ಲಿ ಪ್ರಗತಿಯನ್ನು ಕಾಣುವರು. ಮಾತ್ರವಲ್ಲ, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ವ್ಯಾಪಾಸ್ಥರು ಈ ಸಮಯದಲ್ಲಿ ಬಂಪರ್ ಹಣಕಾಸಿನ ಲಾಭವನ್ನು ಅನುಭವಿಸುವರು. 


ಇದನ್ನೂ ಓದಿ- ಈ ರಾಶಿಯವರಿಗೆ ವಿಶೇಷ ರಾಜಯೋಗ ! ನಿಮ್ಮ ಜೀವನದ ಮುಂದಿರುವುದು ಬರೀ ಗೆಲುವಿನ ಹಾದಿ! ಇನ್ನು ನಿಮಗಿರುವುದಿಲ್ಲ ಹಣದ ಕೊರತೆ 


ಧನು ರಾಶಿ: 
ಸ್ವ ರಾಶಿಯಲ್ಲಿ ತ್ರಿಗ್ರಾಹಿ ಯೋಗದ ಫಲವಾಗಿ ಧನು ರಾಶಿಯವರು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಧೈರ್ಯ, ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ವೃತ್ತಿ ವ್ಯವಹಾರದಲ್ಲಿ ಅದ್ಭುತ ಯಶಸ್ಸನ್ನು ಕಾಣುವಿರಿ. ವ್ಯಾಪಾರ ವೃದ್ಧಿಯಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.